kn_tw/bible/kt/rabbi.md

31 lines
3.0 KiB
Markdown

# ರಬ್ಬಿ
## ಅರ್ಥವಿವರಣೆ:
“ರಬ್ಬಿ” ಎನ್ನುವ ಮಾತು ಅಕ್ಷರಾರ್ಥವಾಗಿ “ನನ್ನ ಬೋಧಕನು” ಅಥವಾ “ನನ್ನ ಗುರುವು” ಎಂದರ್ಥ.
* ಯೆಹೂದ ಧರ್ಮದ ಬೋಧಕನನ್ನು, ವಿಶೇಷವಾಗಿ ದೇವರ ಧರ್ಮಶಾಸ್ತ್ರದ ಬೋಧಕನನ್ನು ಸಂಬೋಧಿಸುವುದಕ್ಕೆ ಉಪಯೋಗಿಸಲ್ಪಟ್ಟಿರುವ ಗೌರವವುಳ್ಳ ಬಿರುದಾಗಿರುತ್ತದೆ.
* ಸ್ನಾನೀಕನಾದ ಯೋಹಾನನು ಮತ್ತು ಯೇಸುವು ಕೆಲವು ಬಾರಿ ತಮ್ಮ ಶಿಷ್ಯರಿಂದ “ರಬ್ಬಿ” ಎಂದು ಕರೆಯಲ್ಪಟ್ಟಿದ್ದರು.
## ಅನುವಾದ ಸಲಹೆಗಳು:
* ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ನನ್ನ ಬೋಧಕನು” ಅಥವಾ “ನನ್ನ ಗುರುವು” ಅಥವಾ “ಮಾನ್ಯ ಗುರುವು” ಅಥವಾ “ಧಾರ್ಮಿಕ ಗುರುವು” ಎನ್ನುವ ಮಾತುಗಳು ಒಳಗೊಂಡಿರುತ್ತವೆ. ಕೆಲವೊಂದು ಭಾಷೆಗಳಲ್ಲಿ ವಂದನೆಗಳನ್ನು ಹೇಳುವುದಕ್ಕೆ ಈ ರೀತಿ ಅಕ್ಷರಗಳನ್ನು ದೊಡ್ಡದಾಗಿ ಬರೆಯುತ್ತಾರೆ, ಇನ್ನೂ ಕೆಲವು ಭಾಷೆಗಳಲ್ಲಿ ಆ ರೀತಿ ಉಪಯೋಗಿಸುವುದಿಲ್ಲ.
* ಗುರುಗಳನ್ನು ಸಾಧಾರಣವಾಗಿ ಸಂಬೋಧಿಸುವ ವಿಶೇಷವಾದ ವಿಧಾನವನ್ನು ಯೋಜನಾ ಭಾಷೆಗಳಲ್ಲಿ ಉಪಯೋಗಿಸುತ್ತಿರಬಹುದು.
* ಅನುವಾದ ಮಾಡಲ್ಪಟ್ಟಿರುವ ಈ ಪದವು ಯೇಸು ಪಾಠಶಾಲೆಯ ಗುರುವೆಂದು ಸೂಚಿಸದಂತೆ ನೋಡಿಕೊಳ್ಳಿರಿ.
* ಸ್ಥಳೀಯ ಅಥವಾ ರಾಷ್ಟ್ರೀಯ ಭಾಷೆಯಲ್ಲಿ ಅನುವಾದ ಮಾಡಿದ ಸತ್ಯವೇದಗಳಲ್ಲಿ “ರಬ್ಬಿ” ಎನ್ನುವ ಪದವನ್ನು ಯಾವರೀತಿ ಅನುವಾದ ಮಾಡಿದ್ದಾರೆಂದು ಗಮನಿಸಿರಿ.
(ನೋಡಿ: [ಅಪರಿಚಿತರನ್ನು ಹೇಗೆ ಅನುವಾದಿಸುವುದು](rc://*/ta/man/translate/translate-unknown))
(ಇದನ್ನೂ ಸಹ ನೋಡಿರಿ : [ಗುರುವು](../other/teacher.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [ಯೋಹಾನ.1:49-51](rc://*/tn/help/jhn/01/49)
* [ಯೋಹಾನ.6:24-25](rc://*/tn/help/jhn/06/24)
* [ಮಾರ್ಕ.14:43-46](rc://*/tn/help/mrk/14/43)
* [ಮತ್ತಾಯ.23:8-10](rc://*/tn/help/mat/23/08)
## ಪದದ ಡೇಟಾ:
* Strong's: G44610