kn_tw/bible/other/lawful.md

11 KiB

ಕಾನೂನುಬದ್ಧ, ಕಾನೂನುಬದ್ಧವಲ್ಲದ, ಕಾನೂನುಬದ್ಧ ಅಲ್ಲ , ಕಾನೂನು ಬಾಹಿರ, ಅಧರ್ಮ

ಪದದ ಅರ್ಥವಿವರಣೆ:

“ಕಾನೂನುಬದ್ಧ” ಎನ್ನುವ ಪದವು ಕಾನಾನು ಪ್ರಕಾರವಾಗಿ ಅಥವಾ ಇತರ ಅಗತ್ಯತೆಯ ಪ್ರಕಾರವಾಗಿ ಅನುಮತಿ ಹೊಂದುವ ಯಾವುದಾದರೊಂದನ್ನು ಸೂಚಿಸುತ್ತದೆ. ಈ ಪದಕ್ಕೆ “ಕಾನೂನುರಹಿತ” ಎಂದು ವಿರುದ್ಧಾತ್ಮಕ ಪದವಾಗಿರುತ್ತದೆ, ಇದಕ್ಕೆ “ಕಾನೂನುಬದ್ಧವಲ್ಲದ” ಎಂದರ್ಥ.

  • ಸತ್ಯವೇದದಲ್ಲಿ ದೇವರ ನೈತಿಕತೆಯ ಆಜ್ಞೆಯಿಂದ ಅಥವಾ ಮೋಶೆಯ ಧರ್ಮಶಾಸ್ತ್ರದಿಂದ ಮತ್ತು ಇತರ ಯೆಹೂದ್ಯ ಕಾನೂನುಗಳಿಂದ ಅನುಮತಿ ಕೊಡಲ್ಪಟ್ಟಿರುವುದೇ “ಕಾನೂನುಬದ್ಧ”ವಾಗಿರುತ್ತದೆ, “ಕಾನೂನುರಹಿತವಾದದ್ದು” ಯಾವುದಾದರೂ ಆ ಕಾನೂನುಗಳಿಂದ “ಅನುಮತಿ ಹೊಂದಿರುವುದಿಲ್ಲ”.
  • “ಕಾನೂನುಬದ್ಧವಾಗಿ” ಯಾವುದಾದರೊಂದನ್ನು ಮಾಡುವುದು ಎಂದರೆ ಅದನ್ನು “ಸರಿಯಾದ ವಿಧಾನದಲ್ಲಿ” ಮಾಡುವುದು ಎಂದರ್ಥ ಅಥವಾ “ಸರಿಯಾದ ಪದ್ಧತಿಯಲ್ಲಿ ಮಾಡುವುದು” ಎಂದರ್ಥ.
  • ಯೆಹೂದ್ಯ ಕಾನೂನುಗಳಲ್ಲಿ ಕಾನೂನುಬದ್ಧವಾಗಿರುವುದು ಅಥವಾ ಕಾನೂನುರಹಿತವಲ್ಲದ್ದು ಎಂದು ಪರಿಗಣಿಸಿದ ಅನೇಕ ವಿಷಯಗಳು ಒಬ್ಬರಿಗೊಬ್ಬರು ಪ್ರೀತಿಸುವುದರ ಕುರಿತಾಗಿ ದೇವರ ನ್ಯಾಯಶಾಸನಗಳೊಂದಿಗಿರುವ ಒಪ್ಪಂದದಲ್ಲಿಲ್ಲ.
  • ಸಂದರ್ಭಾನುಸಾರವಾಗಿ, “ಕಾನೂನುಬದ್ಧ” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನದಲ್ಲಿ “ಅನುಮತಿಸಿದೆ” ಅಥವಾ “ದೇವರ ಧರ್ಮಶಾಸ್ತ್ರದ ಪ್ರಕಾರ” ಅಥವಾ “ನಮ್ಮ ಕಾನೂನುಗಳನ್ನು ಅನುಸರಿಸುವುದರ ಮೂಲಕ” ಅಥವಾ “ಸರಿಯಾಗಿ” ಅಥವಾ "ಯೋಗ್ಯವಾಗಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಇದು ಕಾನೂನುಬದ್ಧವೊ?” ಎನ್ನುವ ಮಾತನ್ನು “ನಮ್ಮ ಕಾನೂನುಗಳು ಅನುಮತಿ ಕೊಡುತ್ತಿದ್ದವೋ?” ಅಥವಾ “ಯಾವುದಾದರೊಂದರ ವಿಷಯವನ್ನು ನಮ್ಮ ಕಾನೂನುಗಳು ಅನುಮತಿಸುತ್ತವೋ?” ಎಂದೂ ಅನುವಾದ ಮಾಡಬಹುದು.

“ಕಾನೂನುರಹಿತ” ಮತ್ತು “ಕಾನೂನುವಲ್ಲದ” ಎನ್ನುವ ಪದಗಳು ಕಾನೂನು ಉಲ್ಲಂಘಿಸಿ ಮಾಡುವ ಕ್ರಿಯೆಗಳನ್ನು ವಿವರಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತವೆ.

  • ಹೊಸ ಒಡಂಬಡಿಕೆಯಲ್ಲಿ “ಕಾನೂನಲ್ಲದ” ಎನ್ನುವ ಪದವು ದೇವರ ಆಜ್ಞೆಗಳನ್ನು ಉಲ್ಲಂಘಿಸುವುದನ್ನು ಮಾತ್ರವೇ ಸೂಚಿಸುವುದಕ್ಕೆ ಉಪಯೋಗಿಸದೇ, ಯೆಹೂದ್ಯರು ಮಾಡಿದ ನಿಯಮಗಳನ್ನು ಅಥವಾ ಕಾನೂನುಗಳನ್ನು ಉಲ್ಲಂಘಿಸುವುದನ್ನೂ ಸೂಚಿಸುತ್ತವೆ.
  • ಅನೇಕ ವರ್ಷಗಳಾದ ಮೇಲೆ, ಯೆಹೂದ್ಯರು ತಮಗೆ ದೇವರು ಕೊಟ್ಟ ಕಾನೂನುಗಳನ್ನು ಸೇರಿಸಿರುತ್ತಾರೆ. ಯೆಹೂದ್ಯರ ನಾಯಕರು ತಾವು ಮಾಡಿದ ಕಾನೂನುಗಳಿಗೆ ನಿಶ್ಚಯಪಡಿಸದಿದ್ದರೆ ಅವರು ಅದನ್ನು “ಕಾನೂನುರಹಿತ” ಎಂದು ಕರೆಯುತ್ತಾರೆ.
  • ಯೇಸು ಮತ್ತು ತನ್ನ ಶಿಷ್ಯರು ಸಬ್ಬತ್ ದಿನದಂದು ಕಾಳುಗಳನ್ನು ಕಿತ್ತುಕೊಳ್ಳುವಾಗ, ಫರಿಸಾಯರು ಆವರು ಮಾಡುತ್ತಿರುವದನ್ನು ‘ಕಾನೂನುರಹಿತವೆಂದು” ಆರೋಪಿಸಿದರು, ಯಾಕಂದರೆ ಆ ದಿನದಂದು ಅದನ್ನು ಮಾಡುವುದು ಯೆಹೂದ್ಯರ ಕಾನೂನುಗಳನ್ನು ಉಲ್ಲಂಘನೆ ಮಾದುವುದಾಗಿರುತ್ತದೆ.
  • ಅಪವಿತ್ರವಾದ ಆಹಾರ ಪದಾರ್ಥಗಳನ್ನು ತಿನ್ನುವುದು “ಕಾನೂನುರಹಿತವಾದದ್ದು” ಎಂದು ಪೇತ್ರನು ಹೇಳಿದಾಗ, ಆತನ ಅರ್ಥವೇನೆಂದರೆ ಆತನು ಆಹಾರ ಪದಾರ್ಥಗಳನ್ನು ತಿಂದಾಗ, ದೇವರು ಇಸ್ರಾಯೇಲ್ಯರಿಗೆ ಕೆಲವೊಂದು ಆಹಾರ ಪದಾರ್ಥಗಳನ್ನು ತಿನ್ನಬಾರದೆಂದು ಹೇಳಿದವುಗಳ ಕುರಿತಾಗಿ ಕೊಟ್ಟ ಕಾನೂನುಗಳನ್ನು ಆತನು ಉಲ್ಲಂಘನೆ ಮಾಡುತ್ತಿದ್ದಾನೆಂದು ಅದರ ಅರ್ಥವಾಗಿರುತ್ತದೆ.

“ಕಾನೂನುರಹಿತ” ಎನ್ನುವ ಪದವು ಒಬ್ಬ ವ್ಯಕ್ತಿ ಧರ್ಮಶಾಸ್ತ್ರಕ್ಕೆ ಅಥವಾ ನಿಯಮಗಳಿಗೆ ವಿಧೇಯನಾಗದ ವ್ಯಕ್ತಿಯನ್ನು ವಿವರಿಸುತ್ತದೆ. ಒಂದು ದೇಶವು ಅಥವಾ ಜನರ ಗುಂಪು “ಕಾನೂನುರಹಿತವಾದ” ಸ್ಥಿತಿಯಲ್ಲಿದ್ದಾಗ, ಆ ದೇಶದಲ್ಲಿ ಅವಿಧೇಯತೆಯು, ತಿರಸ್ಕಾರವು, ಅನೈತಿಕತೆಯು ವ್ಯಾಪಕವಾಗಿರುತ್ತದೆ.

  • ಕಾನೂನುರಹಿತವಾದ ಒಬ್ಬ ವ್ಯಕ್ತಿ ತಿರಸ್ಕಾರ ಮಾಡುವವನಾಗಿ, ದೇವರ ಧರ್ಮಶಾಸ್ತ್ರಕ್ಕೆ (ಅಥವಾ ಆಜ್ಞೆಗಳಿಗೆ) ಅವಿಧೇಯನಾಗಿರುತ್ತಾನೆ.
  • ಅಂತ್ಯ ದಿನಗಳಲ್ಲಿ “ಅಧರ್ಮ ಪುರುಷನು” ಅಥವಾ “ಕಾನೂನುರಹಿತವಾದ ವ್ಯಕ್ತಿ” ಬರುತ್ತಾನೆಂದು ಅಪೊಸ್ತಲನಾದ ಪೌಲನು ಬರೆದಿದ್ದಾನೆ, ಇವನು ಅನೇಕ ದುಷ್ಟ ಕಾರ್ಯಗಳನ್ನು ಮಾಡುವುದಕ್ಕೆ ಸೈತಾನನಿಂದ ಪ್ರಭಾವಿಸಲ್ಪಡುತ್ತಾನೆ.

ಅನುವಾದ ಸಲಹೆಗಳು:

  • “ಕಾನೂನಲ್ಲದ” ಎನ್ನುವ ಮಾತನ್ನು “ಕಾನೂನುರಹಿತವಾದ” ಅಥವಾ “ಕಾನೂನು ಉಲ್ಲಂಘಿಸುವ” ಎನ್ನುವ ಅರ್ಥಗಳು ಬರುವ ಮಾತುಗಳನ್ನು ಉಪಯೋಗಿಸಿ ಅನುವಾದ ಮಾಡಬಹುದು.
  • “ಕಾನೂನುರಹಿತ” ಎನ್ನುವ ಮಾತನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ, “ಅನುಮತಿ ಹೊಂದಿರುವುದಿಲ್ಲ” ಅಥವಾ “ದೇವರ ಧರ್ಮಶಾಸ್ತ್ರಾನುಸಾರವಲ್ಲದ” ಅಥವಾ “ನಮ್ಮ ಕಾನೂನುಗಳಿಗೆ ಸರಿಹೊಂದದ” ಎನ್ನುವ ಪದಗಳನ್ನು ಸೇರಿಸಬಹುದು.
  • “ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ” ಎನ್ನುವ ಮಾತಿಗೆ “ಕಾನೂನುರಹಿತ” ಎನ್ನುವ ಒಂದೇ ಅರ್ಥವನ್ನು ಹೊಂದಿರುತ್ತದೆ.
  • “ಧರ್ಮರಹಿತ” ಎನ್ನುವ ಮಾತನ್ನು “ತಿರಸ್ಕಾರ ಮಾಡುವುದು” ಅಥವಾ “ಅವಿಧೇಯನು” ಅಥವಾ “ಧರ್ಮವನ್ನು ಉಲ್ಲಂಘಿಸುವವನು” ಎಂದೂ ಅನುವಾದ ಮಾಡಬಹುದು.
  • “ಅಧರ್ಮ” ಎನ್ನುವ ಮಾತನ್ನು “ಯಾವ ಕಾನೂನುಗೆ ವಿಧೇಯತೆ ತೋರಿಸಿದ” ಅಥವಾ “(ದೇವರ ಧರ್ಮಶಾಸ್ತ್ರ ವಿರುದ್ಧವಾಗಿ) ತಿರಸ್ಕಾರ ಮಾಡುವುದು” ಎಂದೂ ಅನುವಾದ ಮಾಡಬಹುದು.
  • “ಅಧರ್ಮ ಪುರುಷ” ಎನ್ನುವ ಮಾತನ್ನು “ಧರ್ಮಶಾಸ್ತ್ರದಲ್ಲಿರುವ ಯಾವುದಕ್ಕೂ ವಿಧೇಯನಾಗದ ಪುರುಷ” ಅಥವಾ “ದೇವರ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ತಿರಸ್ಕಾರ ಮಾಡುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • ಒಂದುವೇಳೆ ಸಾಧ್ಯವಾದರೆ ಈ ಮಾತಿನಲ್ಲಿರುವ “ಧರ್ಮ” ಎನ್ನುವ ಪರಿಕಲ್ಪನೆಯನ್ನು ಇಟ್ಟುಕೊಂಡಿರುವುದು ಪ್ರಾಮುಖ್ಯ.
  • “ಕಾನೂನಲ್ಲದ” ಎನ್ನುವ ಪದಕ್ಕಿರುವ ಅರ್ಥವು ಈ ಪದದಲ್ಲಿರುವ ಅರ್ಥಕ್ಕೂ ತುಂಬಾ ವ್ಯತ್ಯಾಸವಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಧರ್ಮ, ಕಾನೂನು, ಮೋಶೆ, ಸಬ್ಬತ್)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H6530, G111, G113, G266, G458, G459, G1832, G3545