kn_tw/bible/names/hittite.md

3.0 KiB

ಹಿತ್ತೀಯ, ಹಿತ್ತೀಯರು

ಪದದ ಅರ್ಥವಿವರಣೆ:

ಹಿತ್ತೀಯರು ಹಾಮನ ಮಗನಾದ ಕಾನಾನನ ವಂಶಸ್ಥರಾಗಿರುತ್ತಾರೆ. ಅವರು ಒಂದು ದೊಡ್ಡ ಸಾಮ್ರಾಜ್ಯವಾಗಿ ಮಾರ್ಪಟ್ಟರು, ಇದೀಗ ಉತ್ತರ ಪಾಲಸ್ತೀನ ಮತ್ತು ಟರ್ಕಿಗಳಲ್ಲಿ ಕಂಡುಬರುತ್ತದೆ.

  • ಹಿತ್ತೀಯನಾದ ಎಫ್ರೋನನಿಂದ ಅಬ್ರಾಹಾಮನು ಭೂಮಿಯ ಭಾಗವನ್ನು ಕೊಂಡುಕೊಂಡಿದ್ದನು, ಇದರಿಂದ ತನ್ನ ಮೃತ ಹೆಂಡತಿಯಾದ ಸಾರಳನ್ನು ಆ ಗುಹೆಯೊಳಗೆ ಸಮಾಧಿ ಮಾಡಿದನು. ಕೊನೆಗೆ ಅಬ್ರಾಹಾಮನನ್ನು ಮತ್ತು ಅನೇಕ ತನ್ನ ವಂಶಸ್ಥರನ್ನು ಆ ಗುಹೆಯೊಳಗೆ ಸಮಾಧಿ ಮಾಡಿದ್ದರು.
  • ಏಸಾವನು ಹಿತ್ತೀಯರ ಸ್ತ್ರೀಯರನ್ನು ಮದುವೆ ಮಾಡಿಕೊಂಡಿದ್ದಕ್ಕೆ ಅವನ ತಂದೆತಾಯಿಗಳು ತುಂಬಾ ಹೆಚ್ಚಾಗಿ ಪ್ರಲಾಪಪಟ್ಟರು.
  • ದಾವೀದನ ಪರಾಕ್ರಮ ಮನುಷ್ಯರಲ್ಲಿ ಒಬ್ಬನು ಊರೀಯನು ಹಿತ್ತೀಯನಾಗಿದ್ದನು.
  • ಸೊಲೊಮೋನನು ಮದುವೆ ಮಾಡಿಕೊಂಡಿರುವ ಅನೇಕಮಂದಿ ಅನ್ಯ ಸ್ತ್ರೀಯರಲ್ಲಿ ಹಿತ್ತೀಯರಾಗಿದ್ದರು. ಈ ಅನ್ಯ ಸ್ತ್ರೀಯರೆಲ್ಲರು ಸೊಲೊಮೋನನ ಹೃದಯವನ್ನು ದೇವರ ಕಡೆಯಿಂದ ತಿರುಗಿಸಿದರು, ಯಾಕಂದರೆ ಅವರು ಸುಳ್ಳು ದೇವರುಗಳನ್ನು ಆರಾಧನೆ ಮಾಡುತ್ತಿದ್ದರು.
  • ಹಿತ್ತೀಯರು ಯಾವಾಗಲೂ ಇಸ್ರಾಯೇಲ್ಯರಿಗೆ ಭೌತಿಕವಾಗಿ ಮತ್ತು ಆತ್ಮೀಯಕವಾಗಿ ಅಪಾಯಕರವಾಗಿದ್ದರು.

(ಈ ಪದಗಳನ್ನು ಸಹ ನೋಡಿರಿ : ವಂಶಸ್ಥರು, ಏಸಾವ, ಅನ್ಯರು, ಹಾಮ್, ಶಕ್ತಿಯುಳ್ಳ, ಸೊಲೊಮೋನ, ಊರೀಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2850