kn_tw/bible/names/ahaziah.md

2.1 KiB

ಅಹಜ್ಯ

ಸತ್ಯಾಂಶಗಳು:

ಅಹಜ್ಯ ಎನ್ನುವ ಹೆಸರಿನ ಮೇಲೆ ಇಬ್ಬರು ಅರಸರಿದ್ದಾರೆ: ಒಬ್ಬರು ಇಸ್ರಾಯೇಲ್ ರಾಜ್ಯವನ್ನು ಆಳಿದವರು, ಮತ್ತೊಬ್ಬರು ಯೆಹೂದ ರಾಜ್ಯವನ್ನು ಆಳಿದವರು.

  • ಯೆಹೂದ ಅರಸನು ಅರಸನಾದ ಯೆಹೋರಾಮನ ಮಗನಾಗಿರುತ್ತಾನೆ. ಈತನು ಒಂದು ವರ್ಷ ಕಾಲ (ಕ್ರಿ.ಪೂ.841) ಆಳಿದನು ಮತ್ತು ಯೆಹೂ ಎನ್ನುವವನಿಂದ ಕೊಲ್ಲಲ್ಪಡುತ್ತಾನೆ. ಅಹಜ್ಯ ಚಿಕ್ಕ ಮಗನಾದ ಯೋವಾಷನು ಕೊನೆಗೆ ಅರಸನಾಗಿ ತನ್ನ ತಂದೆಯ ಸ್ಥಾನವನ್ನು ಪಡೆಯುತ್ತಾನೆ.
  • ಇಸ್ರಾಯೇಲ್ ಅರಸನಾದ ಅಹಜ್ಯನು ಅರಸನಾದ ಅಹಾಬನ ಮಗನಾಗಿರುತ್ತಾನೆ. ಇವನು ಎರಡು ವರ್ಷಗಳ ಕಾಲ ಆಳಿದನು (ಕ್ರಿ.ಪೂ.850-49). ಇವನು ತನ್ನ ನಿವಾಸ ಸ್ಥಳದಲ್ಲೇ ಬಿದ್ದು ಅನೇಕವಾದ ಗಾಯಗಳಿಂದ ನರಳಿ ಸತ್ತುಹೋದನು, ಮತ್ತು ತನ್ನ ಸಹೋದರನಾದ ಯೋರಾಮನು ಅರಸನಾದನು.

(ಅನುವಾದ ಸಲಹೆಗಳು: /ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : /ಯೆಹೂ, /ಅಹಾಬ, /ಯಾರೊಬ್ಬಾಮ, ಯೋವಾಷ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H274