kn_tw/bible/other/lamp.md

28 lines
2.9 KiB
Markdown

# ದೀಪ, ದೀಪಗಳು
## ಪದದ ಅರ್ಥವಿವರಣೆ:
“ದೀಪ” ಎನ್ನುವ ಪದವು ಸಾಧಾರಣವಾಗಿ ಬೆಳಕನ್ನು ಕೊಡುವ ಯಾವುದಾದರೊಂದನ್ನು ಸೂಚಿಸುತ್ತದೆ. ಸತ್ಯವೇದ ಕಾಲಗಳಲ್ಲಿ ಉಪಯೋಗಿಸಿದ ದೀಪಗಳು ಸಹಜವಾಗಿ ಎಣ್ಣೆಯ ದೀಪಗಳಾಗಿದ್ದವು.
ಸತ್ಯವೇದ ಕಾಲಗಳಲ್ಲಿ ಬಳಸಿದ ದೀಪದ ಪ್ರಕಾರವು ಇಂಧನ ಮೂಲವನ್ನು ಹೊಂದಿರುವ ಸಣ್ಣ ಪಾತ್ರೆಯಾಗಿದೆ, ಸಾಮಾನ್ಯವಾಗಿ ಎಣ್ಣೆಯು ಉರಿಯುವಾಗ ಬೆಳಕನ್ನು ನೀಡುತ್ತದೆ.
* ಸಾಧಾರಣವಾದ ಎಣ್ಣೆಯ ದೀಪಗಳು ಸಹಜವಾಗಿ ಮಣ್ಣಿನ ಬಟ್ಟಲುಗಳಾಗಿರುತ್ತವೆ ಮತ್ತು ಅದರಲ್ಲಿ ಆಲಿವ್ ಎಣ್ಣೆಯನ್ನು ಹಾಕಿರುತ್ತಾರೆ, ಬೆಳಕು ಕೊಡಲು ಉರಿಯುವುದಕ್ಕೆ ಆ ಎಣ್ಣೆಯಲ್ಲಿ ಬತ್ತಿಯನ್ನು ಇಟ್ಟಿರುತ್ತಾರೆ.
* ಕೆಲವೊಂದು ದೀಪಗಳಿಗೆ, ಬಟ್ಟಲು ಅಥವಾ ಜಾರ್ ಎನ್ನುವುದು ಅಂಡಾಕಾರದಲ್ಲಿರುತ್ತದೆ, ಬತ್ತಿಯನ್ನು ಹಿಡಿದಿರಲು ಒಂದು ಕಡೆಗೆ ಹತ್ತಿರವಾಗಿರುತ್ತದೆ.
* ಎಣ್ಣೆಯ ದೀಪವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗುವರು ಅಥವಾ ಒಂದು ಸ್ತಂಭದ ಮೇಲೆ ಇಟ್ಟಿರುವರು, ಇದರಿಂದ ಅದರ ಬೆಳಕು ಕೋಣೆ ಅಥವಾ ಮನೆಯನ್ನು ತುಂಬುತ್ತದೆ.
* ವಾಕ್ಯದಲ್ಲಿ ಬೆಳಕಿಗೆ ಮತ್ತು ಜೀವನಕ್ಕೆ ಗುರುತುಗಳಾಗಿ ಅನೇಕವಾದ ಅಲಂಕಾರಿಕ ವಿಧಾನಗಳಲ್ಲಿ ದೀಪಗಳು ಉಪಯೋಗಿಸಲ್ಪಟ್ಟಿವೆ.
(ಈ ಪದಗಳನ್ನು ಸಹ ನೋಡಿರಿ : [ದೀಪಸ್ತಂಭ](../other/lampstand.md), [ಜೀವನ](../kt/life.md), [ಬೆಳಕು](../other/light.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.11:34-36](rc://*/tn/help/1ki/11/34)
* [ವಿಮೋ.25:3-7](rc://*/tn/help/exo/25/03)
* [ಲೂಕ.08:16-18](rc://*/tn/help/luk/08/16)
* [ಮತ್ತಾಯ.05:15-16](rc://*/tn/help/mat/05/15)
* [ಮತ್ತಾಯ.06:22-24](rc://*/tn/help/mat/06/22)
* [ಮತ್ತಾಯ.25:1-4](rc://*/tn/help/mat/25/01)
## ಪದ ಡೇಟಾ:
* Strong's: H3940, H3974, H4501, H5215, H5216, G2985, G3088