kn_tw/bible/other/exile.md

3.6 KiB

ಸೆರೆ, ಸೆರೆಹೊಯ್ಯುವುದು

ಅರ್ಥವಿವರಣೆ:

“ಸೆರೆ” ಎನ್ನುವ ಪದವು ಜನರನ್ನು ತಮ್ಮ ಸ್ವದೇಶದಿಂದ ದೂರದಲ್ಲಿರುವ ಇನ್ನೊಂದು ಕಡೆಯಲ್ಲಿ ವಾಸ ಮಾಡುವುದಕ್ಕೆ ಬಲವಂತ ಮಾಡುವುದನ್ನು ಸೂಚಿಸುತ್ತದೆ.

  • ರಾಜಕೀಯ ಕಾರಣಗಳಿಂದ ಅಥವಾ ಶಿಕ್ಷಿಸುವ ಕಾರಣದಿಂದ ಜನರು ಸಹಜವಾಗಿ ಸೆರೆಗೆ ಹೊಯ್ಯಲ್ಪಡುತ್ತಾರೆ.
  • ವಶಪಡಿಸಿಕೊಂಡಿರುವ ಜನರನ್ನು ವಶಪಡಿಸಿಕೊಳ್ಳುವ ಸೈನ್ಯದ ದೇಶಕ್ಕೆ ಅವರಿಗಾಗಿ ಕೆಲಸ ಮಾಡಿಸಿಕೊಳ್ಳುವುದಕ್ಕೆ ಸೆರೆಯಾಗಿ ಕರೆದುಕೊಂಡು ಹೋಗುತ್ತಿದ್ದರು.
  • “ಬಾಬೆಲಿನ ಸೆರೆ” (ಅಥವಾ “ಗಡಿಪಾರು”) ಎನ್ನುವುದು ಸತ್ಯವೇದದ ಇತಿಹಾಸದಲ್ಲಿ ಯೂದಾಯ ಪ್ರಾಂತ್ಯದಲ್ಲಿರುವ ಯೆಹೂದ್ಯರನ್ನು ಅವರ ಮನೆಗಳಿಂದ ಸೆರೆಹೊಯ್ದ ಮತ್ತು ಬಾಬೆಲಿನಲ್ಲಿ ವಾಸವಾಗಿರಬೇಕೆಂದು ಬಲವಂತ ಮಾಡಿದ ಅವಧಿಯಾಗಿದೆ. ಇದು ಸುಮಾರು 70 ವರ್ಷಗಳ ಕಾಲ ಇತ್ತು.
  • “ಸೆರೆಹೊಯ್ಯಲ್ಪಟ್ಟವರು” ಎನ್ನುವ ನುಡಿಗಟ್ಟು ಸೆರೆಯಲ್ಲಿರುವ ಜನರನ್ನು ಸೂಚಿಸುತ್ತದೆ, ಅಂದರೆ ತಮ್ಮ ಮನೆಗಳಿಂದ ಗಡಿಪಾರಾಗಿದ್ದವರು ಎಂದರ್ಥ.

ಅನುವಾದ ಸಲಹೆಗಳು:

  • “ಸೆರೆ” ಎನ್ನುವ ಪದವನ್ನು"ಹೊರ ಕಳುಹಿಸು” ಅಥವಾ “ಬಲವಂತದಿಂದ ಹೊರದೊಬ್ಬು” ಅಥವಾ “ಬಹಿಷ್ಕಾರ ಮಾಡು” ಎಂದೂ ಅನುವಾದ ಮಾಡಬಹುದು.
  • “ಸೆರೆ” ಎನ್ನುವ ಪದವನ್ನು “ಹೊರ ಕಳುಹಿಸಲ್ಪಟ್ಟ ಸಮಯ” ಅಥವಾ “ಬಹಿಷ್ಕಾರ ಮಾಡಿದ ಸಮಯ” ಅಥವಾ “ಬಲವಂತಮಾಡಿದ ಸಮಯ” ಅಥವಾ “ಬಹಿಷ್ಕಾರ ಮಾಡಿದ ಸಮಯ” ಎಂದು ಅರ್ಥಬರುವ ಮಾತುಗಳೊಂದಿಗೆ ಅನುವಾದ ಮಾಡಬಹುದು.
  • “ಸೆರೆಹೊಯ್ಯಲ್ಪಟ್ಟವರು” ಎಂದು ಅನುವಾದ ಮಾಡುವ ವಿಧಾನಗಳಲ್ಲಿ “ಸೆರೆಹೊಯಲ್ಪಟ್ಟ ಜನರು” ಅಥವಾ “ಬಹಿಷ್ಕರಿಸಲ್ಪಟ್ಟ ಜನರು” ಅಥವಾ “ಬಾಬೆಲಿಗೆ ಸೆರೆಹೊಯ್ಯಲ್ಪಟ್ಟ ಜನರು” ಸೇರಿರುತ್ತಾರೆ.

(ಇವುಗಳನ್ನು ಸಹ ನೋಡಿರಿ : ಬಾಬೆಲ್, ಯೂದಾಯ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ಡೇಟಾ:

  • Strong's: H1123, H1473, H1540, H1541, H1546, H1547, H3212, H3318, H5080, H6808, H7617, H7622, H8689, G39270