kn_tw/bible/other/dedicate.md

28 lines
3.4 KiB
Markdown

# ಪ್ರತಿಷ್ಠಿಸು, ಪ್ರತಿಷ್ಠೆ ಮಾಡುವುದು, ಪ್ರತಿಷ್ಠಿಸಲಾಗಿದೆ, ಪ್ರತಿಷ್ಠೆ
## ಪದದ ಅರ್ಥವಿವರಣೆ:
ಪ್ರತಿಷ್ಠಿಸು ಎಂದರೆ ಒಂದು ವಿಶೇಷವಾದ ಕಾರ್ಯಕ್ಕಾಗಿ ಅಥವಾ ಉದ್ದೇಶಕ್ಕಾಗಿ ಪ್ರತ್ಯೇಕಪಡಿಸು ಎಂದರ್ಥ ಅಥವಾ ಸಮರ್ಪಿಸಿಕೊಳ್ಳುವುದು ಎಂದರ್ಥ.
* ದಾವೀದನು ಕರ್ತನಿಗೆ ಬೆಳ್ಳಿ ಬಂಗಾರಗಳನ್ನು ಸಮರ್ಪಿಸಿದನು.
* “ಪ್ರತಿಷ್ಠೆ” ಎನ್ನುವ ಪದವು ಅನೇಕಬಾರಿ ಒಂದು ವಿಶೇಷವಾದ ಉದ್ದೇಶಕ್ಕಾಗಿ ಏನಾದರೊಂದನ್ನು ಪ್ರತ್ಯೇಕಿಸುವ ಸಾಂಪ್ರದಾಯಿಕ ಸಮಾರಂಭವನ್ನು ಅಥವಾ ಘಟನೆಯನ್ನು ಸೂಚಿಸುತ್ತದೆ.
* ಯಜ್ಞವೇದಿ ಪ್ರತಿಷ್ಠೆಯಲ್ಲಿ ದೇವರಿಗೆ ಬಲಿಯನ್ನು ಅರ್ಪಿಸುವುದು ಒಳಗೊಂಡಿರುತ್ತದೆ.
* ಯೆಹೋವನನ್ನು ಮಾತ್ರ ಸೇವಿಸುವುದಕ್ಕೆ ಮತ್ತು ಆತನ ಪಟ್ಟಣವನ್ನು ಸಂರಕ್ಷಿಸುವುದಕ್ಕೆ ಒಂದು ವಿನೂತನವಾದ ವಾಗ್ಧಾನದೊಂದಿಗೆ ಯೆರೂಸಲೇಮಿನ ಗೋಡೆಗಳನ್ನು ಪುನರ್ ನಿರ್ಮಾಣ ಮಾಡಿದನಂತರ, ಅವುಗಳನ್ನು ಪ್ರತಿಷ್ಠೆ ಮಾಡುವುದರಲ್ಲಿ ನೆಹೆಮೀಯ ಇಸ್ರಾಯೇಲ್ಯರನ್ನು ನಡೆಸಿದನು. ಈ ಸಮಾರಂಭದಲ್ಲಿ ಹಾಡುಗಳು ಹಾಡುವುದರ ಮೂಲಕ ಸಂಗೀತ ವಾದ್ಯಗಳನ್ನು ಬಾರಿಸುವುದರ ಮೂಲಕ ದೇವರಿಗೆ ಕೃತಜ್ಞತೆಯ ವಂದನೆಗಳನ್ನು ಸಲ್ಲಿಸುವುದು ಒಳಗೊಂಡಿರುತ್ತದೆ.
* “ಪ್ರತಿಷ್ಠಿಸು” ಎನ್ನುವ ಪದಕ್ಕೆ “ಒಂದು ವಿಶೇಷವಾದ ಉದ್ದೇಶಕ್ಕಾಗಿ ಸಮರ್ಪಿಸುವುದು” ಅಥವಾ “ವಿಶೇಷವಾದ ರೀತಿಯಲ್ಲಿ ಉಪಯೋಗಿಸಲ್ಪಡುವುದಕ್ಕೆ ಸಮರ್ಪಿಸಿಕೊಳ್ಳುವುದು” ಅಥವಾ “ಒಂದು ವಿಶೇಷವಾದ ಕೆಲಸವನ್ನು ಮಾಡುವುದಕ್ಕೆ ಯಾರಾದರೊಬ್ಬರನ್ನು ಸಮರ್ಪಿಸುವುದು” ಎಂದರ್ಥ.
(ಈ ಪದಗಳನ್ನು ಸಹ ನೋಡಿರಿ : [ಬದ್ಧನಾಗು](../other/commit.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.15:11-12](rc://*/tn/help/1ch/15/11)
* [1 ಪೂರ್ವ.06:9-11](rc://*/tn/help/1co/06/09)
* [1 ಅರಸ.07:51](rc://*/tn/help/1ki/07/51)
* [1 ತಿಮೊಥೆ.04:3-5](rc://*/tn/help/1ti/04/03)
* [2 ಪೂರ್ವ.02:4-5](rc://*/tn/help/2ch/02/04)
* [ಯೋಹಾನ.17:18-19](rc://*/tn/help/jhn/17/18)
* [ಲೂಕ.02:22-24](rc://*/tn/help/luk/02/22)
## ಪದ ಡೇಟಾ:
* Strong's: H2596, H2597, H2598, H2764, H4394, H6942, H6944, G1456, G1457