kn_tw/bible/names/solomon.md

6.1 KiB

ಸೊಲೊಮೋನ

ಸತ್ಯಾಂಶಗಳು:

ಸೊಲೊಮೋನನು ಅರಸನಾದ ದಾವೀದನ ಮಕ್ಕಳಲ್ಲಿ ಒಬ್ಬನಾಗಿರುತ್ತಾನೆ. ಇವನ ತಾಯಿ ಬತ್ಷೆಬಳಾಗಿದ್ದಳು.

  • ಸೊಲೊಮೋನನು ಅರಸನಾದಾಗ, ನಿನಗೆ ಏನು ಬೇಕಾದರೂ ಬೇಡಿಕೋ ಎಂದು ದೇವರು ಅವನಿಗೆ ಹೇಳಿದನು. ಇದರಿಂದ ಜನರನ್ನು ನ್ಯಾಯವಾಗಿಯೂ ಮತ್ತು ಚೆನ್ನಾಗಿಯೂ ಆಳುವುದಕ್ಕೆ ಜ್ಞಾನ ಬೇಕೆಂದು ಸೊಲೊಮೋನನು ಕೇಳಿದನು. ದೇವರು ಸೊಲೊಮೋನನ ಮನವಿಯನ್ನು ಕೇಳಿ ಸಂತೋಷಪಟ್ಟನು, ಮತ್ತು ಆತನು ಅವನಿಗೆ ಜ್ಞಾನವನ್ನು, ಸಂಪತ್ತನ್ನು ಕೊಟ್ಟನು.
  • ಯೆರೂಸಲೇಮಿನಲ್ಲಿ ಕಟ್ಟಲ್ಪಟ್ಟಿರುವ ವೈಭವವುಳ್ಳ ದೇವಾಲಯಕ್ಕೆ ಸೊಲೊಮೋನನು ನಿರ್ಮಾಣಕನಾಗಿ ಪ್ರಸಿದ್ಧನಾಗಿದ್ದನು.
  • ಸೊಲೊಮೋನನು ತನ್ನ ಆಳ್ವಿಕೆಯ ಮೊದಲ ವರ್ಷಗಳಲ್ಲಿ ಜ್ಞಾನಪೂರ್ವಕವಾಗಿ ಜನರನ್ನು ಆಳಿದರೂ ಕೆಲವು ವರ್ಷಗಳನಂತರ ಇವನು ಮೂರ್ಖತನದಿಂದ ಬಹುಮಂದಿ ಅನ್ಯ ಸ್ತ್ರೀಯರನ್ನು ವಿವಾಹ ಮಾಡಿಕೊಂಡನು ಮತ್ತು ಅವರ ದೇವರುಗಳಾಗಿರುವ ವಿಗ್ರಹಗಳಿಗೆ ಆರಾಧನೆ ಮಾಡುವುದನ್ನು ಪ್ರಾರಂಭಿಸಿದನು.
  • ಸೊಲೊಮೋನನ ಅಪನಂಬಿಕೆಯ ಕಾರಣದಿಂದ ಇವನ ಮರಣವಾದನಂತರ, ದೇವರು ಇಸ್ರಾಯೇಲ್ಯರನ್ನು ಯೆಹೂದ್ಯ ಮತ್ತು ಇಸ್ರಾಯೇಲ್ ಎನ್ನುವ ಎರಡು ರಾಜ್ಯಗಳನ್ನಾಗಿ ವಿಭಾಗಿಸಿದರು. ಈ ರಾಜ್ಯಗಳು ಅನೇಕಬಾರಿ ಒಂದಕ್ಕೊಂದು ವಿರುದ್ಧವಾಗಿ ಯುದ್ಧಗಳನ್ನು ಮಾಡುತ್ತಿದ್ದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಬತ್ಷೆಬ, ದಾವೀದ, ಇಸ್ರಾಯೇಲ್, ಯೆಹೂದ್ಯ, ಇಸ್ರಾಯೇಲ್ ರಾಜ್ಯ, ದೇವಾಲಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 17:14_ ಆದನಂತರ ದಾವೀದ ಮತ್ತು ಬತ್ಷೆಬರು ಇನ್ನೊಬ್ಬ ಮಗನನ್ನು ಪಡೆದರು, ಅವರು ಆ ಶಿಶುವಿಗೆ ___ ಸೊಲೊಮೋನ ___ ಎಂದು ಹೆಸರಿಟ್ಟರು.
  • 18:01_ ಅನೇಕ ವರ್ಷಗಳಾದನಂತರ, ದಾವೀದನು ಮರಣಿಸಿದನು, ಮತ್ತು ತನ್ನ ಮಗ ___ ಸೊಲೊಮೋನನು ___ ಆಳುವುದಕ್ಕೆ ಆರಂಭಿಸಿದನು. ದೇವರು __ ಸೊಲೊಮೋನನೊಂದಿಗೆ __ ಮಾತನಾಡಿದರು ಮತ್ತು ನಿನಗೆ ಏನು ಬೇಕಾದರೂ ಅದನ್ನು ಬೇಡಿಕೋ ಎಂದು ದೇವರು ಅವನಿಗೆ ಹೇಳಿದನು. __ ಸೊಲೊಮೋನನು ____ ಜ್ಞಾನಕ್ಕಾಗಿ ಬೇಡಿಕೊಂಡಾಗ, ದೇವರು ತುಂಬಾ ಸಂತೋಷಪಟ್ಟನು ಮತ್ತು ಆತನು ಅವನನ್ನು ಲೋಕದಲ್ಲಿ ಜ್ಞಾನವುಳ್ಳ ಮನುಷ್ಯನನ್ನಾಗಿ ಮಾಡಿದನು. __ ಸೊಲೊಮೋನನು __ ಅನೇಕ ವಿಷಯಗಳನ್ನು ಕಲಿತುಕೊಂಡನು ಮತ್ತು ಮಹಾ ನ್ಯಾಯಾಧೀಶನಾಗಿದ್ದನು. ದೇವರು ಅವನನ್ನು ಶ್ರೀಮಂತನನ್ನಾಗಿ ಮಾಡಿದನು.
  • 18:02_ ದಾವೀದನು ದೇವಾಲಯವನ್ನು ಕಟ್ಟುವುದಕ್ಕೆ ಪ್ರಣಾಳಿಕೆ ಮಾಡಿ, ಅದಕ್ಕೆ ಸಂಬಂಧಪಟ್ಟ ವಸ್ತುಗಳನ್ನು ತರಿಸಿಟ್ಟನಂತರ ಯೆರೂಸಲೇಮಿನಲ್ಲಿ ___ ಸೊಲೊಮೋನನು ___ ದೇವಾಲಯವನ್ನು ನಿರ್ಮಿಸಿದನು.
  • 18:03_ ಆದರೆ ___ ಸೊಲೊಮೋನನು ___ ಇತರ ದೇಶಗಳಿಂದ ಬಂದಿರುವ ಸ್ತ್ರೀಯರನ್ನು ಪ್ರೀತಿಸಿದನು. ___ ಸೊಲೊಮೋನನು ___ ವೃದ್ಧಾಪ್ಯದಲ್ಲಿದ್ದಾಗ ಅವನು ಅವರ ದೇವರುಗಳನ್ನು ಆರಾಧನೆ ಮಾಡಿದನು.
  • 18:04_ ದೇವರು __ ಸೊಲೊಮೋನನ ___ ಮೇಲೆ ಕೋಪಗೊಂಡನು, __ ಸೊಲೊಮೋನನ ___ ಅಪನಂಬಿಕೆಗೆ ___ ಶಿಕ್ಷೆಯನ್ನಾಗಿ, ___ ಸೊಲೊಮೋನನ __ ಮರಣದನಂತರ ಇಸ್ರಾಯೇಲ್ ದೇಶವನ್ನು ಎರಡು ರಾಜ್ಯಗಳನ್ನಾಗಿ ವಿಂಗಡಿಸುತ್ತೇನೆಂದು ಆತನು ವಾಗ್ಧಾನ ಮಾಡಿದರು.

ಪದ ಡೇಟಾ:

  • Strong's: H8010, G4672