3.0 KiB
3.0 KiB
ಪೂರ್ವಕಾಲ ವೃತ್ತಾಂತಗಳು
ಪದದ ಅರ್ಥವಿವರಣೆ:
“ವೃತ್ತಾಂತ” ಎನ್ನುವ ಪದವು ಒಂದು ಕಾಲಾವಧಿಯಲ್ಲಿ ನಡೆದಿರುವ ಸಂಘಟನೆಗಳ ದಾಖಲಾತಿಯನ್ನು ಸೂಚಿಸುತ್ತದೆ.
- ಹಳೇ ಒಡಂಬಡಿಕೆಯಲ್ಲಿ “ಪೂರ್ವಕಾಲ ವೃತ್ತಾಂತ ಪ್ರಥಮ ಭಾಗ” ಮತ್ತು “ಪೂರ್ವಕಾಲ ವೃತ್ತಾಂತ ದ್ವಿತೀಯ ಭಾಗ” ಎಂದು ಎರಡು ಪುಸ್ತಕಗಳನ್ನು ಕರೆಯುತ್ತಾರೆ.
- “ಪೂರ್ವಕಾಲ ವೃತ್ತಾಂತಗಳು” ಎಂದು ಕರೆಯಲ್ಪಡುವ ಪುಸ್ತಕಗಳು ಇಸ್ರಾಯೇಲ್ ಜನರ ಚರಿತ್ರೆಯ ಭಾಗವನ್ನು ದಾಖಲಿಸುತ್ತವೆ. ಇದರಲ್ಲಿ ಆದಾಮನಿಂದ ಹಿಡಿದು ಪ್ರತಿಯೊಬ್ಬರ ವಂಶಾವಳಿಯಲ್ಲಿರುವ ಜನರ ಪಟ್ಟಿಯೊಂದಿಗೆ ಆರಂಭವಾಗುತ್ತದೆ.
- “ಪೂರ್ವಕಾಲ ವೃತ್ತಾಂತ ಪ್ರಥಮ ಭಾಗ” ಗ್ರಂಥದಲ್ಲಿ ಅರಸನಾದ ಸೌಲನ ಅಂತಿಮ ಜೀವನ ಮತ್ತು ಅರಸನಾದ ದಾವೀದನ ಆಳ್ವಿಕೆಯ ಸಂಘಟನೆಗಳನ್ನು ಬರೆದಿರುತ್ತಾರೆ.
- “ಪೂರ್ವಕಾಲ ವೃತ್ತಾಂತ ದ್ವಿತೀಯ ಭಾಗ” ಗ್ರಂಥದಲ್ಲಿ ಆರಸನಾದ ಸೊಲೊಮೋನ ಮತ್ತು ಇತರ ಅನೇಕ ಅರಸರ ಆಳ್ವಿಕೆಯ ಚರಿತ್ರೆಯನ್ನು ಬರೆದಿರುತ್ತಾರೆ, ಇದರಲ್ಲಿ ದೇವಾಲಯವನ್ನು ನಿರ್ಮಿಸುವುದು, ದಕ್ಷಿಣ ರಾಜ್ಯವಾದ ಯೂದಾದಿಂದ ಉತ್ತರ ರಾಜ್ಯವಾದ ಇಸ್ರಾಯೇಲನ್ನು ಬೇರ್ಪಡಿಸುವ ವಿಷಯಗಳು ಒಳಗೊಂಡಿರುತ್ತವೆ.
- 2 ಪೂರ್ವಕಾಲ ವೃತ್ತಾಂತಗಳ ಅಂತಿಮ ಸಂಘಟನೆಗಳು ಬಾಬೆಲೋನಿಯ ಸೆರೆಯ ಪ್ರಾರಂಭದ ವಿಷಯಗಳನ್ನು ವಿವರಿಸುತ್ತವೆ.
(ಈ ಪದಗಳನ್ನು ಸಹ ನೋಡಿರಿ : ಬಾಬೆಲೋನಿಯ, ದಾವೀದ, ಹೊರದೂಡು, ಇಸ್ರಾಯೇಲ್ ರಾಜ್ಯ, ಯೂದಾ, ಸೊಲೊಮೋನ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1697