kn_tw/bible/kt/confess.md

34 lines
4.1 KiB
Markdown

# ಒಪ್ಪಿಕೋ, ಒಪ್ಪಿಕೊಂಡಿವೆ, ಒಪ್ಪಿಸುತ್ತದೆ, ಒಪ್ಪಿಕೊಳ್ಳುವಿಕೆ
## ಪದದ ಅರ್ಥವಿವರಣೆ:
ಒಪ್ಪಿಕೋ ಎನ್ನುವ ಪದಕ್ಕೆ ಸತ್ಯವಾದದ್ದನ್ನು ಒಪ್ಪಿಕೊಳ್ಳುವುದು ಅಥವಾ ಅದನ್ನು ದೃಡೀಕರಿಸುವುದು ಎಂದರ್ಥ. “ಒಪ್ಪಿಕೊಳ್ಳುವಿಕೆ” ಎನ್ನುವುದು ಸತ್ಯವಾದ ವಿಷಯವನ್ನು ಒಪ್ಪಿಕೊಳ್ಳುವುದು ಅಥವಾ ಅದನ್ನು ವ್ಯಾಖ್ಯೆಯನ್ನಾಗಿ ಹೇಳುವುದು.
* “ಒಪಿಕೋ” ಎನ್ನುವ ಪದವು ದೇವರ ಕುರಿತಾದ ಸತ್ಯವನ್ನು ಧೈರ್ಯವಾಗಿ ಹೇಳುವುದನ್ನು ಸೂಚಿಸುತ್ತದೆ. ನಾವು ಪಾಪಿಗಳೆಂದು ಗ್ರಹಿಸುವುದನ್ನು ಅಥವಾ ಒಪ್ಪಿಕೊಳ್ಳುವುದನ್ನೂ ಸೂಚಿಸುತ್ತದೆ.
* ಜನರು ತಮ್ಮ ಪಾಪಗಳನ್ನು ದೇವರ ಬಳಿ ಒಪ್ಪಿಕೊಂಡರೆ, ಆತನು ಅವರನ್ನು ಕ್ಷಮಿಸುತ್ತಾನೆಂದು ಸತ್ಯವೇದವು ಹೇಳುತ್ತಿದೆ.
* ವಿಶ್ವಾಸಿಗಳು ತಮ್ಮ ಪಾಪಗಳನ್ನು ಒಬ್ಬರಲ್ಲೊಬ್ಬರು ಒಪ್ಪಿಕೊಂಡಾಗ, ಇದು ಆತ್ಮೀಕವಾದ ಸ್ವಸ್ಥತೆಯನ್ನು ತೆಗೆದುಕೊಂಡು ಬರುವುದೆಂದು ಅಪೊಸ್ತಲನಾದ ಯಾಕೋಬನು ತನ್ನ ಪತ್ರಿಕೆಯಲ್ಲಿ ಬರೆದಿದ್ದಾನೆ.
* ಯೇಸು ಕ್ರಿಸ್ತ ಒಡೆಯನೆಂದು ಒಂದಾನೊಂದು ದಿನ ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕಾಗುತ್ತದೆಯೆಂದು ಅಥವಾ ಪ್ರಕಟಿಸಬೇಕಾಗುತ್ತದೆಯೆಂದು ಅಪೊಸ್ತಲನಾದ ಪೌಲನು ಫಿಲಿಪ್ಪಿದವರಿಗೆ ಬರೆದಿದ್ದಾನೆ.
* ಜನರು ಯೇಸು ಒಡೆಯನೆಂದು ಮತ್ತು ದೇವರು ಆತನನ್ನು ಮರಣದಿಂದ ಎಬ್ಬಿಸಿದ್ದಾರೆಂದು ನಂಬಿ ಒಪ್ಪಿಕೊಳ್ಳುವುದಾದರೆ, ಅವರು ರಕ್ಷಿಸಲ್ಪಡುತ್ತಾರೆಂದು ಪೌಲನು ಕೂಡ ಹೇಳಿದ್ದಾನೆ.
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ “ಒಪ್ಪಿಕೋ” ಎನ್ನುವ ಪದವನ್ನು “ಅರಿಕೆ” ಅಥವಾ “ಸಾಕ್ಷಿ ಕೊಡು” ಅಥವಾ “ಘೋಷಣೆ ಮಾಡು” ಅಥವಾ “ತಿಳಿಸು” ಅಥವಾ “ದೃಢೀಕರಿಸು” ಎಂದೂ ಅನುವಾದ ಮಾಡಬಹುದು.
* “ಒಪ್ಪಿಕೊಳ್ಳುವಿಕೆ” ಎನ್ನುವ ಪದವನ್ನು “ಘೋಷಣೆ ಮಾಡು” ಅಥವಾ “ಸಾಕ್ಷಿ ಕೊಡು” ಅಥವಾ “ನಾವು ನಂಬುವುದನ್ನು ವ್ಯಾಖ್ಯಾನಿಸು” ಅಥವಾ “ಪಾಪವನ್ನು ಅರಿಕೆ ಮಾಡುವುದು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ನಂಬಿಕೆ](../kt/faith.md), [ಸಾಕ್ಷಿ](../kt/testimony.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಯೋಹಾನ.01:8-10](rc://*/tn/help/1jn/01/08)
* [2 ಯೋಹಾನ.01:7-8](rc://*/tn/help/2jn/01/07)
* [ಯಾಕೋಬ.05:16-18](rc://*/tn/help/jas/05/16)
* [ಯಾಜಕ.05:5-6](rc://*/tn/help/lev/05/05)
* [ಮತ್ತಾಯ.03:4-6](rc://*/tn/help/mat/03/04)
* [ನೆಹೆ.01:6-7](rc://*/tn/help/neh/01/06)
* [ಫಿಲಿಪ್ಪ.02:9-11](rc://*/tn/help/php/02/09)
* [ಕೀರ್ತನೆ.038:17-18](rc://*/tn/help/psa/038/017)
## ಪದ ಡೇಟಾ:
* Strong's: H3034, H8426, G1843, G3670, G3671