3.4 KiB
3.4 KiB
ಪ್ರತಿಷ್ಠಿಸು, ಪ್ರತಿಷ್ಠೆ ಮಾಡುವುದು, ಪ್ರತಿಷ್ಠಿಸಲಾಗಿದೆ, ಪ್ರತಿಷ್ಠೆ
ಪದದ ಅರ್ಥವಿವರಣೆ:
ಪ್ರತಿಷ್ಠಿಸು ಎಂದರೆ ಒಂದು ವಿಶೇಷವಾದ ಕಾರ್ಯಕ್ಕಾಗಿ ಅಥವಾ ಉದ್ದೇಶಕ್ಕಾಗಿ ಪ್ರತ್ಯೇಕಪಡಿಸು ಎಂದರ್ಥ ಅಥವಾ ಸಮರ್ಪಿಸಿಕೊಳ್ಳುವುದು ಎಂದರ್ಥ.
- ದಾವೀದನು ಕರ್ತನಿಗೆ ಬೆಳ್ಳಿ ಬಂಗಾರಗಳನ್ನು ಸಮರ್ಪಿಸಿದನು.
- “ಪ್ರತಿಷ್ಠೆ” ಎನ್ನುವ ಪದವು ಅನೇಕಬಾರಿ ಒಂದು ವಿಶೇಷವಾದ ಉದ್ದೇಶಕ್ಕಾಗಿ ಏನಾದರೊಂದನ್ನು ಪ್ರತ್ಯೇಕಿಸುವ ಸಾಂಪ್ರದಾಯಿಕ ಸಮಾರಂಭವನ್ನು ಅಥವಾ ಘಟನೆಯನ್ನು ಸೂಚಿಸುತ್ತದೆ.
- ಯಜ್ಞವೇದಿ ಪ್ರತಿಷ್ಠೆಯಲ್ಲಿ ದೇವರಿಗೆ ಬಲಿಯನ್ನು ಅರ್ಪಿಸುವುದು ಒಳಗೊಂಡಿರುತ್ತದೆ.
- ಯೆಹೋವನನ್ನು ಮಾತ್ರ ಸೇವಿಸುವುದಕ್ಕೆ ಮತ್ತು ಆತನ ಪಟ್ಟಣವನ್ನು ಸಂರಕ್ಷಿಸುವುದಕ್ಕೆ ಒಂದು ವಿನೂತನವಾದ ವಾಗ್ಧಾನದೊಂದಿಗೆ ಯೆರೂಸಲೇಮಿನ ಗೋಡೆಗಳನ್ನು ಪುನರ್ ನಿರ್ಮಾಣ ಮಾಡಿದನಂತರ, ಅವುಗಳನ್ನು ಪ್ರತಿಷ್ಠೆ ಮಾಡುವುದರಲ್ಲಿ ನೆಹೆಮೀಯ ಇಸ್ರಾಯೇಲ್ಯರನ್ನು ನಡೆಸಿದನು. ಈ ಸಮಾರಂಭದಲ್ಲಿ ಹಾಡುಗಳು ಹಾಡುವುದರ ಮೂಲಕ ಸಂಗೀತ ವಾದ್ಯಗಳನ್ನು ಬಾರಿಸುವುದರ ಮೂಲಕ ದೇವರಿಗೆ ಕೃತಜ್ಞತೆಯ ವಂದನೆಗಳನ್ನು ಸಲ್ಲಿಸುವುದು ಒಳಗೊಂಡಿರುತ್ತದೆ.
- “ಪ್ರತಿಷ್ಠಿಸು” ಎನ್ನುವ ಪದಕ್ಕೆ “ಒಂದು ವಿಶೇಷವಾದ ಉದ್ದೇಶಕ್ಕಾಗಿ ಸಮರ್ಪಿಸುವುದು” ಅಥವಾ “ವಿಶೇಷವಾದ ರೀತಿಯಲ್ಲಿ ಉಪಯೋಗಿಸಲ್ಪಡುವುದಕ್ಕೆ ಸಮರ್ಪಿಸಿಕೊಳ್ಳುವುದು” ಅಥವಾ “ಒಂದು ವಿಶೇಷವಾದ ಕೆಲಸವನ್ನು ಮಾಡುವುದಕ್ಕೆ ಯಾರಾದರೊಬ್ಬರನ್ನು ಸಮರ್ಪಿಸುವುದು” ಎಂದರ್ಥ.
(ಈ ಪದಗಳನ್ನು ಸಹ ನೋಡಿರಿ : ಬದ್ಧನಾಗು)
ಸತ್ಯವೇದದ ಅನುಬಂಧ ವಾಕ್ಯಗಳು :
- 1 ಪೂರ್ವ.15:11-12
- 1 ಪೂರ್ವ.06:9-11
- 1 ಅರಸ.07:51
- 1 ತಿಮೊಥೆ.04:3-5
- 2 ಪೂರ್ವ.02:4-5
- ಯೋಹಾನ.17:18-19
- ಲೂಕ.02:22-24
ಪದ ಡೇಟಾ:
- Strong's: H2596, H2597, H2598, H2764, H4394, H6942, H6944, G1456, G1457