3.3 KiB
3.3 KiB
ದೂಷಣೆ, ದೇವದೂಷಣೆ, ಧರ್ಮನಿಂದೆಯ
ಪದದ ಅರ್ಥವಿವರಣೆ:
ಸತ್ಯವೇದದಲ್ಲಿ, ದೇವರಿಗೆ ಅಥವಾ ಜನರಿಗೆ ಅಗೌರವ ತೋರುವದನ್ನು “ದೂಷಣೆ” ಎಂದು ಸೂಚಿಸಲಾಗಿದೆ. ಇನ್ನೊಬ್ಬರ ಕುರಿತಾಗಿ “ದೇವದೂಷಣೆ” ಅಂದರೆ ಬೇರೆಯವರು ಅವನ ಕುರಿತಾಗಿ ಕೆಟ್ಟದಾಗಿ ಅಥವಾ ಅಸತ್ಯವಾಗಿ ಯೋಚಿಸುವಂತೆ ಆ ವ್ಯಕ್ತಿಗೆ ವಿರುದ್ಧವಾಗಿ ಮಾತಾಡುವುದು ಎಂದರ್ಥ.
- ಅನೇಕ ಬಾರಿ, ದೇವದೂಷಣೆ ಎಂದರೆ ಆತನ ಕುರಿತಾಗಿ ಸುಳ್ಳು ಹೇಳುವುದು ಅಥವಾ ಅವನನ್ನು ಅವಮಾನಿಸುವುದು ಅಥವಾ ಅಗೌರವಪಡಿಸುವಂತೆ ಮಾತನಾಡುವುದು ಅಥವಾ ಆತನಿಗೆ ಅಗೌರವ ತರುವಂತೆ ಅನೈತಿಕವಾಗಿ ಪ್ರವರ್ತಿಸುವುದು ಎಂದರ್ಥ.
- ಒಬ್ಬ ಮನುಷ್ಯನು ನಾನೇ ದೇವರು ಎಂದು ಹೇಳಿಕೊಳ್ಳುವುದು ಅಥವಾ ನಿಜವಾದ ದೇವರಲ್ಲದೆ ಮತ್ತೊಂದು ದೇವರು ಇದ್ದನೆಂದು ಹೇಳುವುದು ದೂಷಣೆಯಾಗಿರುತ್ತದೆ.
- ದೇವ ದೂಷಣೆ ಮಾಡುವ ಜನರನ್ನು ಸೂಚಿಸಲು ಕೆಲವೊಂದು ಆಂಗ್ಲ ಅನುವಾದಗಳಲ್ಲಿ “ಅಪನಿಂದಕ” ಎಂದು ಅನುವಾದ ಮಾಡಿದ್ದಾರೆ.
ಅನುವಾದ ಸಲಹೆಗಳು:
- “ಕೆಟ್ಟ ಸಂಗತಿಗಳನ್ನು ಹೇಳುವುದು” ಅಥವಾ “ದೇವರನ್ನು ಅಗೌರವಪಡಿಸುವುದು” ಅಥವಾ “ಅಪನಿಂದಕ” ಎಂದು “ದೇವ ದೂಷಣೆ” ಎನ್ನುವ ಪದವನ್ನು ಅನುವಾದ ಮಾಡಬಹುದು.
- “ಬೇರೆಯವರ ಕುರಿತಾಗಿ ಸುಳ್ಳು ಮಾತಾಡುವುದು” ಅಥವಾ “ಅಪನಿಂದಕ” ಅಥವಾ “ಸುಳ್ಳು ಸುದ್ಧಿಗಳನ್ನು ಹರಡಿಸುವುದು” ಎಂದು “ದೂಷಣೆ” ಎನ್ನುವ ಪದವನ್ನು ಅನುವಾದ ಮಾಡಬಹುದು
(ಈ ಪದಗಳನ್ನು ಸಹ ನೋಡಿರಿ : ಅಗೌರವ, ಅಪನಿಂದಕ)
ಸತ್ಯವೇದದ ಅನುಬಂಧ ವಾಕ್ಯಗಳು:
- 1 ತಿಮೋಥಿ.01:12-14
- ಅಪೊ.ಕೃತ್ಯ.06:11
- ಅಪೊ.ಕೃತ್ಯ.26:9-11
- ಯಾಕೋಬ.02:5-7
- ಯೋಹಾನ.10:32-33
- ಲೂಕ.12:10
- ಮಾರ್ಕ.14:64
- ಮತ್ತಾಯ.12:31
- ಮತ್ತಾಯ.26:65
- ಕೀರ್ತನೆ.074:10
ಪದ ಡೇಟಾ:
- Strong's: H1288, H1442, H2778, H5006, H5007, H5344, G987, G988, G989