kn_tw/bible/kt/unleavenedbread.md

33 lines
4.1 KiB
Markdown

# ಹುಳಿಯಿಲ್ಲದ ರೊಟ್ಟಿ
## ಪದದ ಅರ್ಥವಿವರಣೆ:
“ಹುಳಿಯಿಲ್ಲದ ರೊಟ್ಟಿ” ಎನ್ನುವ ಮಾತು ಹುಳಿಯಿಲ್ಲದೆ ಮಾಡುವ ರೊಟ್ಟಿಯನ್ನು ಸೂಚಿಸುತ್ತದೆ. ಈ ವಿಧವಾದ ರೊಟ್ಟಿ ಸಪಾಟವಾಗಿರುತ್ತದೆ ಯಾಕಂದರೆ ಇದು ಉಬ್ಬುಕೊಳ್ಳುವುದಕ್ಕೆ ಇದರಲ್ಲಿ ಹುಳಿ ಇರುವುದಿಲ್ಲ.
* ದೇವರು ಇಸ್ರಾಯೇಲ್ಯರನ್ನು ಐಗುಪ್ತದಲ್ಲಿನ ಗುಲಾಮಗಿರಿಯಿಂದ ಬಿಡುಗಡೆಯಾದಾಗ, ಐಗುಪ್ತರ ರೊಟ್ಟಿ ಉಬ್ಬಿಕೊಳ್ಳುವುದಕ್ಕೆ ಮುಂಚಿತವಾಗಿ ಆಲಸ್ಯ ಮಾಡದಂತೆ ಅತೀ ಶೀಘ್ರವಾಗಿ ಐಗುಪ್ತನ್ನು ಬಿಟ್ಟು ಹೋಗಬೇಕೆಂದು ಆತನು ಅವರಿಗೆ ಹೇಳಿದನು. ಇದರಿಂದ ಅವರು ತಮ್ಮ ಆಹಾರದಲ್ಲಿನ ಹುಳಿಯಿಲ್ಲದ ರೊಟ್ಟಿಯನ್ನು ತಿಂದರು. ಆ ದಿನದಿಂದ ಹುಳಿಯಿಲ್ಲದ ರೊಟ್ಟಿ ಪ್ರತಿ ವರ್ಷ ಆಚರಿಸುವ ಪಸ್ಕ ಹಬ್ಬದಲ್ಲಿ ಉಪಯೋಗಿಸಲಾಗುತ್ತಿತ್ತು, ಇದು ನಡೆದಿರುವ ಆ ಸಮಯವನ್ನು ಜ್ಞಾಪಕ ಮಾಡುತ್ತದೆ.
* ಹುಳಿ ಎನ್ನುವುದು ಕೆಲವೊಂದುಬಾರಿ ಪಾಪಕ್ಕೆ ಗುರುತಾಗಿ ಉಪಯೋಗಿಸುವುದರಿಂದ, “ಹುಳಿಯಿಲ್ಲದ ರೊಟ್ಟಿ” ಎನ್ನುವುದು ಒಬ್ಬ ದೇವರನ್ನು ಘನಪಡಿಸುವ ವಿಧಾನದಲ್ಲಿ ಆ ವ್ಯಕ್ತಿಯ ಜೀವನದಿಂದ ಪಾಪವನ್ನು ತೆಗೆಯಲ್ಪಟ್ಟಿದೆ ಎನ್ನುವುದನ್ನು ಪ್ರತಿನಿಧಿಸುತ್ತದೆ.
## ಅನುವಾದ ಸಲಹೆಗಳು:
* ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಹುಳಿ ಇಲ್ಲದ ರೊಟ್ಟಿ” ಅಥವಾ “ಉಬ್ಬಿಕೊಳ್ಳದ ಸಪಾಟವಾದ ರೊಟ್ಟಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* ಈ ಪದಕ್ಕೆ ಮಾಡಿರುವ ಆನುವಾದವು “ಹುಳಿ, ಹುದುಗು” ಎನ್ನುವ ಪದವನ್ನು ನೀವು ಹೇಗೆ ಅನುವಾದ ಮಾಡುದ್ದೀರಿ ಎನ್ನುವುದಕ್ಕೆ ಸರಿಯಾಗಿರಲು ನೋಡಿಕೊಳ್ಳಿರಿ.
* ಕೆಲವು ಸಂದರ್ಭಗಳಲ್ಲಿ “ಹುಳಿಯಿಲ್ಲದ ರೊಟ್ಟಿ” ಎನ್ನುವ ಮಾತು “ಹುಳಿಯಿಲ್ಲದ ರೊಟ್ಟಿಯ ಔತಣ” ಎನ್ನುವ ಮಾತನ್ನು ಸೂಚಿಸುತ್ತದೆ ಮತ್ತು ಆ ವಿಧಾನದಲ್ಲಿಯೇ ಇದನ್ನು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ರೊಟ್ಟಿ](../other/bread.md), [ಐಗುಪ್ತ](../names/egypt.md), [ಹಬ್ಬ](../other/feast.md), [ಪಸ್ಕ](../kt/passover.md), [ಪಾಪ](../other/servant.md), [ಹುಳಿ](../kt/sin.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಕೊರಿಂಥ.05:6-8](../other/yeast.md)
* [2 ಪೂರ್ವ.30:13-15](rc://*/tn/help/1co/05/06)
* [ಅಪೊ.ಕೃತ್ಯ.12:3-4](rc://*/tn/help/2ch/30/13)
* [ವಿಮೋ.23:14-15](rc://*/tn/help/act/12/03)
* [ಎಜ್ರಾ.06:21-22](rc://*/tn/help/exo/23/14)
* [ಆದಿ.19:1-3](rc://*/tn/help/ezr/06/21)
* [ನ್ಯಾಯಾ.06:21](rc://*/tn/help/gen/19/01)
* [ಯಾಜಕ.08:1-3](rc://*/tn/help/jdg/06/21)
* [ಲೂಕ.22:1-2](rc://*/tn/help/lev/08/01)
## ಪದ ಡೇಟಾ:
* Strong's: H4682, G106