kn_tw/bible/other/foundation.md

4.4 KiB

ಸ್ಥಾಪಿಸು, ಸ್ಥಾಪಕರು, ಅಸ್ಥಿವಾರ

ಪದದ ಅರ್ಥವಿವರಣೆ:

ಕ್ರಿಯಾ ಪದವಾದ “ಸ್ಥಾಪಿಸು” ಎನ್ನುವ ಪದಕ್ಕೆ ನಿರ್ಮಿಸು, ಸೃಷ್ಟಿಸು, ಅಥವಾ ಅಡಿಪಾಯ ಹಾಕು ಎಂದರ್ಥ. “ಅದರ ಮೇಲೆ ಸ್ಥಾಪಿಸಲಾಗಿದೆ” ಎನ್ನುವ ಮಾತಿಗೆ ಅದರ ಆಧಾರದ ಮೇಲೆ ಅಥವಾ ಅದರಿಂದ ಬೆಂಬಲಿತವಾಗಿದೆ ಎಂದರ್ಥ. “ಅಸ್ಥಿವಾರ” ಎನ್ನುವುದು ಎನಾದರೊಂದು ನಿರ್ಮಿಸಲ್ಪಡುವುದಕ್ಕೆ ಅಥವಾ ಸೃಷ್ಟಿಸುವುದಕ್ಕೆ ಹಾಕುವ ಅಡಿಪಾಯ ಎಂದರ್ಥ.

  • ಒಂದು ಮನೆಯ ಅಥವಾ ಭವನದ ಅಸ್ಥಿವಾರ ತುಂಬಾ ಬಲವಾಗಿರಬೇಕು ಮತ್ತು ನಿರ್ಮಿಸುವ ಕಟ್ಟಡಕ್ಕೆಲ್ಲಾ ಅದೇ ಬೆಂಬಲವಾಗಿರುತ್ತದೆ.
  • “ಅಸ್ಥಿವಾರ” ಎನ್ನುವ ಪದವು ಯಾವುದಾದರೊಂದರ ಆರಂಭವನ್ನು ಅಥವಾ ಮೊಟ್ಟ ಮೊದಲು ಸೃಷ್ಟಿಸಲ್ಪಟ್ಟ ಯಾವುದಾದರೊಂದರ ಸಮಯವನ್ನು ಕೂಡ ಸೂಚಿಸುತ್ತದೆ.
  • ಅಲಂಕಾರಿಕ ಭಾಷೆಯಲ್ಲಿ ಕ್ರಿಸ್ತನಲ್ಲಿರುವ ವಿಶ್ವಾಸಿಗಳು ಪ್ರವಾದಿಗಳ ಮತ್ತು ಅಪೊಸ್ತಲರ ಬೋಧನೆಗಳ ಮೇಲೆ ಸ್ಥಾಪಿಸಲ್ಪಟ್ಟಿರುವ ಭವನಕ್ಕೆ ಹೊಲಿಸಲಾಗಿದೆ, ಮತ್ತು ಆ ಭವನಕ್ಕೆ ಮೂಲೆಗಲ್ಲು ಯೇಸು ಕ್ರಿಸ್ತನಾಗಿರುತ್ತಾನೆ.
  • “ಅಸ್ಥಿವಾರ ಕಲ್ಲು” ಎನ್ನುವುದು ಸ್ಥಾಪನೆ ಮಾಡುವಾಗ ಹಾಕುವ ಮೂಲೆಗಲ್ಲು ಆಗಿರುತ್ತದೆ. ಈ ಕಲ್ಲುಗಳನ್ನು ಕಟ್ಟಡವನ್ನು ಸಂಪೂರ್ಣವಾಗಿ ಬೆಂಬಲಿಸಲು ಶಕ್ತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಲು ಪರೀಕ್ಷಿಸಿಸಲಾಗಿರುತ್ತದೆ.

ಅನುವಾದ ಸಲಹೆಗಳು:

“ಲೋಕ ಅಸ್ಥಿವಾರದ ಮುಂಚಿತವಾಗಿ” ಎನ್ನುವ ಮಾತನ್ನು “ಲೋಕವು ಸೃಷ್ಟಿಸಲ್ಪಡುವುದಕ್ಕೆ ಮುಂಚಿತವಾಗಿ” ಅಥವಾ “ಲೋಕವು ಮೊಟ್ಟ ಮೊದಲು ಅಸ್ತಿತ್ವದಲ್ಲಿರುವುದಕ್ಕೆ ಮುಂಚಿತವಾಗಿ” ಅಥವಾ “ಪ್ರತಿಯೊಂದು ಮೊಟ್ಟ ಮೊದಲು ಸೃಷ್ಟಿಸಲ್ಪಡುವುದಕ್ಕೆ ಮುಂಚಿತವಾಗಿ” ಎಂದೂ ಅನುವಾದ ಮಾಡಬಹುದು.

  • “ಅದರ ಮೇಲೆ ಸ್ಥಾಪಿಸಲ್ಪಟ್ಟಿದೆ” ಎನ್ನುವ ಮಾತನ್ನು “ಭದ್ರವಾಗಿ ನಿರ್ಮಿಸಲಾಗಿದೆ” ಅಥವಾ “ಸ್ಥಿರವಾಗಿ ಹಾಕಲ್ಪಟ್ಟಿದೆ” ಎಂದೂ ಅನುವಾದ ಮಾಡಬಹುದು.
  • ಸಂದರ್ಭಕ್ಕೆ ತಕ್ಕಂತೆ, “ಅಸ್ಥಿವಾರ” ಎನ್ನುವ ಪದವನ್ನು “ಬಲವಾದ ಅಡಿಪಾಯ” ಅಥವಾ “ಗಟ್ಟಿಯಾದ ಬೆಂಬಲ” ಅಥವಾ “ಆರಂಭ” ಅಥವಾ “ಸೃಷ್ಟಿ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಮೂಲೆಗಲ್ಲು, ಸೃಷ್ಟಿಸು)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H134, H787, H2713, H3245, H3247, H3248, H4143, H4144, H4146, H4328, H4349, H4527, H8356, G2310, G2311, G2602