kn_tw/bible/names/joash.md

3.3 KiB

ಯೋವಾಷ

ಸತ್ಯಾಂಶಗಳು:

ಯೋವಾಷ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಅನೇಕ ಜನರಿದ್ದಾರೆ.

  • ಯೋವಾಷ ಎನ್ನುವ ಹೆಸರಲ್ಲಿ ಒಬ್ಬನು ಇಸ್ರಾಯೇಲ್ಯರನ್ನು ಬಿಡಿಸಿದ ಗಿದ್ಯೋನನ ತಂದೆಯಾಗಿರುತ್ತಾರೆ.
  • ಇನ್ನೊಬ್ಬ ಯೋವಾಷ ಯಾಕೋಬನ ಚಿಕ್ಕ ಮಗನಾಗಿರುವ ಬೆನ್ಯಾಮೀನ ಸಂತತಿಯಲ್ಲಿರುವ ವ್ಯಕ್ತಿ.
  • ಹೆಚ್ಚಾಗಿ ಎಲ್ಲರಿಗೂ ಪ್ರಸಿದ್ಧಿಯಾದ ಯೋವಾಷನು ತನ್ನ ಏಳನೇ ವಯಸ್ಸಿನಲ್ಲಿಯೇ ಯೂದಾ ಅರಸನಾಗಿದ್ದನು. ಇವನು ಯೂದಾ ಅರಸನಾಗಿರುವ ಅಹಜ್ಯನ ಮಗನಾಗಿರುತ್ತಾನೆ, ಇವನು ಕೊಲೆಯಾಗಿರುತ್ತಾನೆ.
  • ಯೋವಾಷನು ಅತೀ ಚಿಕ್ಕ ವಯಸ್ಸಿನಲ್ಲಿರುವಾಗ ಅವನು ಅರಸನ ಕಿರೀಟವನ್ನು ಹೊಂದುವಷ್ಟು ದೊಡ್ಡವನಾಗುವವರೆಗೂ ಅವನನ್ನು ಬಚ್ಚಿಡುವುದರ ಮೂಲಕ ತನ್ನ ಚಿಕ್ಕಮ್ಮ ತನ್ನನ್ನು ಕೊಲ್ಲಲ್ಪಡದಂತೆ ರಕ್ಷಿಸಿದ್ದಳು.
  • ಅರಸನಾದ ಯೋವಾಷನು ದೇವರಿಗೆ ಮೊಟ್ಟ ಮೊದಲು ವಿಧೇಯನಾಗಿರುವ ಒಳ್ಳೇಯ ಅರಸನಾಗಿದ್ದನು. ಆದರೆ ಇವನು ಉನ್ನತ ಸ್ಥಳಗಳನ್ನು ತೆಗೆದುಹಾಕಲಿಲ್ಲ, ಮತ್ತು ಇಸ್ರಾಯೇಲ್ಯರು ವಿಗ್ರಹಗಳಿಗೆ ಆರಾಧನೆ ಮಾಡುವುದನ್ನು ಪುನಃ ಆರಂಭಿಸಿದರು.
  • ಅರಸನಾದ ಯೆಹೋವಾಷನು ಇಸ್ರಾಯೇಲ್ ರಾಜ್ಯವನ್ನು ಆಳುತ್ತಿರುವ ವರ್ಷಗಳಲ್ಲಿ ಅರಸನಾದ ಯೋವಾಷನು ಯೂದಾ ರಾಜ್ಯವನ್ನು ಆಳುತ್ತಿದ್ದನು. ಅವರಿಬ್ಬರು ವಿಶಿಷ್ಟವಾದ ಅರಸರಾಗಿದ್ದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಅಹಜ್ಯ, ಯಜ್ಞವೇದಿ, ಬೆನ್ಯಾಮೀನ, ಸುಳ್ಳು ದೇವರು, ಗಿದ್ಯೋನ್, ಉನ್ನತ ಸ್ಥಳಗಳು, ಸುಳ್ಳು ದೇವರು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3101, H3135