kn_tw/bible/other/courtyard.md

5.1 KiB

ಅಂಗಳ, ಅಂಗಳಗಳು, ಅಂಗಳದ ಆವರಣ, ಅಂಗಳದ ಆವರಣಗಳು

ಪದದ ಅರ್ಥವಿವರಣೆ:

“ಅಂಗಳ” ಮತ್ತು “ಅಂಗಳದ ಆವರಣ” ಎನ್ನುವ ಪದಗಳು ಸುತ್ತಲು ಗೋಡೆಗಳಿದ್ದು ಅವುಗಳ ಮೇಲೆ ಮೇಲ್ಛಾವಣಿಯಿಲ್ಲದೆ ಖಾಳಿ ಸ್ಥಳವಿರುವ ಜಾಗವನ್ನು ಅಥವಾ ಸ್ಥಳವನ್ನು ಸೂಚಿಸುತ್ತವೆ. “ಅಂಗಳ” ಎನ್ನುವ ಪದವೂ ನ್ಯಾಯಾಧೀಶರು ಕಾನೂನುಬದ್ಧವಾದ ಮತ್ತು ಅಪರಾಧಕ್ಕೆ ಸಂಬಂಧವಾದ ವಿಷಯಗಳನ್ನು ನಿರ್ಣಯಿಸುವ ಸ್ಥಳವನ್ನು ಸೂಚಿಸುತ್ತದೆ.

  • ಗುಡಾರದ ಸುತ್ತಲು ಅಂಗಳದ ಆವರಣವು ಇರುತ್ತದೆ, ಇದು ತುಂಬಾ ದಪ್ಪದಾಗಿರುವ ಬಟ್ಟೆಗಳ ತೆರೆಗಳಿಂದ ಮಾಡಲ್ಪಟ್ಟ ಗೋಡೆಗಳಿಂದ ಮುಚ್ಚಲ್ಪಟ್ಟಿರುತ್ತದೆ.
  • ದೇವಾಲಯ ಸಂಕೀರ್ಣವು ಮೂರು ಅಂಗಳದ ಆವರಣವನ್ನು ಹೊಂದಿರುತ್ತದೆ: ಒಂದು ಯಾಜಕರಿಗೆ, ಮತ್ತೊಂದು ಯೆಹೂದ್ಯರಿಗೆ ಮತ್ತು ಇನ್ನೊಂದು ಯೆಹೂದ್ಯ ಸ್ತ್ರೀಯರಿಗೆ.
  • ಈ ಎಲ್ಲಾ ಒಳ ಅಂಗಳದ ಆವರಣಗಳು ಅತೀ ಚಿಕ್ಕ ಕಲ್ಲುಗಳಿಂದ ಕಟ್ಟಿರುತ್ತಾರೆ, ಇವು ಆರಾಧನೆ ಮಾಡಿಕೊಳ್ಳುವುದಕ್ಕೆ ಅನ್ಯರಿಗೆ ಅನುಮತಿ ಕೊಟ್ಟ ಹೊರ ಅಂಗಳದ ಆವರಣದಿಂದ ಬೇರ್ಪಡಿಸಲಾಗಿರುತ್ತವೆ.
  • ಮನೆಯ ಅಂಗಳದ ಆವರಣವು ಮನೆಯು ಮಧ್ಯೆದಲ್ಲಿದ್ದು ಸುತ್ತ ಗೋಡೆಗಳಿರುವ ಬಹಿರಂಗ ಸ್ಥಳವಾಗಿರುತ್ತದೆ.
  • “ಅರಸನ ಆವರಣ” ಎನ್ನುವ ಮಾತು ಆತನ ಅರಮನೆಗೆ ಅಥವಾ ತನ್ನ ಅರಮನೆಯಲ್ಲಿ ಆತನು ತೀರ್ಪುಗಳನ್ನು ಮಾಡುವ ಸ್ಥಳವನ್ನು ಸೂಚಿಸಬಹುದು.
  • “ಯೆಹೋವನ ಆವರಣಗಳು” ಎನ್ನುವ ಮಾತು ಯೆಹೋವನು ನಿವಾಸ ಮಾಡುವ ಸ್ಥಳ ಅಥವಾ ಯೆಹೋವನನ್ನು ಆರಾಧಿಸುವುದಕ್ಕೆ ಜನರು ಹೋಗುವ ಸ್ಥಳ ಎಂದು ಸೂಚಿಸುವ ಅಲಂಕಾರಿಕವಾದ ಮಾತಾಗಿರುತ್ತದೆ.

ಅನುವಾದ ಸಲಹೆಗಳು:

  • “ಅಂಗಳದ ಆವರಣ” ಎನ್ನುವ ಪದವನ್ನೂ “ಬಹಿರಂಗ ಸ್ಥಳ” ಅಥವಾ “ಸುತ್ತಲು ಗೋಡೆಗಳಿರುವ ಸ್ಥಳ” ಅಥವಾ “ದೇವಾಲಾಯದ ಆವರಣ” ಅಥವಾ “ದೇವಾಲಯದ ಸುತ್ತಳತೆ” ಎಂದೂ ಅನುವಾದ ಮಾಡಬಹುದು.
  • “ದೇವಾಲಯ” ಎನ್ನುವ ಪದವನ್ನು ಕೆಲವೊಂದುಬಾರಿ “ದೇವಾಲಯ ಆವರಣಗಳು” ಅಥವಾ “ದೇವಾಲಯದ ಸಂಕೀರ್ಣ” ಎಂದು ಹೇಳಬೇಕಾದ ಅವಶ್ಯಕತೆಯಿರುತ್ತದೆ. ಆದ್ದರಿಂದ ಇದು ಅಂಗಳದ ಆವರಣಗಳು ಸೂಚಿಸುತ್ತದೆ ಹೊರತಾಗಿ ದೇವಾಯಲದ ಕಟ್ಟಡವಲ್ಲ ಎಂದು ಸ್ಪಷ್ಟಪಡಿಸುತ್ತದೆ.
  • “ಯೆಹೊವಾ ಆವರಣಗಳು” ಎನ್ನುವ ಮಾತಿಗೆ “ಯೆಹೋವನು ನಿವಾಸವಾಗುವ ಸ್ಥಳ” ಅಥವಾ “ಯೆಹೋವಾನನ್ನು ಆರಾಧಿಸುವ ಸ್ಥಳ” ಎಂದೂ ಅನುವಾದ ಮಾಡಬಹುದು.
  • ಅರಸನ ಆವರಣ ಎಂದು ಉಪಯೋಗಿಸಲ್ಪಟ್ಟ ಪದವು ಯೆಹೋವನ ಆವರಣ ಎಂದು ಸೂಚಿಸುವುದಕ್ಕೆ ಕೂಡ ಉಪಯೋಗಿಸಲ್ಪಟ್ಟಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಅನ್ಯನು, ನ್ಯಾಯಾಧೀಶರು, ಅರಸ, ಗುಡಾರ, ದೇವಾಲಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1004, H1508, H2691, H5835, H6503, H7339, H8651, G833, G933, G2681, G4259