4.7 KiB
4.7 KiB
ದೇವರ ಜನರು, ನನ್ನ ಜನರು
ಪದದ ಅರ್ಥವಿವರಣೆ:
“ದೇವರ ಜನರು” ಎನ್ನುವ ಮಾತು ದೇವರೊಂದಿಗೆ ವಿಶೇಷವಾದ ಸಂಬಂಧವನ್ನು ಹೊಂದಿರುವುದಕ್ಕೆ ಆತನು ಲೋಕದೊಳಗಿಂದ ಕರೆದ ಜನರನ್ನು ಸೂಚಿಸುತ್ತದೆ.
- “ನನ್ನ ಜನರು” ಎಂದು ದೇವರು ಹೇಳಿದಾಗ, ಆತನು ತನ್ನೊಂದಿಗೆ ಸಂಬಂಧವನ್ನು ಹೊಂದಿರುವ ಮತ್ತು ಆಯ್ಕೆ ಮಾಡಿಕೊಂಡಿರುವ ಜನರ ಕುರಿತಾಗಿ ಮಾತನಾಡುತ್ತಿದ್ದಾನೆ.
- ದೇವರ ಜನರು ಆತನಿಂದ ಆದುಕೊಂಡಿರುತ್ತಾರೆ ಮತ್ತು ಆತನನ್ನು ಮೆಚ್ಚಿಸುವ ವಿಧಾನದಲ್ಲಿ ಜೀವಿಸುವುದಕ್ಕೆ ಈ ಲೋಕದೊಳಗಿಂದ ಪ್ರತ್ಯೇಕಿಸಲ್ಪಟ್ಟಿರುತ್ತಾರೆ. ಆತನು ಕೂಡ ಅವರನ್ನು ತನ್ನ ಮಕ್ಕಳೆಂದು ಕರೆಯುತ್ತಾನೆ.
- ಹಳೇ ಒಡಂಬಡಿಕೆಯಲ್ಲಿ “ದೇವರ ಜನರು” ದೇವರಿಂದ ಆಯ್ಕೆ ಮಾಡಲ್ಪಟ್ಟಿರುವ ಮತ್ತು ಆತನಿಗೆ ವಿಧೇಯತೆ ತೋರಿಸುವುದಕ್ಕೆ, ಆತನನ್ನು ಸೇವಿಸುವುದಕ್ಕೆ ಲೋಕದ ಎಲ್ಲಾ ದೇಶಗಳಿಂದ ಪ್ರತ್ಯೇಕಿಸಲ್ಪಟ್ಟಿರುವ ಇಸ್ರಾಯೇಲ್ ದೇಶವನ್ನು ಸೂಚಿಸುತ್ತದೆ.
- ಹೊಸ ಒಡಂಬಡಿಕೆಯಲ್ಲಿ “ದೇವರ ಜನರು” ಎನ್ನುವ ಮಾತು ವಿಶೇಷವಾಗಿ ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಮತ್ತು ಸಭೆ ಎಂದು ಕರೆಯಲ್ಪಡುವ ಎಲ್ಲಾ ಜನರನ್ನು ಸೂಚಿಸುತ್ತದೆ. ಇದರಲ್ಲಿ ಯೆಹೂದ್ಯರು ಮತ್ತು ಅನ್ಯರು ಕೂಡ ಒಳಗೊಂಡಿರುತ್ತಾರೆ.
ಅನುವಾದ ಸಲಹೆಗಳು:
- “ದೇವರ ಜನರು” ಎನ್ನುವ ಮಾತನ್ನು “ದೇವ ಜನರು” ಅಥವಾ “ದೇವರನ್ನು ಆರಾಧಿಸುವ ಜನರು” ಅಥವಾ “ದೇವರನ್ನು ಸೇವಿಸುವ ಜನರು” ಅಥವಾ “ದೇವರಿಗೆ ಸಂಬಂಧಪಟ್ಟ ಜನರು” ಎಂದೂ ಅನುವಾದ ಮಾಡಬಹುದು.
- “ನನ್ನ ಜನರು” ಎಂದು ದೇವರು ಹೇಳುತ್ತಿರುವಾಗ, ಇದನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ನಾನು ಆದುಕೊಂಡಿರುವ ಜನರು” ಅಥವಾ “ನನ್ನನ್ನು ಆರಾಧಿಸುವ ಜನರು” ಅಥವಾ “ನನಗೆ ಸಂಬಂಧಪಟ್ಟ ಜನರು” ಎಂದೂ ಅನುವಾದ ಮಾಡಬಹುದು.
- ಅದೇ ರೀತಿಯಾಗಿ, “ನಿನ್ನ ಜನರು” ಎನ್ನುವ ಮಾತನ್ನು “ನಿನಗೆ ಸಂಬಂಧಪಟ್ಟ ಜನರು” ಅಥವಾ “ನಿನಗೆ ಸಂಬಂಧಪಟ್ಟ ನೀನು ಆಯ್ಕೆ ಮಾಡಿಕೊಂಡಿರುವ ಜನರು” ಎಂದೂ ಅನುವಾದ ಮಾಡಬಹುದು.
- “ಆತನ ಜನರು” ಎನ್ನುವ ಮಾತನ್ನು ಕೂಡ “ಆತನಿಗೆ ಸಂಬಂಧಪಟ್ಟಿರುವ ಜನರು” ಅಥವಾ “ಆತನಿಗೆ ಸಂಬಂಧಪಟ್ಟಿರುವ ದೇವರು ಆದುಕೊಂಡಿರುವ ಜನರು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಇಸ್ರಾಯೇಲ್, ಜನರ ಗುಂಪು)
ಸತ್ಯವೇದದ ಅನುಬಂಧ ವಾಕ್ಯಗಳು :
- 1 ಪೂರ್ವ.11:1-3
- ಅಪೊ.ಕೃತ್ಯ.07:33-34
- ಅಪೊ.ಕೃತ್ಯ.07:51-53
- ಅಪೊ.ಕೃತ್ಯ.10:36-38
- ದಾನಿ.09:24-25
- ಯೆಶಯಾ.02:5-6
- ಯೆರೆ.06:20-22
- ಯೋವೆ.03:16-17
- ಮೀಕ.06:3-5
- ಪ್ರಕ.13:7-8
ಪದ ಡೇಟಾ:
- Strong's: H430, H5971, G2316, G2992