kn_tw/bible/other/olive.md

27 lines
3.1 KiB
Markdown

# ಆಲೀವ್ (ಎಣ್ಣೆ ಮರದ ಹಣ್ಣು), ಆಲೀವ್.ಗಳು (ಎಣ್ಣೆ ಮರದ ಹಣ್ಣುಗಳು)
## ಪದದ ಅರ್ಥವಿವರಣೆ:
ಆಲೀವ್ (ಎಣ್ಣೆ ಮರದ ಹಣ್ಣು) ಎನ್ನುವುದು ಚಿಕ್ಕದಾಗಿದ್ದು ಅಂಡಾಕಾರದ ಆಕಾರದಲ್ಲಿರುವ ಆಲೀವ್ ಮರದ ಹಣ್ಣಾಗಿರುತ್ತದೆ, ಇದು ಹೆಚ್ಚಾಗಿ ಮೆಡಿಟರೇನಿಯನ್ ಸಮುದ್ರದ ಸುತ್ತಮುತ್ತ ಪ್ರಾಂತ್ಯಗಳಲ್ಲಿ ಬೆಳೆಯುತ್ತದೆ.
* ಆಲೀವ್ ಮರಗಳು (ಎಣ್ಣೆ ಮರಗಳು) ಯಾವಾಗಲೂ ಹಚ್ಚ ಹಸುರಾಗಿದ್ದು ತೆಳುವಾದ ಬಿಳಿಯ ಹೂಗಳನ್ನು ಹೊಂದಿರುವ ಒಂದು ವಿಧವಾದ ಚಿಕ್ಕ ಪೊದೆಯ ಗಿಡವಾಗಿರುತ್ತದೆ. ಅವು ಬಿಸಿ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತವೆ ಮತ್ತು ನೀರು ಕಡಿಮೆಯಾಗಿದ್ದರೂ ಚೆನ್ನಾಗಿ ಬದುಕುತ್ತವೆ.
* ಆಲೀವ್ ಮರದ ಹಣ್ಣು ಪ್ರಾರಂಭದಲ್ಲಿ ಹಚ್ಚು ಹಸುರಾಗಿರುತ್ತದೆ ಮತ್ತು ಅವುಗಳು ಹಣ್ಣುಗಳಾಗುತ್ತಿರುವಾಗ ಕಪ್ಪಾಗಿ ಮಾರ್ಪಾಟು ಹೊಂದುತ್ತವೆ. ಆಲೀವ್ ಹಣ್ಣುಗಳು ಆಹಾರಕ್ಕೆ ಪ್ರಯೋಜನವಾಗಿರುತ್ತವೆ ಮತ್ತು ಅವುಗಳಿಂದ ತೆಗೆಯುವ ಎಣ್ಣೆಯು ಪ್ರಯೋಜನಕರವಾಗಿರುತ್ತವೆ.
* ಆಲೀವ್ ಎಣ್ಣೆಯನ್ನು ಬುಡ್ಡಿಗಳಲ್ಲಿ ಹಾಕಿಕೊಂಡು ಅಡಿಗೆಗೆ ಬಳಸುತ್ತಾರೆ ಮತ್ತು ಧಾರ್ಮಿಕ ಸಂಬಂಧವಾದ ಸಮಾರಂಭಗಳಿಗೆ ಉಪಯೋಗಿಸುತ್ತಾರೆ.
* ಸತ್ಯವೇದದಲ್ಲಿ ಆಲೀವ್ ಮರಗಳು ಮತ್ತು ಕೊಂಬೆಗಳು ಕೆಲವೊಂದುಬಾರಿ ಜನರನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲಾಗಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ದೀಪ](../other/lamp.md), [ಸಮುದ್ರ](../names/mediterranean.md), [ಎಣ್ಣೆ ಮರಗಳ ಬೆಟ್ಟ](../names/mountofolives.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.27:28-29](rc://*/tn/help/1ch/27/28)
* [ಧರ್ಮೋ.06:10-12](rc://*/tn/help/deu/06/10)
* [ವಿಮೋ.23:10-11](rc://*/tn/help/exo/23/10)
* [ಆದಿ.08:10-12](rc://*/tn/help/gen/08/10)
* [ಯಾಕೋ.03:11-12](rc://*/tn/help/jas/03/11)
* [ಲೂಕ.16:5-7](rc://*/tn/help/luk/16/05)
* [ಕೀರ್ತನೆ.052:8-9](rc://*/tn/help/psa/052/008)
## ಪದ ಡೇಟಾ:
* Strong's: H2132, H3323, H8081, G65, G1636, G1637, G2565