kn_tw/bible/kt/peopleofgod.md

37 lines
4.7 KiB
Markdown

# ದೇವರ ಜನರು, ನನ್ನ ಜನರು
## ಪದದ ಅರ್ಥವಿವರಣೆ:
“ದೇವರ ಜನರು” ಎನ್ನುವ ಮಾತು ದೇವರೊಂದಿಗೆ ವಿಶೇಷವಾದ ಸಂಬಂಧವನ್ನು ಹೊಂದಿರುವುದಕ್ಕೆ ಆತನು ಲೋಕದೊಳಗಿಂದ ಕರೆದ ಜನರನ್ನು ಸೂಚಿಸುತ್ತದೆ.
* “ನನ್ನ ಜನರು” ಎಂದು ದೇವರು ಹೇಳಿದಾಗ, ಆತನು ತನ್ನೊಂದಿಗೆ ಸಂಬಂಧವನ್ನು ಹೊಂದಿರುವ ಮತ್ತು ಆಯ್ಕೆ ಮಾಡಿಕೊಂಡಿರುವ ಜನರ ಕುರಿತಾಗಿ ಮಾತನಾಡುತ್ತಿದ್ದಾನೆ.
* ದೇವರ ಜನರು ಆತನಿಂದ ಆದುಕೊಂಡಿರುತ್ತಾರೆ ಮತ್ತು ಆತನನ್ನು ಮೆಚ್ಚಿಸುವ ವಿಧಾನದಲ್ಲಿ ಜೀವಿಸುವುದಕ್ಕೆ ಈ ಲೋಕದೊಳಗಿಂದ ಪ್ರತ್ಯೇಕಿಸಲ್ಪಟ್ಟಿರುತ್ತಾರೆ. ಆತನು ಕೂಡ ಅವರನ್ನು ತನ್ನ ಮಕ್ಕಳೆಂದು ಕರೆಯುತ್ತಾನೆ.
* ಹಳೇ ಒಡಂಬಡಿಕೆಯಲ್ಲಿ “ದೇವರ ಜನರು” ದೇವರಿಂದ ಆಯ್ಕೆ ಮಾಡಲ್ಪಟ್ಟಿರುವ ಮತ್ತು ಆತನಿಗೆ ವಿಧೇಯತೆ ತೋರಿಸುವುದಕ್ಕೆ, ಆತನನ್ನು ಸೇವಿಸುವುದಕ್ಕೆ ಲೋಕದ ಎಲ್ಲಾ ದೇಶಗಳಿಂದ ಪ್ರತ್ಯೇಕಿಸಲ್ಪಟ್ಟಿರುವ ಇಸ್ರಾಯೇಲ್ ದೇಶವನ್ನು ಸೂಚಿಸುತ್ತದೆ.
* ಹೊಸ ಒಡಂಬಡಿಕೆಯಲ್ಲಿ “ದೇವರ ಜನರು” ಎನ್ನುವ ಮಾತು ವಿಶೇಷವಾಗಿ ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಮತ್ತು ಸಭೆ ಎಂದು ಕರೆಯಲ್ಪಡುವ ಎಲ್ಲಾ ಜನರನ್ನು ಸೂಚಿಸುತ್ತದೆ. ಇದರಲ್ಲಿ ಯೆಹೂದ್ಯರು ಮತ್ತು ಅನ್ಯರು ಕೂಡ ಒಳಗೊಂಡಿರುತ್ತಾರೆ.
## ಅನುವಾದ ಸಲಹೆಗಳು:
* “ದೇವರ ಜನರು” ಎನ್ನುವ ಮಾತನ್ನು “ದೇವ ಜನರು” ಅಥವಾ “ದೇವರನ್ನು ಆರಾಧಿಸುವ ಜನರು” ಅಥವಾ “ದೇವರನ್ನು ಸೇವಿಸುವ ಜನರು” ಅಥವಾ “ದೇವರಿಗೆ ಸಂಬಂಧಪಟ್ಟ ಜನರು” ಎಂದೂ ಅನುವಾದ ಮಾಡಬಹುದು.
* “ನನ್ನ ಜನರು” ಎಂದು ದೇವರು ಹೇಳುತ್ತಿರುವಾಗ, ಇದನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ನಾನು ಆದುಕೊಂಡಿರುವ ಜನರು” ಅಥವಾ “ನನ್ನನ್ನು ಆರಾಧಿಸುವ ಜನರು” ಅಥವಾ “ನನಗೆ ಸಂಬಂಧಪಟ್ಟ ಜನರು” ಎಂದೂ ಅನುವಾದ ಮಾಡಬಹುದು.
* ಅದೇ ರೀತಿಯಾಗಿ, “ನಿನ್ನ ಜನರು” ಎನ್ನುವ ಮಾತನ್ನು “ನಿನಗೆ ಸಂಬಂಧಪಟ್ಟ ಜನರು” ಅಥವಾ “ನಿನಗೆ ಸಂಬಂಧಪಟ್ಟ ನೀನು ಆಯ್ಕೆ ಮಾಡಿಕೊಂಡಿರುವ ಜನರು” ಎಂದೂ ಅನುವಾದ ಮಾಡಬಹುದು.
* “ಆತನ ಜನರು” ಎನ್ನುವ ಮಾತನ್ನು ಕೂಡ “ಆತನಿಗೆ ಸಂಬಂಧಪಟ್ಟಿರುವ ಜನರು” ಅಥವಾ “ಆತನಿಗೆ ಸಂಬಂಧಪಟ್ಟಿರುವ ದೇವರು ಆದುಕೊಂಡಿರುವ ಜನರು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಇಸ್ರಾಯೇಲ್](../kt/israel.md), [ಜನರ ಗುಂಪು](../other/peoplegroup.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.11:1-3](rc://*/tn/help/1ch/11/01)
* [ಅಪೊ.ಕೃತ್ಯ.07:33-34](rc://*/tn/help/act/07/33)
* [ಅಪೊ.ಕೃತ್ಯ.07:51-53](rc://*/tn/help/act/07/51)
* [ಅಪೊ.ಕೃತ್ಯ.10:36-38](rc://*/tn/help/act/10/36)
* [ದಾನಿ.09:24-25](rc://*/tn/help/dan/09/24)
* [ಯೆಶಯಾ.02:5-6](rc://*/tn/help/isa/02/05)
* [ಯೆರೆ.06:20-22](rc://*/tn/help/jer/06/20)
* [ಯೋವೆ.03:16-17](rc://*/tn/help/jol/03/16)
* [ಮೀಕ.06:3-5](rc://*/tn/help/mic/06/03)
* [ಪ್ರಕ.13:7-8](rc://*/tn/help/rev/13/07)
## ಪದ ಡೇಟಾ:
* Strong's: H430, H5971, G2316, G2992