4.1 KiB
4.1 KiB
ಒಪ್ಪಿಕೋ, ಒಪ್ಪಿಕೊಂಡಿವೆ, ಒಪ್ಪಿಸುತ್ತದೆ, ಒಪ್ಪಿಕೊಳ್ಳುವಿಕೆ
ಪದದ ಅರ್ಥವಿವರಣೆ:
ಒಪ್ಪಿಕೋ ಎನ್ನುವ ಪದಕ್ಕೆ ಸತ್ಯವಾದದ್ದನ್ನು ಒಪ್ಪಿಕೊಳ್ಳುವುದು ಅಥವಾ ಅದನ್ನು ದೃಡೀಕರಿಸುವುದು ಎಂದರ್ಥ. “ಒಪ್ಪಿಕೊಳ್ಳುವಿಕೆ” ಎನ್ನುವುದು ಸತ್ಯವಾದ ವಿಷಯವನ್ನು ಒಪ್ಪಿಕೊಳ್ಳುವುದು ಅಥವಾ ಅದನ್ನು ವ್ಯಾಖ್ಯೆಯನ್ನಾಗಿ ಹೇಳುವುದು.
- “ಒಪಿಕೋ” ಎನ್ನುವ ಪದವು ದೇವರ ಕುರಿತಾದ ಸತ್ಯವನ್ನು ಧೈರ್ಯವಾಗಿ ಹೇಳುವುದನ್ನು ಸೂಚಿಸುತ್ತದೆ. ನಾವು ಪಾಪಿಗಳೆಂದು ಗ್ರಹಿಸುವುದನ್ನು ಅಥವಾ ಒಪ್ಪಿಕೊಳ್ಳುವುದನ್ನೂ ಸೂಚಿಸುತ್ತದೆ.
- ಜನರು ತಮ್ಮ ಪಾಪಗಳನ್ನು ದೇವರ ಬಳಿ ಒಪ್ಪಿಕೊಂಡರೆ, ಆತನು ಅವರನ್ನು ಕ್ಷಮಿಸುತ್ತಾನೆಂದು ಸತ್ಯವೇದವು ಹೇಳುತ್ತಿದೆ.
- ವಿಶ್ವಾಸಿಗಳು ತಮ್ಮ ಪಾಪಗಳನ್ನು ಒಬ್ಬರಲ್ಲೊಬ್ಬರು ಒಪ್ಪಿಕೊಂಡಾಗ, ಇದು ಆತ್ಮೀಕವಾದ ಸ್ವಸ್ಥತೆಯನ್ನು ತೆಗೆದುಕೊಂಡು ಬರುವುದೆಂದು ಅಪೊಸ್ತಲನಾದ ಯಾಕೋಬನು ತನ್ನ ಪತ್ರಿಕೆಯಲ್ಲಿ ಬರೆದಿದ್ದಾನೆ.
- ಯೇಸು ಕ್ರಿಸ್ತ ಒಡೆಯನೆಂದು ಒಂದಾನೊಂದು ದಿನ ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕಾಗುತ್ತದೆಯೆಂದು ಅಥವಾ ಪ್ರಕಟಿಸಬೇಕಾಗುತ್ತದೆಯೆಂದು ಅಪೊಸ್ತಲನಾದ ಪೌಲನು ಫಿಲಿಪ್ಪಿದವರಿಗೆ ಬರೆದಿದ್ದಾನೆ.
- ಜನರು ಯೇಸು ಒಡೆಯನೆಂದು ಮತ್ತು ದೇವರು ಆತನನ್ನು ಮರಣದಿಂದ ಎಬ್ಬಿಸಿದ್ದಾರೆಂದು ನಂಬಿ ಒಪ್ಪಿಕೊಳ್ಳುವುದಾದರೆ, ಅವರು ರಕ್ಷಿಸಲ್ಪಡುತ್ತಾರೆಂದು ಪೌಲನು ಕೂಡ ಹೇಳಿದ್ದಾನೆ.
ಅನುವಾದ ಸಲಹೆಗಳು:
- ಸಂದರ್ಭಾನುಸಾರವಾಗಿ “ಒಪ್ಪಿಕೋ” ಎನ್ನುವ ಪದವನ್ನು “ಅರಿಕೆ” ಅಥವಾ “ಸಾಕ್ಷಿ ಕೊಡು” ಅಥವಾ “ಘೋಷಣೆ ಮಾಡು” ಅಥವಾ “ತಿಳಿಸು” ಅಥವಾ “ದೃಢೀಕರಿಸು” ಎಂದೂ ಅನುವಾದ ಮಾಡಬಹುದು.
- “ಒಪ್ಪಿಕೊಳ್ಳುವಿಕೆ” ಎನ್ನುವ ಪದವನ್ನು “ಘೋಷಣೆ ಮಾಡು” ಅಥವಾ “ಸಾಕ್ಷಿ ಕೊಡು” ಅಥವಾ “ನಾವು ನಂಬುವುದನ್ನು ವ್ಯಾಖ್ಯಾನಿಸು” ಅಥವಾ “ಪಾಪವನ್ನು ಅರಿಕೆ ಮಾಡುವುದು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ನಂಬಿಕೆ, ಸಾಕ್ಷಿ)
ಸತ್ಯವೇದದ ಅನುಬಂಧ ವಾಕ್ಯಗಳು :
- 1 ಯೋಹಾನ.01:8-10
- 2 ಯೋಹಾನ.01:7-8
- ಯಾಕೋಬ.05:16-18
- ಯಾಜಕ.05:5-6
- ಮತ್ತಾಯ.03:4-6
- ನೆಹೆ.01:6-7
- ಫಿಲಿಪ್ಪ.02:9-11
- ಕೀರ್ತನೆ.038:17-18
ಪದ ಡೇಟಾ:
- Strong's: H3034, H8426, G1843, G3670, G3671