kn_tw/bible/kt/antichrist.md

4.7 KiB

ಕ್ರಿಸ್ತವಿರೋಧಿ, ಕ್ರಿಸ್ತವಿರೋಧಿಗಳು

ಪದದ ಅರ್ಥವಿವರಣೆ:

“ಕ್ರಿಸ್ತವಿರೋಧಿ” ಎನ್ನುವ ಪದವು ಯೇಸು ಕ್ರಿಸ್ತನಿಗೆ ಅಥವಾ ಆತನ ಬೋಧನೆಗಳಿಗೆ ವಿರುದ್ಧವಾಗಿ ಮತ್ತು ಆತನ ಕಾರ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ವ್ಯಕ್ತಿಯನ್ನು ಸೂಚಿಸುತ್ತದೆ. ಪ್ರಪಂಚದಲ್ಲಿ ಕ್ರಿಸ್ತವಿರೋಧಿಗಳು ಅನೇಕರಿದ್ದಾರೆ.

  • ಯೇಸುಕ್ರಿಸ್ತ ಮೆಸ್ಸಯ್ಯಾ ಅಲ್ಲವೆಂದು ಅಥವಾ ಯೇಸು ದೇವರೂ ಅಲ್ಲ ಮತ್ತು ಮನುಷ್ಯನೂ ಅಲ್ಲವೆಂದು ಹೇಳಿ ಮನುಷ್ಯರನ್ನು ಮೋಸಗೊಳಿಸುವ ವ್ಯಕ್ತಿಯೇ ಕ್ರಿಸ್ತವಿರೋಧಿಯೆಂದು ಅಪೊಸ್ತಲನಾದ ಯೋಹಾನನು ಬರೆಯುತ್ತಿದ್ದಾನೆ.
  • ಯೇಸುವಿನ ಕಾರ್ಯಗಳನ್ನು ತಿರಸ್ಕರಿಸುವ ಕ್ರಿಸ್ತವಿರೋಧಿಯ ಸಾಮಾನ್ಯ ಆತ್ಮ ಪ್ರಪಂಚದಲ್ಲಿದೆಯೆಂದು ಸತ್ಯವೇದವು ಕೂಡ ಬೋಧಿಸುತ್ತಿದೆ.
  • ಹೊಸ ಒಡಂಬಡಿಕೆ ಪುಸ್ತಕದ ಪ್ರಕಟನೆ ಗ್ರಂಥದ 13ನೇ ಅಧ್ಯಾಯದಲ್ಲಿನ ಮೃಗವನ್ನು ಸಾಮಾನ್ಯವಾಗಿ ಕೊನೆಯ “ಕ್ರಿಸ್ತವಿರೋಧಿ” ಎಂದು ಗುರುತಿಸಲ್ಪಡುತ್ತಾನೆ, ಇವನು ಅಂತ್ಯಕಾಲದಲ್ಲಿ ಹೊರಬರುತ್ತಾನೆ. ದೇವರ ಜನರನ್ನು ನಾಶಗೊಳಿಸಲು ಈ ಮನುಷ್ಯನು ಪ್ರಯತ್ನಿಸುತ್ತಾನೆ, ಆದರೆ ಇವನು ಯೇಸುವಿನ ಮೂಲಕ ಸೋಲಿಸಲ್ಪಡುತ್ತಾನೆ.
  • ಅಪೊಸ್ತಲನಾದ ಪೌಲನು ಈ ಮನುಷ್ಯನನ್ನು "ಅಧರ್ಮಸ್ವರೂಪನು" ಎಂದು ಸೂಚಿಸುತ್ತಾನೆ (2 ಥೆಸ 2:3) ಮತ್ತು ಕ್ರೈಸ್ತ ವಿರೋಧಿಯ ಸಾಮಾನ್ಯ ಆತ್ಮವನ್ನು "ಅಧರ್ಮಸ್ವರೂಪನ ಗುಪ್ತ ಬಲ" ಎಂದು ಹೇಳುತ್ತಾನೆ.

(2 ಥೆಸ. 2:7).

ಅನುವಾದ ಸಲಹೆಗಳು:

  • ಈ ಪದವನ್ನು ಇನ್ನೊಂದು ರೀತಿಯಲ್ಲಿ ಅನುವಾದ ಮಾಡುವದರಲ್ಲಿ “ಕ್ರಿಸ್ತನ-ಎದುರಾಳಿ” ಅಥವಾ “ಕ್ರಿಸ್ತನ ಶತ್ರು” ಅಥವಾ “ಕ್ರಿಸ್ತನಿಗೆ ವಿರುದ್ಧವಾಗಿ ನಡೆದುಕೊಳ್ಳುವ ವ್ಯಕ್ತಿ” ಎನ್ನುವ ಪದಗಳನ್ನೂ ಸೇರಿಸಬಹುದು.
  • “ಕ್ರಿಸ್ತವಿರೋಧಿಯ ಆತ್ಮವು” ಎನ್ನುವ ಮಾತು “ಕ್ರಿಸ್ತನಿಗೆ ವಿರುದ್ಧವಾಗಿ ನಡೆದುಕೊಳ್ಳುವ ಆತ್ಮ” ಅಥವಾ “ಕ್ರಿಸ್ತನ ಕುರಿತು ಸುಳ್ಳು ಬೋಧನೆಗಳನ್ನು ಮಾಡುವವರು” ಅಥವಾ “ಕ್ರಿಸ್ತನ ಕುರಿತು ಸುಳ್ಳು ಮಾತುಗಳನ್ನು ನಂಬುವ ಸ್ವಭಾವ” ಅಥವಾ “ಕ್ರಿಸ್ತನ ಕುರಿತು ಸುಳ್ಳು ಬೋಧನೆಗಳನ್ನು ಬೋಧಿಸುವ ಆತ್ಮ” ಎಂದೂ ಅನುವಾದ ಮಾಡಬಹುದು.
  • ಅದೇ ರೀತಿ ಈ ಪದವನ್ನು ಜಾತೀಯ ಭಾಷೆಯಲ್ಲಿ ಅಥವಾ ಸ್ಥಳೀಯ ಭಾಷೆಯಲ್ಲಿ ಸತ್ಯವೇದ ಅನುವಾದದಲ್ಲಿ ಯಾವರೀತಿ ಅನುವಾದ ಮಾಡಿದ್ದಾರೋ ಕೂಡ ನೋಡಿರಿ. (ಅನುವಾದ ಸಲಹೆಗಳು: /ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಕ್ರಿಸ್ತ, ತೋರಿಕೆ, ಶ್ರಮೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G500