kn_tw/bible/other/fast.md

35 lines
4.5 KiB
Markdown

# ಉಪವಾಸ, ನಿರಾಹಾರ, ಉಪವಾಸವಿದ್ದೆ, ಉಪವಾಸವಿರುವುದು, ಉಪವಾಸಗಳು
## ಪದದ ಅರ್ಥವಿವರಣೆ:
“ಉಪವಾಸ” ಎಂಬ ಪದವು ಒಂದು ದಿನ ಅಥವಾ ಹೆಚ್ಚಿನ ಸಮಯದವರೆಗೆ ಆಹಾರವನ್ನು ಸೇವಿಸುವುದನ್ನು ನಿಲ್ಲಿಸುವುದು ಎಂದು ಅರ್ಥೈಸುತ್ತದೆ. ಕೆಲವೊಂದುಸಲ ಇದರಲ್ಲಿ ಯಾವ ಪಾನೀಯವನ್ನು ಕುಡಿಯದಿರುವುದನ್ನು ಒಳಗೊಂಡಿರುತ್ತದೆ.
* ಉಪವಾಸವು ದೇವರ ಮೇಲೆ ಕೇಂದ್ರೀಕರಿಸುವುದಕ್ಕೆ ಮತ್ತು ಸಿದ್ಧಪಡಿಸಿದ ಆಹಾರದಿಂದ ಯಾವ ಅಡಚಣೆಯಿಲ್ಲದೆ ಪ್ರಾರ್ಥನೆ ಮಾಡುವುದಕ್ಕೆ ಜನರಿಗೆ ಸಹಾಯ ಮಾಡುತ್ತದೆ.
* ಕೆಲವೊಂದು ತಪ್ಪು ಕಾರಣಗಳಿಗೋಸ್ಕರ ಉಪವಾಸದ ವಿಷಯದಲ್ಲಿ ಯೇಸು ಯೆಹೂದ್ಯರ ಧರ್ಮ ನಾಯಕರನ್ನು ಖಂಡಿಸಿದ್ದಾನೆ. ಅವರು ಉಪವಾಸವಿದ್ದರಿಂದ ಇತರರು ಅವರನ್ನು ನೀತಿವಂತರೆಂದು ಆಲೋಚನೆ ಮಾಡಬೇಕೆಂದು ಬಯಸುತ್ತಾರೆ.
* ಕೆಲವೊಂದುಬಾರಿ ಜನರು ಉಪವಾಸವಿರುತ್ತಾರೆ ಯಾಕಂದರೆ ಅವರು ಯಾವುದಾದರೊಂದರ ಕುರಿತಾಗಿ ತುಂಬಾ ಬಾಧೆಗೆ ಒಳಗಾಗಿರುತ್ತಾರೆ ಅಥವಾ ದುಃಖಿತರಾಗಿರುತ್ತಾರೆ.
* “ಉಪವಾಸ” ಎನ್ನುವ ಪದವು ಕ್ರಿಯಾಪದವಾದರೆ, “ಊಟ ಮಾಡದೆ ತಡೆಹಿಡಿದುಕೊಳ್ಳುವುದು” ಅಥವಾ “ಊಟ ಮಾಡದಿರುವುದು” ಎಂದೂ ಅನುವಾದ ಮಾಡುತ್ತಾರೆ.
* “ಉಪವಾಸ” ಎನ್ನುವ ಪದವು ನಾಮಪದವಾದರೆ, “ಊಟ ತಿನ್ನದ ಸಮಯ” ಅಥವಾ "ಆಹಾರದಿಂದ ದೂರವಿರುವ ಸಮಯ” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಯೆಹೂದ್ಯರ ನಾಯಕರು](../other/jewishleaders.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.21:8-10](rc://*/tn/help/1ki/21/08)
* [2 ಪೂರ್ವ.20:3-4](rc://*/tn/help/2ch/20/03)
* [ಅಪೊ.ಕೃತ್ಯ.13:1-3](rc://*/tn/help/act/13/01)
* [ಯೋನಾ.03:4-5](rc://*/tn/help/jon/03/04)
* [ಲೂಕ.05:33-35](rc://*/tn/help/luk/05/33)
* [ಮಾರ್ಕ.02:18-19](rc://*/tn/help/mrk/02/18)
* [ಮತ್ತಾಯ.06:16-18](rc://*/tn/help/mat/06/16)
* [ಮತ್ತಾಯ.09:14-15](rc://*/tn/help/mat/09/14)
## ಸತ್ಯವೇದದಿಂದ ಉದಾಹರಣೆಗಳು:
* ___[25:01](rc://*/tn/help/obs/25/01)___ ಯೇಸು ದೀಕ್ಷಾಸ್ನಾನ ತೆಗೆದುಕೊಂಡನಂತರ, ಪವಿತ್ರಾತ್ಮನು ಆತನನ್ನು ಅರಣ್ಯದೊಳಗೆ ಕರೆದುಕೊಂಡು ಹೋಯಿತು, ಆಲ್ಲಿ ಆತನು ನಲವತ್ತು ಹಗಲು ರಾತ್ರಿಗಳು ___ ಉಪವಾಸ ___ ಇದ್ದನು.
* ___[34:08](rc://*/tn/help/obs/34/08)___ “ಉದಾಹರಣೆಗೆ, ನಾನು ವಾರಕ್ಕೆ ಎರಡು ಬಾರಿ ___ ಉಪವಾಸ ___ ಮಾಡುತ್ತೇನೆ ಮತ್ತು ನಾನು ಪಡೆದ ಹಣದಲ್ಲಿ ಮತ್ತು ವಸ್ತುಗಳಲ್ಲಿ ದಶಮ ಭಾಗವನ್ನು ಕೊಡುತ್ತೇನೆ”.
* ___[46:10](rc://*/tn/help/obs/46/10)___ ಒಂದು ದಿನ ಅಂತಿಯೋಕ್ಯದಲ್ಲಿರುವ ಕ್ರೈಸ್ತರೆಲ್ಲರು ___ ಉಪವಾಸವಿದ್ದು ___ ಪ್ರಾರ್ಥನೆ ಮಾಡಿದರು, ಆಗ ಪವಿತ್ರಾತ್ಮನು ಅವರಿಗೆ “ನಾನು ಅವರಿಗೆ ಕೊಟ್ಟ ಕೆಲಸವನ್ನು ಮಾಡುವುದಕ್ಕೆ ಬಾರ್ನಬಾನನ್ನು ಮತ್ತು ಸೌಲನನ್ನು ನನಗಾಗಿ ಪ್ರತ್ಯೇಕಿಸಿರಿ” ಎಂದು ಹೇಳಿದನು.
## ಪದ ಡೇಟಾ:
* Strong's: H2908, H5144, H6684, H6685, G777, G3521, G3522, G3523