kn_tw/bible/names/macedonia.md

2.6 KiB

ಮಕೆದೋನ್ಯ

ಸತ್ಯಾಂಶಗಳು:

ಹೊಸ ಒಡಂಬಡಿಕೆಯ ಕಾಲದಲ್ಲಿ, ಮಕೆದೋನ್ಯ ಎನ್ನುವುದು ರೋಮಾ ಸೀಮೆಯಾಗಿತ್ತು, ಇದು ಪುರಾತನ ಗ್ರೀಸ್ ಉತ್ತರಭಾಗದಲ್ಲಿ ಕಂಡುಬರುತ್ತದೆ.

  • ಸತ್ಯವೇದದಲ್ಲಿ ದಾಖಲಿಸಿದ ಕೆಲವೊಂದು ಪ್ರಾಮುಖ್ಯವಾದ ಮಕದೋನ್ಯ ಪಟ್ಟಣಗಳು - ಬೆರೋಯ, ಫಿಲಿಪ್ಪಿ, ಮತ್ತು ಥೆಸಲೋನಿಕ.
  • ದರ್ಶನದ ಮೂಲಕ ಮಕದೋನ್ಯದಲ್ಲಿರುವ ಜನರಿಗೆ ಸುವಾರ್ತೆಯನ್ನು ಸಾರಬೇಕೆಂದು ದೇವರು ಪೌಲನಿಗೆ ಹೇಳಿದನು.
  • ಪೌಲನು ಮತ್ತು ತನ್ನ ಜೊತೆ ಕೆಲಸಗಾರರು ಮಕದೋನ್ಯಕ್ಕೆ ಹೋದರು ಮತ್ತು ಅಲ್ಲಿರುವ ಜನರಿಗೆ ಯೇಸುವಿನ ಕುರಿತಾಗಿ ಹೇಳಿದರು ಮತ್ತು ಹೊಸ ವಿಶ್ವಾಸಿಗಳು ತಮ್ಮ ನಂಬಿಕೆಯಲ್ಲಿ ಅಥವಾ ವಿಶ್ವಾಸದಲ್ಲಿ ಬೆಳೆಯುವುದಕ್ಕೆ ಸಹಾಯ ಮಾಡಿದರು.
  • ಸತ್ಯವೇದದಲ್ಲಿ ಮಕದೋನ್ಯ ಪಟ್ಟಣಗಳಾಗಿರುವ ಫಿಲಿಪ್ಪಿ ಮತ್ತು ಥೆಸಲೋನಿಕದಲ್ಲಿರುವ ವಿಶ್ವಾಸಿಗಳಿಗೆ ಪೌಲನು ಪತ್ರಿಕೆಗಳನ್ನು ಬರೆದಿದ್ದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ನಂಬು, ಬೆರೋಯ, ವಿಶ್ವಾಸ, ಶುಭ ವಾರ್ತೆ, ಗ್ರೀಸ್, ಫಿಲಿಪ್ಪಿ, ಥೆಸಲೋನಿಕ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G3109, G3110