3.1 KiB
3.1 KiB
ಪರಿಶುದ್ಧನು
ಪದದ ಅರ್ಥವಿವರಣೆ:
“ಪರಿಶುದ್ಧನು” ಎನ್ನುವ ಪದವು ಸತ್ಯವೇದದಲ್ಲಿ ಯಾವಾಗಲೂ ದೇವರನ್ನು ಮಾತ್ರ ಸೂಚಿಸುತ್ತದೆ.
- ಹಳೇ ಒಡಂಬಡಿಕೆಯಲ್ಲಿ ಈ ಬಿರುದು ಅಥವಾ ಈ ಪದವು ಅನೇಕಬಾರಿ “ಇಸ್ರಾಯೇಲ್ಯರ ಸದಮಲ ಸ್ವಾಮಿ” ಎನ್ನುವ ಮಾತಿನಲ್ಲಿ ಕಂಡುಬರುತ್ತದೆ.
- ಹೊಸ ಒಡಂಬಡಿಕೆಯಲ್ಲಿ ಯೇಸುವು “ಪರಿಶುದ್ಧನು” ಎಂಬುದಾಗಿ ಸೂಚಿಸಲ್ಪಟ್ಟಿದ್ದಾನೆ.
- “ಪರಿಶುದ್ಧನು” ಎನ್ನುವ ಪದವನ್ನು ಕೆಲವೊಂದುಸಲ ಸತ್ಯವೇದದಲ್ಲಿ ದೇವದೂತನಿಗೆ ಸೂಚಿಸಲಾಗಿದೆ.
ಅನುವಾದ ಸಲಹೆಗಳು:
- ವಾಸ್ತವಿಕವಾಗಿ “ಪರಿಶುದ್ಧನು” (ಇರುವಾತನಾಗಿರುವ “ಒಬ್ಬನಿಗೆ” ಅನ್ವಯಿಸಲಾಗುತ್ತದೆ) ಎನ್ನುವುದು ಅಕ್ಷರಶಃ ಪದ. ಅನೇಕ ಭಾಷೆಗಳು (ಆಂಗ್ಲ ಭಾಷೆಯಂತೆ) ಇದನ್ನು ನಾಮಪದವನ್ನಾಗಿ ಅನುವಾದ ಮಾಡುತ್ತಾರೆ, (“ಒಬ್ಬನು” ಅಥವಾ “ದೇವರು” ಎಂಬುದಾಗಿ ಅನುವಾದಿಸುತ್ತಾರೆ).
- ಈ ಪದವನ್ನು “ಪರಿಶುದ್ಧನಾದ ದೇವರು” ಅಥವಾ “ಪ್ರತ್ಯೇಕಿಸಲ್ಪಟ್ಟವನು” ಎಂಬುದಾಗಿಯೂ ಅನುವಾದ ಮಾಡುತ್ತಾರೆ.
- “ಇಸ್ರಾಯೇಲರ ಸದಮಲ ಸ್ವಾಮಿ” ಎನ್ನುವ ಮಾತನ್ನು “ಇಸ್ರಾಯೇಲ್ಯರು ಆರಾಧನೆ ಮಾಡುವ ಪರಿಶುದ್ಧನಾದ ದೇವರು” ಅಥವಾ “ಇಸ್ರಾಯೇಲ್ಯರನ್ನು ಆಳುವ ಸದಮಲ ಸ್ವಾಮಿ” ಎಂದೂ ಅನುವಾದ ಮಾಡಬಹುದು.
- “ಪರಿಶುದ್ಧ” ಎಂದು ಭಾಷಾಂತರಿಸಲು ಬಳಿಸಿದ ಅದೇ ಪದ ಅಥವಾ ಪದಗುಚ್ಛವನ್ನು ಅನುವಾದಿಸುವುದು ಉತ್ತಮವಾಗಿದೆ.
(ಈ ಪದಗಳನ್ನು ಸಹ ನೋಡಿರಿ : ಪರಿಶುದ್ಧ, ದೇವರು)
ಸತ್ಯವೇದದ ಅನುಬಂಧ ವಾಕ್ಯಗಳು :
- 1 ಯೋಹಾನ.02:20-21
- 2 ಅರಸ.19:20-22
- ಅಪೊ.ಕೃತ್ಯ.02:27-28
- ಅಪೊ.ಕೃತ್ಯ.03:13-14
- ಯೆಶಯಾ.05:15-17
- ಯೆಶಯಾ.41:14-15
- ಲೂಕ.04:33-34
ಪದ ಡೇಟಾ:
- Strong's: H2623, H376, H6918, G40, G3741