kn_tw/bible/names/bathsheba.md

3.7 KiB

ಬತ್ಷೆಬೆ

ಸತ್ಯಾಂಶಗಳು:

ಬತ್ಷೆಬೆ ಅರಸನಾದ ದಾವೀದನ ಸೈನ್ಯದಲ್ಲಿ ಸೈನಿಕನಾದ ಊರೀಯನ ಹೆಂಡತಿಯಾಗಿದ್ದಳು. ಊರೀಯನ ಮರಣದ ನಂತರ, ಆಕೆ ದಾವೀದನ ಹೆಂಡತಿಯೂ ಮತ್ತು ಸೊಲೊಮೋನಿನ ತಾಯಿಯೂ ಆದಳು.

  • ಬತ್ಷೆಬೆ ಊರೀಯನ ಹೆಂಡತಿಯಾಗಿದ್ದಾಗ ದಾವೀದನು ಆಕೆಯೊಂದಿಗೆ ವ್ಯಭಿಚಾರ ಮಾಡಿದನು.
  • ಬತ್ಷೆಬೆ ದಾವೀದನ ಮೂಲಕ ಗರ್ಭ ದರಿಸಿದಾಗ, ದಾವೀದನು ಊರೀಯನನ್ನು ಯುದ್ದದಲ್ಲಿ ಕೊಲ್ಲಿಸಿದನು.
  • ಆ ನಂತರ ದಾವೀದನು ಬತ್ಷೆಬೆಯನ್ನು ವಿವಾಹ ಮಾಡಿಕೊಂಡನು ಮತ್ತು ಆಕೆ ಅವರ ಮಗುವಿಗೆ ಜನನ ನೀಡಿದಳು.
  • ದಾವೀದನು ಮಾಡಿದ ಪಾಪದ ನಿಮಿತ್ತವಾಗಿ ಯೆಹೋವನು ಅವನ ಮಗು ಜನಿಸಿದ ಕೆಲವು ದಿನಗಳ ನಂತರ ಮರಣಿಸುವಂತೆ ಮಾಡಿದನು.
  • ನಂತರ, ಬತ್ಷೆಬೆ ಮತ್ತೊಬ್ಬ ಕುಮಾರನಿಗೆ ಜನ್ಮ ನೀಡಿದಳು, ಅವನ ಹೆಸರು ಸೊಲೊಮೋನ್, ದಾವೀದನ ನಂತರ ಅವನು ಅರಸನಾದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ದಾವೀದ, ಸೊಲೊಮೋನ್, ಊರೀಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಕೆಲವು ಉದಾಹರಣೆಗಳು :

  • 17:10 ಒಂದು ದಿನ, ದಾವೀದನ ಸೈನಿಕರೆಲ್ಲರೂ ಯುದ್ಧ ಮಾಡಲು ಮನೆಯಿಂದ ದೂರವಾಗಿರುವಾಗ, ಅವನು ಮಧ್ಯಾಹ್ನದ ನಿದ್ದೆಯಿಂದೆದ್ದು, ಸ್ನಾನ ಮಾಡುತ್ತಿರುವ ಒಬ್ಬ ಸುಂದರವಾದ ಸ್ತ್ರಿಯನ್ನು ಕಂಡನು. ಆಕೆಯ ಹೆಸರು ಬತ್ಷೆಬೆ.
  • 17:11 ಸ್ವಲ್ಪ ಕಾಲದ ನಂತರ ಬತ್ಷೆಬೆ ಗರ್ಭಿಣಿಯಾಗಿದ್ದಳೆಂದು ದಾವೀದನಿಗೆ ಸಂದೇಶವನ್ನು ಕಳುಹಿಸಿದಳು
  • 17:12 __ಬತ್ಷೆಬೆ__ನ ಗಂಡನಾದ, ಊರೀಯನು, ದಾವೀದನ ಅತ್ಯುತ್ತಮ ಸೈನಿಕರಲ್ಲಿ ಒಬ್ಬನಾಗಿದ್ದನು.
  • 17:13 ಊರೀಯನನ್ನು ಕೊಲ್ಲಿಸಿದ ನಂತರ, ದಾವೀದನು __ಬತ್ಷೆಬೆ__ಯನ್ನು ವಿವಾಹ ಮಾಡಿಕೊಂಡನು.
  • 17:14 ನಂತರ, ದಾವೀದನಿಗೆ ಮತ್ತು ಬತ್ಷೆಬೆಗೆ ಮೊತ್ತೊಬ್ಬ ಮಗ ಹುಟ್ಟಿದನು, ಮತ್ತು ಅವನಿಗೆ ಸೊಲೊಮೋನ್ ಎಂದು ಹೆಸರಿಟ್ಟರು.

ಪದ ಡೇಟಾ:

  • Strong's: H1339