2.4 KiB
2.4 KiB
ಪರಾತ್ಪರನು
ಸತ್ಯಾಂಶಗಳು:
“ಪರಾತ್ಪರನು” ಎನ್ನುವ ಪದವು ದೇವರಿಗೆ ಬಿರುದಾಗಿರುತ್ತದೆ. ಇದು ಆತನ ಔನ್ನತ್ಯವನ್ನು ಅಥವಾ ಅಧಿಕಾರವನ್ನು ಸೂಚಿಸುತ್ತದೆ.
- ಈ ಪದಕ್ಕಿರುವ ಅರ್ಥವೂ “ಸಾರ್ವಭೌಮಾಧಿಕಾರ” ಅಥವಾ “ಸರ್ವೋಚ್ಚ” ಎನ್ನುವ ಪದಗಳಿಗಿರುವ ಅರ್ಥವನ್ನೇ ಹೊಂದಿರುತ್ತದೆ.
- “ಪರಾತ್ಪರ” ಎನ್ನುವ ಈ ಬಿರುದು ಭೌತಿಕವಾದ ಎತ್ತರವನ್ನು ಅಥವಾ ದೂರವನ್ನು ಸೂಚಿಸುವುದಿಲ್ಲ. ಈ ಪದವು ಆತನ ಅತ್ಯಧಿಕ ಮಹತ್ವವನ್ನು ಸೂಚಿಸುತ್ತದೆ.
ಅನುವಾದ ಸಲಹೆಗಳು:
- ಈ ಪದವನ್ನು “ಪರಾತ್ಪರ ದೇವರು” ಅಥವಾ “ಅತ್ಯುನ್ನತ ಸರ್ವೋಚ್ಚ ಸ್ಥಾನವಿರುವವನು” ಅಥವಾ “ದೇವರಾಗಿರುವ ಪರಾತ್ಪರನು” ಅಥವಾ “ಮಹತ್ವವುಳ್ಳವನು” ಅಥವಾ “ಸರ್ವೋನ್ನತನು” ಅಥವಾ “ಎಲ್ಲಾವುದಕ್ಕಿಂತ ದೊಡ್ಡವನಾಗಿರುವ ದೇವರು” ಎಂದೂ ಅನುವಾದ ಮಾಡಬಹುದು.
- “ಸರ್ವೋನ್ನತನು” ಎನ್ನುವ ಪದವನ್ನು ಉಪಯೋಗಿಸಿದಾಗ, ಇದು ಭೌತಿಕವಾದ ಎತ್ತರವನ್ನು ಸೂಚಿಸದಂತೆ ನೋಡಿಕೊಳ್ಳಿರಿ.
(ಈ ಪದಗಳನ್ನು ಸಹ ನೋಡಿರಿ : ದೇವರು)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.07:47-50
- ಅಪೊ.ಕೃತ್ಯ.16:16-18
- ದಾನಿ.04:17-18
- ಧರ್ಮೋ.32:7-8
- ಆದಿ.14:17-18
- ಇಬ್ರಿ.07:1-3
- ಹೋಶೆಯ.07:16
- ಪ್ರಲಾಪ.03:34-36
- ಲೂಕ.01:30-33
ಪದ ಡೇಟಾ:
- Strong's: H5945, G5310