kn_tw/bible/names/jeroboam.md

5.4 KiB

ಯಾರೊಬ್ಬಾಮ

ಸತ್ಯಾಂಶಗಳು:

ನೆಬಾಟನ ಮಗನಾದ ಯಾರೊಬ್ಬಾಮನು ಸುಮಾರು ಕ್ರಿ.ಪೂ.900-910 ರವರೆಗೆ ಆಳಿದ ಇಸ್ರಾಯೇಲ್ ಉತ್ತರ ರಾಜ್ಯದ ಮೊಟ್ಟ ಮೊದಲನೇ ಅರಸನಾಗಿದ್ದನು. ಇನ್ನೊಬ್ಬ ಯಾರೊಬ್ಬಾಮನು ಅರಸನಾದ ಯೋವಾಷನ ಮಗನಾಗಿರುತ್ತಾನೆ, ಇವನು ಸುಮಾರು 120 ವರ್ಷಗಳಿಗಿಂತ ಹೆಚ್ಚಾಗಿ ಇಸ್ರಾಯೇಲ್ ದೇಶವನ್ನು ಆಳಿರಬಹುದು.

  • ಸೊಲೊಮೋನನ ನಂತರ ಅರಸನಾಗುವಿಯೆಂದು ಮತ್ತು ನೀನು ಇಸ್ರಾಯೇಲ್ ಹತ್ತು ಕುಲಗಳನ್ನು ಆಳುವಿಯೆಂದು ನೆಬಾಟನ ಮಗನಾದ ಯಾರೊಬ್ಬಾಮನಿಗೆ ಯೆಹೋವನು ಒಂದು ಪ್ರವಾದನೆಯನ್ನು ಕೊಟ್ಟನು,
  • ಸೊಲೊಮೋನನು ಸತ್ತನಂತರ, ಇಸ್ರಾಯೇಲ್ ಉತ್ತರ ರಾಜ್ಯದ ಹತ್ತು ಕುಲಗಳು ಸೊಲೊಮೋನನ ಮಗನಾದ ರೆಹಬ್ಬಾಮನಿಗ ವಿರೋಧವಾಗಿ ತಿರಸ್ಕಾರ ಮಾಡಿದರು ಮತ್ತು ಅವರ ಅರಸನಾಗಿ ಯಾರೊಬ್ಬಾಮನನ್ನು ಮಾಡಿಕೊಳ್ಳುವುದಕ್ಕೆ ಬದಲಾಗಿ, ದಕ್ಷಿಣ ರಾಜ್ಯದಲ್ಲಿರುವ ಯೂದಾ ಮತ್ತು ಬೆನ್ಯಾಮೀನ ಎನ್ನುವ ಎರಡು ಕುಲಗಳಿಗೆ ಅರಸನಾಗುವಂತೆ ರೆಹಬ್ಬಾಮನಿಗೆ ಅವಕಾಶ ಕೊಟ್ಟರು.
  • ಯಾರೊಬ್ಬಾಮ ದುಷ್ಟ ಅರಸನಾಗಿ ಮಾರ್ಪಟ್ಟನು, ಅಷ್ಟೇಅಲ್ಲದೆ ಜನರು ಯೆಹೋವನನ್ನು ಆರಾಧಿಸದಂತೆ ಮಾಡಿ, ಅವರೆಲ್ಲರು ಆರಾಧನೆ ಮಾಡುವುದಕ್ಕೆ ಕೆಲವೊಂದು ವಿಗ್ರಹಗಳನ್ನು ಸ್ಥಾಪಿಸಿದನು. ಉಳಿದ ಇಸ್ರಾಯೇಲ್ ಅರಸರೆಲ್ಲರು ಯಾರೊಬ್ಬಾಮನ ಮಾದರಿಯನ್ನು ಅನುಸರಿಸಿದರು ಮತ್ತು ಅವನು ಇದ್ದಂತೆಯೇ ಅವರೆಲ್ಲರು ದುಷ್ಟರಾದರು.
  • ಸುಮಾರು 120 ವರ್ಷಗಳಾದನಂತರ, ಯಾರೊಬ್ಬಾಮ ಹೆಸರಿನ ಮೇಲೆ ಇನ್ನೊಬ್ಬ ಅರಸನು ಇಸ್ರಾಯೇಲ್ ಉತ್ತರ ರಾಜ್ಯವನ್ನು ಆಳುವುದಕ್ಕೆ ಆರಂಭಿಸಿದನು. ಈ ಯಾರೊಬ್ಬಾಮನು ಅರಸನಾದ ಯೋವಾಷನ ಮಗನಾಗಿರುತ್ತಾನೆ ಮತ್ತು ಮುಂದಿದ್ದ ಇಸ್ರಾಯೇಲ್ ಅರಸರ ಹಾಗೆಯೇ ಇವನು ದುಷ್ಟನಾಗಿದ್ದನು.
  • ಇಸ್ರಾಯೇಲ್ಯರ ಈ ದುಷ್ಟತನವನ್ನು ಹೊರತುಪಡಿಸಿ, ದೇವರು ಅವರ ಮೇಲೆ ಕರುಣೆ ತೋರಿಸಿದನು ಮತ್ತು ಯಾರೊಬ್ಬಾಮ ಎನ್ನುವ ಈ ಅರಸನು ಭೂಮಿ ಗಳಿಸುವುದಕ್ಕೆ ಅಂಟ್ಟು ತಮ್ಮ ಕ್ಷೇತ್ರಕ್ಕೆ ಗಡಿಗಳನ್ನು ಹಾಕುವುದಕ್ಕೆ ಸಹಾಯ ಮಾಡಿದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಸುಳ್ಳು ದೇವರು, ಇಸ್ರಾಯೇಲ್ ರಾಜ್ಯ, ಯೂದಾ, ಸೊಲೊಮೋನ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 18:08 ರೆಹಬ್ಬಾಮನಿಗೆ ವಿರುದ್ಧವಾಗಿ ತಿರಸ್ಕಾರ ಮಾಡಿದ ಇಸ್ರಾಯೇಲ್ ದೇಶದ ಹತ್ತು ಕುಲಗಳು ತಮಗೆ ಅರಸನನ್ನಾಗಿ ___ ಯಾರೊಬ್ಬಾಮ ___ ಎಂದು ಹೆಸರಿರುವ ಒಬ್ಬ ಮನುಷ್ಯನನ್ನು ನೇಮಿಸಿಕೊಂಡರು.
  • 18:09 ___ ಯಾರೊಬ್ಬಾಮನು ___ ದೇವರಿಗೆ ವಿರುದ್ಧವಾಗಿ ತಿರಸ್ಕಾರ ಮಾಡಿದನು ಮತ್ತು ಜನರೆಲ್ಲರು ಪಾಪ ಮಾಡುವುದಕ್ಕೆ ಕಾರಣನಾದನು. ಯೂದಾ ರಾಜ್ಯದಲ್ಲಿರುವ ದೇವಾಲಯದಲ್ಲಿ ದೇವರನ್ನು ಆರಾಧಿಸುವುದರ ಬದಲಾಗಿ ಆರಾಧನೆ ಮಾಡುವುದಕ್ಕೆ ಇವನು ತನ್ನ ಜನರಿಗೋಸ್ಕರ ಎರಡು ವಿಗ್ರಹಗಳನ್ನು ಕಟ್ಟಿಸಿದನು.

ಪದ ಡೇಟಾ:

  • Strong's: H3379