kn_tw/bible/other/image.md

4.7 KiB

ಚಿತ್ರ, ಚಿತ್ರಗಳು, ಕೆತ್ತಿರುವ ಚಿತ್ರ, ಕೆತ್ತಿರುವ ಚಿತ್ರಗಳು, ಎರಕುಹೊಯ್ದ ಲೋಹದ ಚಿತ್ರಗಳು, ಗೊಂಬೆ, ಗೊಂಬೆಗಳು, ಕೆತ್ತಿದ ಗೊಂಬೆ, ಕೆತ್ತಿದ ಗೊಂಬೆಗಳು, ಎರಕುಹೊಯ್ದ ಲೋಹದ ಗೊಂಬೆ, ಎರಕುಹೊಯ್ದ ಲೋಹದ ಗೊಂಬೆಗಳು

ಪದದ ಅರ್ಥವಿವರಣೆ:

ಈ ಎಲ್ಲಾ ಪದಗಳು ಸುಳ್ಳು ದೇವರನ್ನು ಆರಾಧನೆ ಮಾಡುವುದಕ್ಕೆ ತಯಾರು ಮಾಡಲ್ಪಟ್ಟಿರುವ ವಿಗ್ರಹಗಳನ್ನು ಸೂಚಿಸುತ್ತವೆ. ವಿಗ್ರಹಗಳನ್ನು ಆರಾಧನೆ ಮಾಡುವ ಸಂದರ್ಭದಲ್ಲಿ, “ಚಿತ್ರ” ಎನ್ನುವುದು “ಕೆತ್ತಿರುವ ಚಿತ್ರ” ಎನ್ನುವುದಕ್ಕೆ ಸುಲಭವಾಗಿ ಬಳಸುವ ಪದವಾಗಿರುತ್ತದೆ.

  • “ಕೆತ್ತಿರುವ ಚಿತ್ರ” ಅಥವಾ “ಕೆತ್ತಿದ ಗೊಂಬೆ” ಎನ್ನುವ ಪದವು ಒಂದು ಪ್ರಾಣಿಯಂತೆ, ವ್ಯಕ್ತಿಯಂತೆ ಅಥವಾ ಒಂದು ವಸ್ತುವಿನಂತೆ ಕಾಣಿಸುವುದಕ್ಕೆ ತಯಾರು ಮಾಡಲ್ಪಟ್ಟಿರುವ ಮರದ ವಸ್ತುವಾಗಿರುತ್ತದೆ.
  • “ಎರಕುಹೊಯ್ದ ಲೋಹದ ಗೊಂಬೆ” ಎನ್ನುವುದು ಲೋಹವನ್ನು ಕರಗಿಸಿ, ಅದನ್ನು ಒಂದು ವಸ್ತು, ಪ್ರಾಣಿ ಅಥವಾ ಒಬ್ಬ ವ್ಯಕ್ತಿಯ ಆಕಾರದಲ್ಲಿರುವ ಅಚ್ಚುನೊಳಗೆ ಸುರಿಯುವುದರ ಮೂಲಕ ಒಂದು ವಸ್ತುವನ್ನು ಅಥವಾ ಒಂದು ಪ್ರತಿಮೆಯನ್ನು ತಯಾರಿಸುವುದು ಎಂದರ್ಥ.
  • ಈ ಮರದ ಮತ್ತು ಲೋಹದ ವಸ್ತುಗಳು ಸುಳ್ಳು ದೇವರುಗಳನ್ನು ಆರಾಧನೆ ಮಾಡುವುದರಲ್ಲಿ ಉಪಯೋಗಿಸಲ್ಪಟ್ಟಿರುತ್ತವೆ.
  • “ಚಿತ್ರ” ಎನ್ನುವ ಪದವು ವಿಗ್ರಹವನ್ನು ಸೂಚಿಸಿದಾಗ, ಅದು ಕಟ್ಟಿಗೆಯಿಂದಾಗಲಿ ಅಥವಾ ಲೋಹದಿಂದಾಗಲಿ ಮಾಡಿದ ವಿಗ್ರಹವನ್ನು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • ವಿಗ್ರಹಕ್ಕೆ ಸೂಚಿಸಿದಾಗ, “ಚಿತ್ರ” ಎನ್ನುವ ಪದವನ್ನು “ಪ್ರತಿಮೆ” ಅಥವಾ “ಕೆತ್ತಲ್ಪಟ್ಟ ವಿಗ್ರಹ” ಅಥವಾ “ಕೆತ್ತಲ್ಪಟ್ಟ ಭಕ್ತಿಸಂಬಂಧವಾದ ವಸ್ತು” ಎಂಬುದಾಗಿ ಅನುವಾದ ಮಾಡಬಹುದು.
  • ಈ ಪದದೊಂದಿಗೆ ವಿವರಣಾತ್ಮಕವಾದ ಪದವನ್ನು ಯಾವಾಗಲೂ ಉಪಯೋಗಿಸುವುದಕ್ಕೆ ಕೆಲವೊಂದು ಭಾಷೆಗಳಲ್ಲಿ ಇದು ತುಂಬಾ ಸ್ಪಷ್ಟವಾಗಿರಬಹುದು, ಹೇಗೆಂದರೆ “ಕೆತ್ತಿರುವ ಚಿತ್ರ” ಅಥವಾ “ಎರಕುಹೊಯ್ದ ಲೋಹದ ಗೊಂಬೆ” ಎಂಬುದಾಗಿ ಉಪಯೋಗಿಸುತ್ತಾರೆ. “ಚಿತ್ರ” ಅಥವಾ “ಗೊಂಬೆ” ಪದವನ್ನು ಮಾತ್ರವೇ ಉಪಯೋಗಿಸಿದ ಸ್ಥಳಗಳಲ್ಲಿಯೂ ಮೂಲ ಭಾಷೆಯಲ್ಲಿಯೇ ಇರುತ್ತದೆ.
  • ಈ ಪದವು ದೇವರ ಸ್ವರೂಪದಲ್ಲಿರುವ ರೂಪ ಎನ್ನುವ ಪದಕ್ಕೆ ವ್ಯತ್ಯಾಸವಿರುವಂತೆ ನೋಡಿಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ಸುಳ್ಳು ದೇವರು, ದೇವರು, ಸುಳ್ಳು ದೇವರು, ದೇವರ ಸ್ವರೂಪ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H457, H1544, H2553, H4541, H4676, H4853, H4906, H5257, H5262, H5566, H6091, H6456, H6459, H6754, H6755, H6816, H8403, H8544, H8655, G1504, G5179, G5481