kn_tw/bible/names/berea.md

1.8 KiB

ಬೆರೋಯ

ಸತ್ಯಾಂಶಗಳು:

ಹೊಸ ಒಡಂಬಡಿಕೆಯಲ್ಲಿ, ಸಮೃದ್ಧಿಯಾದ ಗ್ರೀಕ್ ಪಟ್ಟಣವಾದ ಬೆರೋಯ, ಮಕೆದೋನ್ಯ ಪ್ರಾಂತ್ಯದ ಆಗ್ನೇಯಕ್ಕೆ ಇತ್ತು, ಅದು ಥೆಸಲೋನೀಕ ಪಟ್ಟಣದ ದಕ್ಷಿಣಕ್ಕೆ ಸುಮಾರು 80 ಕಿಲೋಮೀಟರ್ ದೂರದಲ್ಲಿತ್ತು.

  • ಥೆಸಲೋನೀಕ ಪಟ್ಟಣದಲ್ಲಿ ಯೆಹೋದ್ಯರಲ್ಲಿ ಕೆಲವರು ಪೌಲನು ಮತ್ತು ಸೀಲನನ್ನು ತೊಂದರೆ ಮಾಡಿದಾಗ, ಅವರ ಸಹ ಕ್ರೈಸ್ತರ ಸಹಾಯದಿಂದ ಅವರು ಬೆರೋಯ ಪಟ್ಟಣಕ್ಕೆ ತಪ್ಪಿಸಿಕೊಂಡು ಹೋದರು.
  • ಬೆರೋಯ ಪಟ್ಟಣದಲ್ಲಿ ಪೌಲನ ಬೋಧನೆಯನ್ನು ಕೇಳಿದಾಗ, ಅವನು ಹೇಳುವುದು ಸತ್ಯವೋ ಅಲ್ಲವೋ ಎಂದು ಶಾಸ್ತ್ರಗ್ರಂಥಗಳನ್ನು ಶೋಧಿಸಿದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಪೌಲನು, ಸೀಲನು, ಥೆಸಲೋನೀಕ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G960