4.5 KiB
4.5 KiB
ಉಪವಾಸ, ನಿರಾಹಾರ, ಉಪವಾಸವಿದ್ದೆ, ಉಪವಾಸವಿರುವುದು, ಉಪವಾಸಗಳು
ಪದದ ಅರ್ಥವಿವರಣೆ:
“ಉಪವಾಸ” ಎಂಬ ಪದವು ಒಂದು ದಿನ ಅಥವಾ ಹೆಚ್ಚಿನ ಸಮಯದವರೆಗೆ ಆಹಾರವನ್ನು ಸೇವಿಸುವುದನ್ನು ನಿಲ್ಲಿಸುವುದು ಎಂದು ಅರ್ಥೈಸುತ್ತದೆ. ಕೆಲವೊಂದುಸಲ ಇದರಲ್ಲಿ ಯಾವ ಪಾನೀಯವನ್ನು ಕುಡಿಯದಿರುವುದನ್ನು ಒಳಗೊಂಡಿರುತ್ತದೆ.
- ಉಪವಾಸವು ದೇವರ ಮೇಲೆ ಕೇಂದ್ರೀಕರಿಸುವುದಕ್ಕೆ ಮತ್ತು ಸಿದ್ಧಪಡಿಸಿದ ಆಹಾರದಿಂದ ಯಾವ ಅಡಚಣೆಯಿಲ್ಲದೆ ಪ್ರಾರ್ಥನೆ ಮಾಡುವುದಕ್ಕೆ ಜನರಿಗೆ ಸಹಾಯ ಮಾಡುತ್ತದೆ.
- ಕೆಲವೊಂದು ತಪ್ಪು ಕಾರಣಗಳಿಗೋಸ್ಕರ ಉಪವಾಸದ ವಿಷಯದಲ್ಲಿ ಯೇಸು ಯೆಹೂದ್ಯರ ಧರ್ಮ ನಾಯಕರನ್ನು ಖಂಡಿಸಿದ್ದಾನೆ. ಅವರು ಉಪವಾಸವಿದ್ದರಿಂದ ಇತರರು ಅವರನ್ನು ನೀತಿವಂತರೆಂದು ಆಲೋಚನೆ ಮಾಡಬೇಕೆಂದು ಬಯಸುತ್ತಾರೆ.
- ಕೆಲವೊಂದುಬಾರಿ ಜನರು ಉಪವಾಸವಿರುತ್ತಾರೆ ಯಾಕಂದರೆ ಅವರು ಯಾವುದಾದರೊಂದರ ಕುರಿತಾಗಿ ತುಂಬಾ ಬಾಧೆಗೆ ಒಳಗಾಗಿರುತ್ತಾರೆ ಅಥವಾ ದುಃಖಿತರಾಗಿರುತ್ತಾರೆ.
- “ಉಪವಾಸ” ಎನ್ನುವ ಪದವು ಕ್ರಿಯಾಪದವಾದರೆ, “ಊಟ ಮಾಡದೆ ತಡೆಹಿಡಿದುಕೊಳ್ಳುವುದು” ಅಥವಾ “ಊಟ ಮಾಡದಿರುವುದು” ಎಂದೂ ಅನುವಾದ ಮಾಡುತ್ತಾರೆ.
- “ಉಪವಾಸ” ಎನ್ನುವ ಪದವು ನಾಮಪದವಾದರೆ, “ಊಟ ತಿನ್ನದ ಸಮಯ” ಅಥವಾ "ಆಹಾರದಿಂದ ದೂರವಿರುವ ಸಮಯ” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಯೆಹೂದ್ಯರ ನಾಯಕರು)
ಸತ್ಯವೇದದ ಅನುಬಂಧ ವಾಕ್ಯಗಳು :
- 1 ಅರಸ.21:8-10
- 2 ಪೂರ್ವ.20:3-4
- ಅಪೊ.ಕೃತ್ಯ.13:1-3
- ಯೋನಾ.03:4-5
- ಲೂಕ.05:33-35
- ಮಾರ್ಕ.02:18-19
- ಮತ್ತಾಯ.06:16-18
- ಮತ್ತಾಯ.09:14-15
ಸತ್ಯವೇದದಿಂದ ಉದಾಹರಣೆಗಳು:
- 25:01 ಯೇಸು ದೀಕ್ಷಾಸ್ನಾನ ತೆಗೆದುಕೊಂಡನಂತರ, ಪವಿತ್ರಾತ್ಮನು ಆತನನ್ನು ಅರಣ್ಯದೊಳಗೆ ಕರೆದುಕೊಂಡು ಹೋಯಿತು, ಆಲ್ಲಿ ಆತನು ನಲವತ್ತು ಹಗಲು ರಾತ್ರಿಗಳು ___ ಉಪವಾಸ ___ ಇದ್ದನು.
- 34:08 “ಉದಾಹರಣೆಗೆ, ನಾನು ವಾರಕ್ಕೆ ಎರಡು ಬಾರಿ ___ ಉಪವಾಸ ___ ಮಾಡುತ್ತೇನೆ ಮತ್ತು ನಾನು ಪಡೆದ ಹಣದಲ್ಲಿ ಮತ್ತು ವಸ್ತುಗಳಲ್ಲಿ ದಶಮ ಭಾಗವನ್ನು ಕೊಡುತ್ತೇನೆ”.
- 46:10 ಒಂದು ದಿನ ಅಂತಿಯೋಕ್ಯದಲ್ಲಿರುವ ಕ್ರೈಸ್ತರೆಲ್ಲರು ___ ಉಪವಾಸವಿದ್ದು ___ ಪ್ರಾರ್ಥನೆ ಮಾಡಿದರು, ಆಗ ಪವಿತ್ರಾತ್ಮನು ಅವರಿಗೆ “ನಾನು ಅವರಿಗೆ ಕೊಟ್ಟ ಕೆಲಸವನ್ನು ಮಾಡುವುದಕ್ಕೆ ಬಾರ್ನಬಾನನ್ನು ಮತ್ತು ಸೌಲನನ್ನು ನನಗಾಗಿ ಪ್ರತ್ಯೇಕಿಸಿರಿ” ಎಂದು ಹೇಳಿದನು.
ಪದ ಡೇಟಾ:
- Strong's: H2908, H5144, H6684, H6685, G777, G3521, G3522, G3523