3.0 KiB
3.0 KiB
ರಬ್ಬಿ
ಅರ್ಥವಿವರಣೆ:
“ರಬ್ಬಿ” ಎನ್ನುವ ಮಾತು ಅಕ್ಷರಾರ್ಥವಾಗಿ “ನನ್ನ ಬೋಧಕನು” ಅಥವಾ “ನನ್ನ ಗುರುವು” ಎಂದರ್ಥ.
- ಯೆಹೂದ ಧರ್ಮದ ಬೋಧಕನನ್ನು, ವಿಶೇಷವಾಗಿ ದೇವರ ಧರ್ಮಶಾಸ್ತ್ರದ ಬೋಧಕನನ್ನು ಸಂಬೋಧಿಸುವುದಕ್ಕೆ ಉಪಯೋಗಿಸಲ್ಪಟ್ಟಿರುವ ಗೌರವವುಳ್ಳ ಬಿರುದಾಗಿರುತ್ತದೆ.
- ಸ್ನಾನೀಕನಾದ ಯೋಹಾನನು ಮತ್ತು ಯೇಸುವು ಕೆಲವು ಬಾರಿ ತಮ್ಮ ಶಿಷ್ಯರಿಂದ “ರಬ್ಬಿ” ಎಂದು ಕರೆಯಲ್ಪಟ್ಟಿದ್ದರು.
ಅನುವಾದ ಸಲಹೆಗಳು:
- ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ನನ್ನ ಬೋಧಕನು” ಅಥವಾ “ನನ್ನ ಗುರುವು” ಅಥವಾ “ಮಾನ್ಯ ಗುರುವು” ಅಥವಾ “ಧಾರ್ಮಿಕ ಗುರುವು” ಎನ್ನುವ ಮಾತುಗಳು ಒಳಗೊಂಡಿರುತ್ತವೆ. ಕೆಲವೊಂದು ಭಾಷೆಗಳಲ್ಲಿ ವಂದನೆಗಳನ್ನು ಹೇಳುವುದಕ್ಕೆ ಈ ರೀತಿ ಅಕ್ಷರಗಳನ್ನು ದೊಡ್ಡದಾಗಿ ಬರೆಯುತ್ತಾರೆ, ಇನ್ನೂ ಕೆಲವು ಭಾಷೆಗಳಲ್ಲಿ ಆ ರೀತಿ ಉಪಯೋಗಿಸುವುದಿಲ್ಲ.
- ಗುರುಗಳನ್ನು ಸಾಧಾರಣವಾಗಿ ಸಂಬೋಧಿಸುವ ವಿಶೇಷವಾದ ವಿಧಾನವನ್ನು ಯೋಜನಾ ಭಾಷೆಗಳಲ್ಲಿ ಉಪಯೋಗಿಸುತ್ತಿರಬಹುದು.
- ಅನುವಾದ ಮಾಡಲ್ಪಟ್ಟಿರುವ ಈ ಪದವು ಯೇಸು ಪಾಠಶಾಲೆಯ ಗುರುವೆಂದು ಸೂಚಿಸದಂತೆ ನೋಡಿಕೊಳ್ಳಿರಿ.
- ಸ್ಥಳೀಯ ಅಥವಾ ರಾಷ್ಟ್ರೀಯ ಭಾಷೆಯಲ್ಲಿ ಅನುವಾದ ಮಾಡಿದ ಸತ್ಯವೇದಗಳಲ್ಲಿ “ರಬ್ಬಿ” ಎನ್ನುವ ಪದವನ್ನು ಯಾವರೀತಿ ಅನುವಾದ ಮಾಡಿದ್ದಾರೆಂದು ಗಮನಿಸಿರಿ.
(ನೋಡಿ: ಅಪರಿಚಿತರನ್ನು ಹೇಗೆ ಅನುವಾದಿಸುವುದು)
(ಇದನ್ನೂ ಸಹ ನೋಡಿರಿ : ಗುರುವು)
ಸತ್ಯವೇದದ ಅನುಬಂಧ ವಾಕ್ಯಗಳು:
ಪದದ ಡೇಟಾ:
- Strong's: G44610