kn_tw/bible/names/gideon.md

5.9 KiB

ಗಿದ್ಯೋನ

ಸತ್ಯಾಂಶಗಳು:

ಗಿದ್ಯೋನನು ಇಸ್ರಾಯೇಲಿಯನು, ದೇವರು ಇಸ್ರಾಯೇಲ್ಯರನ್ನು ತಮ್ಮ ಶತ್ರುಗಳಿಂದ ಬಿಡಿಸಲು ಇವನನ್ನು ಮೇಲಕ್ಕೆ ಎಬ್ಬಿಸಿದ್ದರು.

  • ಗಿದ್ಯೋನನು ಜೀವಿಸುವ ಕಾಲದಲ್ಲಿ ಮಿದ್ಯಾನರೆನ್ನುವ ಒಂದು ಜನರ ಗುಂಪಿನವರು ಇಸ್ರಾಯೇಲ್ಯರ ಮೇಲೆ ಧಾಳಿ ಮಾಡುತ್ತಾ, ಅವರ ಬೆಳೆಗಳನ್ನು ನಾಶಗೊಳಿಸುತ್ತಿದ್ದರು.
  • ಗಿದ್ಯೋನನು ಹೆದರಿಕೊಂಡರೂ ಮಿದ್ಯಾನರನ್ನು ಸೋಲಿಸುವುದಕ್ಕೆ ಮತ್ತು ಅವರಿಗೆ ವಿರುದ್ಧವಾಗಿ ಹೋರಾಟ ಮಾಡುವುದಕ್ಕೆ ಇಸ್ರಾಯೇಲ್ಯರನ್ನು ನಡೆಸಲು ದೇವರು ಅವನನ್ನು ಉಪಯೋಗಿಸಿಕೊಂಡರು.
  • ಬಾಳ್ ಮತ್ತು ಅಶೇರ ಎನ್ನುವ ಸುಳ್ಳು ದೇವರಗಳ ಬಳಿಗೆ ಯಜ್ಞವೇದಿಗಳನ್ನು ತೆಗೆದುಕೊಂಡು ಹೋಗುವುದರ ಮೂಲಕ ಗಿದ್ಯೋನನು ದೇವರಿಗೆ ವಿಧೇಯನಾದನು.
  • ಈತನು ಕೇವಲ ತಮ್ಮ ಶತ್ರುಗಳನ್ನು ಸೋಲಿಸುವುದಕ್ಕೆ ಜನರನ್ನು ನಡೆಸುವುದಲ್ಲದೆ, ಒಬ್ಬನೇ ನಿಜ ದೇವರಾದ ಯೆಹೋವನನ್ನು ಆರಾಧಿಸುವುದಕ್ಕೆ ಮತ್ತು ಆತನಿಗೆ ವಿಧೇಯರಾಗುವುದಕ್ಕೆ ಅವರನ್ನು ಪ್ರೋತ್ಸಾಹ ಮಾಡಿದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಬಾಳ್, ಅಶೇರ, ಬಿಡುಗಡೆ, ಮಿದ್ಯಾನ್, ಯೆಹೋವ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 16:05 ಯೆಹೋವನ ದೂತ ___ ಗಿದ್ಯೋನನ ___ ಬಳಿಗೆ ಬಂದು, “ಪರಾಕ್ರಮಶಾಲಿಯೇ, ಯೆಹೋವ ನಿನ್ನ ಸಂಗಡ ಇದ್ದಾನೆ”. ಹೋಗಿ, ಮಿದ್ಯಾನರಿಂದ ಇಸ್ರಾಯೇಲ್ಯರನ್ನು ರಕ್ಷಿಸು” ಎಂದು ಹೇಳಿದನು.
  • 16:06 __ ಗಿದ್ಯೋನನ ___ ತಂದೆ ವಿಗ್ರಹಕ್ಕೆ ಯಜ್ಞವೇದಿಯನ್ನು ಪ್ರತಿಷ್ಠೆ ಮಾಡಿದನು. ಆ ಯಜ್ಞವೇದಿಯನ್ನು ಮುರಿದು ಹಾಕಬೇಕೆಂದು ದೇವರು ___ ಗಿದ್ಯೋನನಿಗೆ ___ ಹೇಳಿದನು.
  • 16:08 ಅವರು ಲೆಕ್ಕಿಸಲಾರದಷ್ಟು ಜನರಿದ್ದರು (ಮಿದ್ಯಾನರು). ಅವರೊಂದಿಗೆ ಎಲ್ಲರು ಸೇರಿ ಯುದ್ಧ ಮಾಡುವುದಕ್ಕೆ ___ ಗಿದ್ಯೋನನು ___ ಇಸ್ರಾಯೇಲ್ಯರನ್ನು ಕರೆದನು.
  • 16:08 ಅವರೊಂದಿಗೆ ಎಲ್ಲರು ಸೇರಿ ಯುದ್ಧ ಮಾಡುವುದಕ್ಕೆ ___ ಗಿದ್ಯೋನನು ___ ಇಸ್ರಾಯೇಲ್ಯರನ್ನು ಕರೆದನು. ಇಸ್ರಾಯೇಲ್ಯರನ್ನು ರಕ್ಷಿಸುವುದಕ್ಕೆ ದೇವರು ಗಿದ್ಯೋನನನ್ನು ಉಪಯೋಗಿಸಿಕೊಳ್ಳುತ್ತಿದ್ದಾನೆನ್ನುವುದಕ್ಕೆ, ___ ಗಿದ್ಯೋನನು __ ಎರಡು ಚಿಹ್ನೆಗಳನ್ನು ತೋರಿಸಬೇಕೆಂದು ದೇವರನ್ನು ಕೇಳಿಕೊಂಡನು.
  • 16:10 ___ ಗಿದ್ಯೋನನ ___ ಬಳಿಗೆ 32,000 ಇಸ್ರಾಯೇಲ್ ಸೈನಿಕರು ಬಂದರು, ಆದರೆ ಸೈನಿಕರು ಹೆಚ್ಚಾಗಿದ್ದಾರೆಂದು ದೇವರು ಅವನಿಗೆ ಹೇಳಿದನು.
  • 16:12 ಆದ್ದರಿಂದ ___ ಗಿದ್ಯೋನನು ___ ತನ್ನ ಸೈನಿಕರನ್ನು ಹಿಂದಕ್ಕೆ ಕಳುಹಿಸಿದನು ಮತ್ತು ಅವರೆಲ್ಲರಿಗೆ ಕೊಂಬನ್ನು, ಉರಿಯುವ ಪಂಜು ಇರುವ ಬರಿಕೊಡವನ್ನೂ ಕೊಟ್ಟನು.
  • 16:15 ಜನರೆಲ್ಲರು ___ ಗಿದ್ಯೋನನನ್ನು ___ ಅವರ ಅರಸನಾಗಿ ಮಾಡಬೇಕೆಂದು ಬಯಸಿದ್ದರು.
  • 16:16 ಪ್ರಧಾನ ಯಾಜಕನು ಧರಿಸಿಕೊಳ್ಳುವ ವಸ್ತ್ರದಂತೆ ಒಂದು ವಿಶೇಷವಾದ ವಸ್ತ್ರವನ್ನು ಮಾಡುವುದಕ್ಕೆ ___ ಗಿದ್ಯೋನನು ___ ಬಂಗಾರವನ್ನು ಉಪಯೋಗಿಸಿದನು. ಆದರೆ ಜನರೆಲ್ಲರು ಅದು ಒಂದು ವಿಗ್ರಹವೆಂದೆಣಿಸಿ ಅದನ್ನು ಆರಾಧಿಸಲು ಆರಂಭಿಸಿದರು.

ಪದ ಡೇಟಾ:

  • Strong's: H1439, H1441