kn_tw/bible/other/chronicles.md

24 lines
3.0 KiB
Markdown

# ಪೂರ್ವಕಾಲ ವೃತ್ತಾಂತಗಳು
## ಪದದ ಅರ್ಥವಿವರಣೆ:
“ವೃತ್ತಾಂತ” ಎನ್ನುವ ಪದವು ಒಂದು ಕಾಲಾವಧಿಯಲ್ಲಿ ನಡೆದಿರುವ ಸಂಘಟನೆಗಳ ದಾಖಲಾತಿಯನ್ನು ಸೂಚಿಸುತ್ತದೆ.
* ಹಳೇ ಒಡಂಬಡಿಕೆಯಲ್ಲಿ “ಪೂರ್ವಕಾಲ ವೃತ್ತಾಂತ ಪ್ರಥಮ ಭಾಗ” ಮತ್ತು “ಪೂರ್ವಕಾಲ ವೃತ್ತಾಂತ ದ್ವಿತೀಯ ಭಾಗ” ಎಂದು ಎರಡು ಪುಸ್ತಕಗಳನ್ನು ಕರೆಯುತ್ತಾರೆ.
* “ಪೂರ್ವಕಾಲ ವೃತ್ತಾಂತಗಳು” ಎಂದು ಕರೆಯಲ್ಪಡುವ ಪುಸ್ತಕಗಳು ಇಸ್ರಾಯೇಲ್ ಜನರ ಚರಿತ್ರೆಯ ಭಾಗವನ್ನು ದಾಖಲಿಸುತ್ತವೆ. ಇದರಲ್ಲಿ ಆದಾಮನಿಂದ ಹಿಡಿದು ಪ್ರತಿಯೊಬ್ಬರ ವಂಶಾವಳಿಯಲ್ಲಿರುವ ಜನರ ಪಟ್ಟಿಯೊಂದಿಗೆ ಆರಂಭವಾಗುತ್ತದೆ.
* “ಪೂರ್ವಕಾಲ ವೃತ್ತಾಂತ ಪ್ರಥಮ ಭಾಗ” ಗ್ರಂಥದಲ್ಲಿ ಅರಸನಾದ ಸೌಲನ ಅಂತಿಮ ಜೀವನ ಮತ್ತು ಅರಸನಾದ ದಾವೀದನ ಆಳ್ವಿಕೆಯ ಸಂಘಟನೆಗಳನ್ನು ಬರೆದಿರುತ್ತಾರೆ.
* “ಪೂರ್ವಕಾಲ ವೃತ್ತಾಂತ ದ್ವಿತೀಯ ಭಾಗ” ಗ್ರಂಥದಲ್ಲಿ ಆರಸನಾದ ಸೊಲೊಮೋನ ಮತ್ತು ಇತರ ಅನೇಕ ಅರಸರ ಆಳ್ವಿಕೆಯ ಚರಿತ್ರೆಯನ್ನು ಬರೆದಿರುತ್ತಾರೆ, ಇದರಲ್ಲಿ ದೇವಾಲಯವನ್ನು ನಿರ್ಮಿಸುವುದು, ದಕ್ಷಿಣ ರಾಜ್ಯವಾದ ಯೂದಾದಿಂದ ಉತ್ತರ ರಾಜ್ಯವಾದ ಇಸ್ರಾಯೇಲನ್ನು ಬೇರ್ಪಡಿಸುವ ವಿಷಯಗಳು ಒಳಗೊಂಡಿರುತ್ತವೆ.
* 2 ಪೂರ್ವಕಾಲ ವೃತ್ತಾಂತಗಳ ಅಂತಿಮ ಸಂಘಟನೆಗಳು ಬಾಬೆಲೋನಿಯ ಸೆರೆಯ ಪ್ರಾರಂಭದ ವಿಷಯಗಳನ್ನು ವಿವರಿಸುತ್ತವೆ.
(ಈ ಪದಗಳನ್ನು ಸಹ ನೋಡಿರಿ : [ಬಾಬೆಲೋನಿಯ](../names/babylon.md), [ದಾವೀದ](../names/david.md), [ಹೊರದೂಡು](../other/exile.md), [ಇಸ್ರಾಯೇಲ್ ರಾಜ್ಯ](../names/kingdomofisrael.md), [ಯೂದಾ](../names/kingdomofjudah.md), [ಸೊಲೊಮೋನ](../names/solomon.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.27:23-24](rc://*/tn/help/1ch/27/23)
* [2 ಪೂರ್ವ.33:18-20](rc://*/tn/help/2ch/33/18)
* [ಎಸ್ತೇರಳು.10:1-2](rc://*/tn/help/est/10/01)
## ಪದ ಡೇಟಾ:
* Strong's: H1697