4.1 KiB
4.1 KiB
ಹುಳಿಯಿಲ್ಲದ ರೊಟ್ಟಿ
ಪದದ ಅರ್ಥವಿವರಣೆ:
“ಹುಳಿಯಿಲ್ಲದ ರೊಟ್ಟಿ” ಎನ್ನುವ ಮಾತು ಹುಳಿಯಿಲ್ಲದೆ ಮಾಡುವ ರೊಟ್ಟಿಯನ್ನು ಸೂಚಿಸುತ್ತದೆ. ಈ ವಿಧವಾದ ರೊಟ್ಟಿ ಸಪಾಟವಾಗಿರುತ್ತದೆ ಯಾಕಂದರೆ ಇದು ಉಬ್ಬುಕೊಳ್ಳುವುದಕ್ಕೆ ಇದರಲ್ಲಿ ಹುಳಿ ಇರುವುದಿಲ್ಲ.
- ದೇವರು ಇಸ್ರಾಯೇಲ್ಯರನ್ನು ಐಗುಪ್ತದಲ್ಲಿನ ಗುಲಾಮಗಿರಿಯಿಂದ ಬಿಡುಗಡೆಯಾದಾಗ, ಐಗುಪ್ತರ ರೊಟ್ಟಿ ಉಬ್ಬಿಕೊಳ್ಳುವುದಕ್ಕೆ ಮುಂಚಿತವಾಗಿ ಆಲಸ್ಯ ಮಾಡದಂತೆ ಅತೀ ಶೀಘ್ರವಾಗಿ ಐಗುಪ್ತನ್ನು ಬಿಟ್ಟು ಹೋಗಬೇಕೆಂದು ಆತನು ಅವರಿಗೆ ಹೇಳಿದನು. ಇದರಿಂದ ಅವರು ತಮ್ಮ ಆಹಾರದಲ್ಲಿನ ಹುಳಿಯಿಲ್ಲದ ರೊಟ್ಟಿಯನ್ನು ತಿಂದರು. ಆ ದಿನದಿಂದ ಹುಳಿಯಿಲ್ಲದ ರೊಟ್ಟಿ ಪ್ರತಿ ವರ್ಷ ಆಚರಿಸುವ ಪಸ್ಕ ಹಬ್ಬದಲ್ಲಿ ಉಪಯೋಗಿಸಲಾಗುತ್ತಿತ್ತು, ಇದು ನಡೆದಿರುವ ಆ ಸಮಯವನ್ನು ಜ್ಞಾಪಕ ಮಾಡುತ್ತದೆ.
- ಹುಳಿ ಎನ್ನುವುದು ಕೆಲವೊಂದುಬಾರಿ ಪಾಪಕ್ಕೆ ಗುರುತಾಗಿ ಉಪಯೋಗಿಸುವುದರಿಂದ, “ಹುಳಿಯಿಲ್ಲದ ರೊಟ್ಟಿ” ಎನ್ನುವುದು ಒಬ್ಬ ದೇವರನ್ನು ಘನಪಡಿಸುವ ವಿಧಾನದಲ್ಲಿ ಆ ವ್ಯಕ್ತಿಯ ಜೀವನದಿಂದ ಪಾಪವನ್ನು ತೆಗೆಯಲ್ಪಟ್ಟಿದೆ ಎನ್ನುವುದನ್ನು ಪ್ರತಿನಿಧಿಸುತ್ತದೆ.
ಅನುವಾದ ಸಲಹೆಗಳು:
- ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಹುಳಿ ಇಲ್ಲದ ರೊಟ್ಟಿ” ಅಥವಾ “ಉಬ್ಬಿಕೊಳ್ಳದ ಸಪಾಟವಾದ ರೊಟ್ಟಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
- ಈ ಪದಕ್ಕೆ ಮಾಡಿರುವ ಆನುವಾದವು “ಹುಳಿ, ಹುದುಗು” ಎನ್ನುವ ಪದವನ್ನು ನೀವು ಹೇಗೆ ಅನುವಾದ ಮಾಡುದ್ದೀರಿ ಎನ್ನುವುದಕ್ಕೆ ಸರಿಯಾಗಿರಲು ನೋಡಿಕೊಳ್ಳಿರಿ.
- ಕೆಲವು ಸಂದರ್ಭಗಳಲ್ಲಿ “ಹುಳಿಯಿಲ್ಲದ ರೊಟ್ಟಿ” ಎನ್ನುವ ಮಾತು “ಹುಳಿಯಿಲ್ಲದ ರೊಟ್ಟಿಯ ಔತಣ” ಎನ್ನುವ ಮಾತನ್ನು ಸೂಚಿಸುತ್ತದೆ ಮತ್ತು ಆ ವಿಧಾನದಲ್ಲಿಯೇ ಇದನ್ನು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ರೊಟ್ಟಿ, ಐಗುಪ್ತ, ಹಬ್ಬ, ಪಸ್ಕ, ಪಾಪ, ಹುಳಿ)
ಸತ್ಯವೇದದ ಅನುಬಂಧ ವಾಕ್ಯಗಳು :
- 1 ಕೊರಿಂಥ.05:6-8
- 2 ಪೂರ್ವ.30:13-15
- ಅಪೊ.ಕೃತ್ಯ.12:3-4
- ವಿಮೋ.23:14-15
- ಎಜ್ರಾ.06:21-22
- ಆದಿ.19:1-3
- ನ್ಯಾಯಾ.06:21
- ಯಾಜಕ.08:1-3
- ಲೂಕ.22:1-2
ಪದ ಡೇಟಾ:
- Strong's: H4682, G106