kn_tw/bible/other/know.md

7.1 KiB

ತಿಳಿಯಿರಿ, ಜ್ಞಾನ, ಅಜ್ಞಾತ, ಪ್ರತ್ಯೇಕಿಸು

ಪದದ ಅರ್ಥವಿವರಣೆ:

“ತಿಳಿಯಿರಿ” ಎನ್ನುವ ಪದಕ್ಕೆ ಏನಾದರೊಂದು ವಿಷಯವನ್ನು ಅರ್ಥ ಮಾಡಿಕೊಳ್ಳುವುದು ಅಥವಾ ಸತ್ಯದ ಕುರಿತಾದ ತಿಳಿದುಕೊಂಡಿರುವುದು ಎಂದರ್ಥ. “ತಿಳಿಯುವಂತೆ ಮಾಡು” ಎನ್ನುವ ಮಾತು ಮಾಹಿತಿ ಹೇಳುವುದೆನ್ನುವ ಅರ್ಥ ಬರುವ ಮಾತಾಗಿರುತ್ತದೆ.

  • “ಜ್ಞಾನ” ಎನ್ನುವ ಪದವು ಜನರಿಗೆ ಗೊತ್ತಿರುವ ಮಾಹಿತಿಯನ್ನು ಸೂಚಿಸುತ್ತದೆ. ಇದು ಭೌತಿಕವಾದ ಮತ್ತು ಆತ್ಮೀಯಕವಾದ ಪ್ರಪಂಚದಲ್ಲಿನ ಸಂಗತಿಗಳನ್ನು ತಿಳಿದುಕೊಳ್ಳುವುದನ್ನು ಸೂಚಿಸುತ್ತದೆ.
  • ದೇವರ “ಕುರಿತಾಗಿ ತಿಳಿದುಕೋ” ಎನ್ನುವುದಕ್ಕೆ ದೇವರು ನಮಗೆ ತೋರಿಸಿಕೊಂಡಿರುವವುಗಳಿಂದ ಆತನ ಕುರಿತಾಗಿ ಸತ್ಯಾಂಶಗಳನ್ನು ತಿಳಿದುಕೊಳ್ಳುವುದು ಎಂದರ್ಥ.
  • ದೇವರನ್ನು “ತಿಳಿಯಿರಿ’ ಎನ್ನುವುದಕ್ಕೆ ಆತನೊಂದಿಗೆ ಸಂಬಂಧವನ್ನು ಹೊಂದಿರು ಎಂದರ್ಥ. ಇದು ಜನರ ಕುರಿತಾಗಿ ತಿಳಿದುಕೊಳ್ಳುವುದರ ವಿಷಯವಾಗಿ ಅನ್ವಯಿಸಲ್ಪಡುತ್ತದೆ.
  • ದೇವರ ಚಿತ್ತವನ್ನು ತಿಳಿದುಕೊಳ್ಳುವುದು ಎಂದರೆ ಆತನು ಆಜ್ಞಾಪಿಸದವುಗಳ ವಿಷಯದಲ್ಲಿ ಎಚ್ಚರವಾಗಿರುವುದು ಎಂದರ್ಥ, ಅಥವಾ ಒಬ್ಬ ವ್ಯಕ್ತಿ ಏನು ಮಾಡಬೇಕೆಂದು ಆತನು ಬಯಸಿರುತ್ತಾನೆನ್ನುವುದನ್ನು ಅರ್ಥಮಾಡಿಕೊಳ್ಳುವುದು ಎಂದರ್ಥ.
  • “ಧರ್ಮಶಾಸ್ತ್ರವನ್ನು ತಿಳಿಯಿರಿ” ಎಂದರೆ ದೇವರು ಆಜ್ಞಾಪಿಸಿದವುಗಳಲ್ಲಿ ಎಚ್ಚರವಾಗಿರುವುದು ಅಥವಾ ಆತನು ಮೋಶೆಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ ಏನೇನು ಆಜ್ಞಾಪಿಸಿದ್ದಾನೋ ಎಂದು ಅರ್ಥಮಾಡಿಕೊಳ್ಳುವುದು ಎಂದರ್ಥ.
  • ಕೆಲವೊಂದುಬಾರಿ “ಜ್ಞಾನ" ಎನ್ನುವ ಪದಕ್ಕೆ ಪರ್ಯಾಯ ಪದವನ್ನಾಗಿ “ಜ್ಞಾನ” ಎಂದು ಉಪಯೋಗಿಸಲಾಗಿರುತ್ತದೆ, ಇದರಲ್ಲಿ ದೇವರಿಗೆ ಮೆಚ್ಚಿಗೆಯಾದ ವಿಧಾನದಲ್ಲಿ ಜೀವಿಸುವುದು ಎಂದೂ ಒಳಗೊಂಡಿರುತ್ತದೆ.
  • “ದೇವರ ಜ್ಞಾನ” ಎನ್ನುವ ಮಾತು ಕೆಲವೊಂದುಬಾರಿ ಅದಕ್ಕೆ ಪರ್ಯಾಯ ಮಾತಾಗಿ “ಯೆಹೋವನ ಭಯ” ಎಂದು ಹೇಳಲ್ಪಟ್ಟಿದೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ತಿಳಿಯಿರಿ" ಎನ್ನುವ ಪದವನ್ನು ಅನುವಾದ ಮಾಡುವ ವಿಧಾನದಲ್ಲಿ “ಅರ್ಥಮಾಡಿಕೋ” ಅಥವಾ “ಅದರೊಂದಿಗೆ ಪರಿಚಿತವಾಗು” ಅಥವಾ “ಎಚ್ಚರವಾಗಿರು” ಅಥವಾ “ಅದರೊಂದಿಗೆ ಗುರುತನ್ನು ಹೊಂದು” ಅಥವಾ “ಅದರೊಂದಿಗೆ ಸಂಬಂಧದಲ್ಲಿರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಕೆಲವೊಂದು ಭಾಷೆಗಳಲ್ಲಿ “ತಿಳಿ” ಎನ್ನುವ ಪದಕ್ಕೆ ಎರಡೆರಡು ಪದಗಳಿರುತ್ತವೆ, ಅದರಲ್ಲೊಂದು ಪದವು ಸತ್ಯಾಂಶಗಳನ್ನು ತಿಳಿದುಕೊಳ್ಳುವುದಕ್ಕೆ ಮತ್ತು ಇನ್ನೊಂದು ಮನುಷ್ಯರ ಕುರಿತಾಗಿ ತಿಳಿದುಕೊಳ್ಳುವುದಕ್ಕೆ ಮತ್ತು ಅವರೊಂದಿಗೆ ಸಹವಾಸ ಮಾಡುವುದಕ್ಕೆ ಇರುತ್ತವೆ.
  • “ತಿಳಿದುಕೊಳ್ಳುವಂತೆ ಮಾಡು” ಎನ್ನುವ ಮಾತು “ಜನರು ತಿಳಿದುಕೊಳ್ಳುವಂತೆ ಮಾಡುವದು” ಅಥವಾ “ಬಹಿರಂಗಪಡಿಸು” ಅಥವಾ “ಅದರ ಕುರಿತಾಗಿ ಹೇಳು” ಅಥವಾ “ವಿವರಿಸು” ಎಂದೂ ಅನುವಾದ ಮಾಡಬಹುದು.
  • ಏನಾದರೊಂದರ “ಕುರಿತಾಗಿ ತಿಳಿದುಕೊಳ್ಳುವುದು” ಎನ್ನುವ ಮಾತನ್ನು “ಎಚ್ಚರವಾಗಿರು” ಅಥವಾ “ಅದರೊಂದಿಗೆ ಪರಿಚತವಾಗು” ಎಂದೂ ಅನುವಾದ ಮಾಡಬಹುದು.
  • “ಹೇಗೆಂದು ತಿಳಿಯಿರಿ” ಎನ್ನುವ ಮಾತಿಗೆ ಏನಾದರೊಂದು ಕೆಲಸವನ್ನು ಮಾಡಿ ಮುಗಿಸುವುದಕ್ಕೆ ಅದರ ವಿಧಾನವನ್ನು ಅಥವಾ ಪದ್ಧತಿಯನ್ನು ಅರ್ಥಮಾಡಿಕೊಳ್ಳುವುದು ಎಂದರ್ಥ. ಇದನ್ನು “ಸಾಮರ್ಥ್ಯವನ್ನು ಹೊಂದು” ಅಥವಾ “ಅದಕ್ಕೆ ನಿಪುಣತೆಯನ್ನು ಪಡೆ” ಎಂಬುದಾಗಿಯೂ ಅನುವಾದ ಮಾಡಬಹುದು.
  • “ಜ್ಞಾನ" ಎನ್ನುವ ಪದವನ್ನು “ತಿಳಿದುಕೊಂಡಿರುವುದು” ಅಥವಾ “ಜ್ಞಾನ” ಅಥವಾ “ಅರ್ಥಮಾಡಿಕೊಳ್ಳುವುದು” ಎಂದೂ ಸಂದರ್ಭಾನುಗುಣವಾಗಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಧರ್ಮಶಾಸ್ತ್ರ, ಬಹಿರಂಗಪಡಿಸು, ಅರ್ಥಮಾಡಿಕೊ, ಜ್ಞಾನ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1843, H1844, H1847, H1875, H3045, H3046, H4093, H4486, H5046, H5234, H5475, H5869, G50, G56, G1097, G1107, G1108, G1492, G1921, G1922, G1987, G2467, G2589, G4267, G4894