kn_tw/bible/names/greece.md

2.5 KiB

ಗ್ರೀಸ್, ಗ್ರೀಕರು

ಸತ್ಯಾಂಶಗಳು:

ಹೊಸ ಒಡಂಬಡಿಕೆಯ ಕಾಲದಲ್ಲಿ, ಗ್ರೀಸ್ ರೋಮಾ ಸಾಮ್ರಾಜ್ಯದ ಸಂಸ್ಥಾನವಾಗಿತ್ತು.

  • ಪ್ರಸ್ತುತ ಕಾಲದ ಗ್ರೀಸ್ಅಂತೆ, ಅದು ಮೆಡಿಟರೇನಿಯನ್ ಸಮುದ್ರ, ಏಜಿಯನ್ ಸಮುದ್ರ ಮತ್ತು ಅಯೋನಿ ಸಮುದ್ರಗಳ ಪರ್ಯಾಯ ದ್ವೀಪವಾಗಿತ್ತು (ಪೆನೆನ್ಸುಲ).
  • ಗ್ರೀಸ್ನಲ್ಲಿದ್ದ ಅನೇಕ ಪ್ರಾಂತ್ಯಗಳನ್ನು ಅಪೊಸ್ತಲನಾದ ಪೌಲನು ಸಂದರ್ಶಿಸಿದನು ಮತ್ತು ಕೊರಿಂಥ, ಥೆಸಲೋನಿಕ, ಫಿಲಿಪ್ಪ ಪಟ್ಟಣಗಳಲ್ಲಿ ಹಾಗೂ ಬೇರೆ ಪ್ರಾಂತ್ಯಗಳಲ್ಲಿ ಸಹ ಸಭೆಗಳನ್ನು ಸ್ಥಾಪಿಸಿದನು.
  • ಗ್ರೀಸ್ ದೇಶದವರನ್ನು “ಗ್ರೀಕರು” ಎಂದು ಕರೆಯುತ್ತಾರೆ ಮತ್ತು “ಗ್ರೀಕ್” ಅವರು ಮಾತಾಡುವ ಭಾಷೆಯಾಗಿರುತ್ತದೆ. ಅನೇಕವಾದ ರೋಮಾ ಸಂಸ್ಥಾನಗಳಲ್ಲಿ ಗ್ರೀಕ್ ಭಾಷೆ ಮಾತಾಡುತ್ತಿದ್ದರು, ಅವರಲ್ಲಿ ಯಹೂದಿಯರು ಸಹ ಇದ್ದರು.
  • ಕೆಲವೊಮ್ಮೆ “ಗ್ರೀಕ್” ಎನ್ನುವ ಪದವನ್ನು ಅನ್ಯರಿಗೆ ಸೂಚಿಸಲು ಉಪಯೋಗಿಸಲಾಗಿದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಕೊರಿಂಥ, ಅನ್ಯರು, ಗ್ರೀಕ್, ಇಬ್ರಿ, ಫಿಲಿಪ್ಪಿ, ಥೆಸಲೋನಿಕ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3120, G1671