kn_tw/bible/kt/cornerstone.md

3.9 KiB

ಮೂಲೆಗಲ್ಲು

ಪದದ ಅರ್ಥವಿವರಣೆ:

“ಮೂಲೆಗಲ್ಲು” ಎನ್ನುವ ಪದವು ಭವನದ ಅಡಿಪಾಯದ ಮೂಲೆಯಲ್ಲಿಡುವ ವಿಶೇಷವಾಗಿ ಕತ್ತರಿಸಿದ ಒಂದು ದೊಡ್ಡ ಕಲ್ಲನ್ನು ಸೂಚಿಸುತ್ತದೆ.

  • ಭವನ ನಿರ್ಮಾಣಕ್ಕೆ ಉಪಯೋಗಿಸುವ ಇತರ ಬೇರೆ ಕಲ್ಲುಗಳನ್ನು ಮೂಲೆಗಲ್ಲಿಗೆ ತಕ್ಕಂತೆ ಅಳತೆ ಮಾಡಿ ಅವುಗಳನ್ನು ಇಡುತ್ತಾರೆ.
  • ಇಡೀ ನಿರ್ಮಾಣವೆಲ್ಲಾ ಸ್ಥಿರವಾಗಿ ಮತ್ತು ಬಲವಾಗಿ ಇರುವುದಕ್ಕೆ ಇದು ತುಂಬಾ ಪ್ರಾಮುಖ್ಯವಾದ ಕಲ್ಲಾಗಿರುತ್ತದೆ.
  • ಹೊಸ ಒಡಂಬಡಿಕೆಯಲ್ಲಿ ಯೇಸು ಕ್ರಿಸ್ತನನ್ನು “ಮೂಲೆಗಲ್ಲು” ಎಂದು ಮತ್ತು ವಿಶ್ವಾಸಿಗಳೆಲ್ಲರನ್ನು ಅದರ ಮೇಲೆ ಕಟ್ಟುವ ನಿರ್ಮಾಣದ ಕಲ್ಲುಗಳೆಂದು ಅಲಂಕಾರಿಕವಾಗಿ ಉಪಯೋಗಿಸಿ ಹೇಳಿದ್ದಾರೆ.
  • ಭವನದ ಮೂಲೆಗಳ್ಳು ಯಾವರೀತಿ ಇಡೀ ನಿರ್ಮಾಣವನ್ನು ನಿರ್ಧರಿಸುತ್ತದೋ ಮತ್ತು ಆ ಭವನಕ್ಕೆ ಬೆಂಬಲವನ್ನು ಕೊಡುತ್ತದೋ ಅದೇ ರೀತಿ ಯೇಸುಕ್ರಿಸ್ತನು ಕೂಡ ವಿಶ್ವಾಸಿಗಳೆಲ್ಲರಿಗೂ ಮೂಲೆಗಲ್ಲಾಗಿದ್ದು ಬೆಂಬಲವನ್ನು ಕೊಡುತ್ತಾನೆ.

ಅನುವಾದ ಸಲಹೆಗಳು:

  • “ಮೂಲೆಗಲ್ಲು” ಎನ್ನುವ ಪದವನ್ನು “ಭವನದ ಮುಖ್ಯ ಕಲ್ಲು” ಅಥವಾ “ಬುನಾದಿ ಕಲ್ಲು” ಎಂದೂ ಅನುವಾದ ಮಾಡಬಹುದು.
  • ಅನುವಾದ ಮಾಡುವ ಭಾಷೆಯಲ್ಲಿ ಭವನದ ಬುನಾದಿಗೆ ಪ್ರಾಮುಖ್ಯವಾಗಿ ಬೆಂಬಲವನ್ನು ಕೊಡುವ ಕಲ್ಲಿನ ಇನ್ನೊಂದು ಹೆಸರು ಇರುವುದಾದರೆ ಅದನ್ನು ಉಪಯೋಗಿಸಿರಿ. ಇದ್ದರೂ ಈ ಪದವನ್ನು ಕೂಡ ಉಪಯೋಗಿಸಬಹುದು.
  • ಈ ಪದವನ್ನು “ಭವನದ ಮೂಲೆಯಲ್ಲಿ ಹಾಕುವ ಅಡಿಪಾಯದ ಕಲ್ಲು” ಎಂದೂ ಅನುವಾದ ಮಾಡಬಹುದು.
  • ಭವನದ ನಿರ್ಮಾಣವು ಭದ್ರವಾಗಿಯು ಮತ್ತು ಬಲವಾಗಿಯೂ ಇರುವುದಕ್ಕೆ ಉಪಯೋಗಿಸುವ ಒಂದು ದೊಡ್ಡ ಕಲ್ಲು ಎನ್ನುವ ಸತ್ಯಾಂಶವನ್ನು ತಿಳಿದಿರುವುದು ತುಂಬಾ ಪ್ರಾಮುಖ್ಯವಾದ ವಿಷಯ.
  • ನಿರ್ಮಿಸುವ ಭವನಗಳಿಗೆ ಕಲ್ಲುಗಳನ್ನು ಉಪಯೋಗಿಸದಿದ್ದರೆ, “ದೊಡ್ಡ ಕಲ್ಲು” (ದೊಡ್ಡ ಬಂಡೆ) ಎಂದು ಅರ್ಥ ಬರುವ ಇನ್ನೊಂದು ಪದವನ್ನೂ ಉಪಯೋಗಿಸಬಹುದು, ಆದರೆ ಅದು ಚೆನ್ನಾಗಿ ರೂಪಗೊಂಡ ಮತ್ತು ಹೊಂದಿಕೊಳ್ಳುವ ಕಲ್ಪನೆಯನ್ನು ಹೊಂದಬೇಕು.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H68, H6438, H7218, G204, G1137, G2776, G3037