kn_tw/bible/names/esau.md

4.2 KiB

ಏಸಾವ

ಸತ್ಯಾಂಶಗಳು:

ಏಸಾವನು ಇಸಾಕ ಮತ್ತು ರೆಬೆಕ್ಕಳಗೆ ಹುಟ್ಟಿದ ಅವಳಿ ಗಂಡುಮಕ್ಕಳಲ್ಲಿ ಒಬ್ಬನಾಗಿದ್ದನು. ಅವರಲ್ಲಿ ಇವನ್ನು ಮೊದಲನೇ ಮಗುವಾಗಿದ್ದನು. ತನ್ನ ಅವಳಿ ಸಹೋದರ ಯಾಕೋಬನಾಗಿದ್ದನು.

  • ಏಸಾವನು ಕೆಂಪಾದ ರುಚಿಯಾದ ಪದಾರ್ಥಕ್ಕಾಗಿ ತನ್ನ ತಮ್ಮನಿಗೆ ತನ್ನ ಚೊಚ್ಚಲತನವನ್ನು ಮಾರಿಬಿಟ್ಟನು.
  • ಏಸಾವನು ಮೊದಲ ಸಂತಾನವಾಗಿರುವುದರಿಂದ ತನ್ನ ತಂದೆಯಾದ ಇಸಾಕನು ಅವನಿಗೆ ವಿಶೇಷವಾದ ಆಶೀರ್ವಾದವನ್ನು ಕೊಡಬೇಕೆಂದು ಬಯಸಿದ್ದನು. ಆದರೆ ಯಾಕೋಬನು ಆಶೀರ್ವಾದವನ್ನು ಏಸಾವನಿಗೆ ಕೊಡದಂತೆ ಮೋಸ ಮಾಡಿದನು. ಅದಕ್ಕಾಗಿ ಏಸಾವನು ಯಾಕೋಬನನ್ನು ಕೊಲ್ಲಬೇಕೆಂದು ಸಿಟ್ಟುಗೊಂಡಿದ್ದನು, ಆದರೆ ಕೊನೆಗೆ ಅವನು ಯಾಕೋಬನನ್ನು ಕ್ಷಮಿಸಿದನು.
  • ಏಸಾವನಿಗೆ ಅನೇಕಮಂದಿ ಮಕ್ಕಳು ಮತ್ತು ಮೊಮ್ಮೊಕ್ಕಳು ಇದ್ದರು, ಈ ಎಲ್ಲ ಸಂತಾನದವರೇ ಕಾನಾನ್ ಭೂಮಿಯಲ್ಲಿ ದೊಡ್ಡ ಗುಂಪಾಗಿ ಮಾರ್ಪಟ್ಟು ಜೀವನ ನೆಡೆಸುತ್ತಿದ್ದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಎದೋಮ್, ಇಸಾಕ, ಯಾಕೋಬ, ರೆಬೆಕ್ಕ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 06:07 ರೆಬೆಕ್ಕಳ ಮಕ್ಕಳು ಹುಟ್ಟಿದಾಗ, ದೊಡ್ಡವನು ಕೆಂಪು ಬಣ್ಣದ ಕೂದಲುಗಳಿದ್ದು ಹೊರ ಬಂದನು, ಮತ್ತು ಅವರು ಅವನಿಗೆ ___ ಏಸಾವ ____ ಎಂದು ಹೆಸರಿಟ್ಟರು.
  • 07:02 ಆದ್ದರಿಂದ ___ ಏಸಾವನು ____ ತನ್ನ ಚೊಚ್ಚಲತಾಣವನ್ನು ಯಾಕೋಬನಿಗೆ ಕೊಟ್ಟನು.
  • 07:04 ಇಸಾಕನು ಮೇಕೆಯ ಕೂದಲು ಎಂದು ತಿಳಿದು, ಬಟ್ಟೆಗಳ ವಾಸನೆಯನ್ನು ನೋಡಿದನೋ, ಆಗ ಇವನು ___ ಏಸಾವನೇ __ ಎಂದು ತಿಳಿದು, ಅವನನ್ನು ಆಶೀರ್ವಾದ ಮಾಡಿದನು.
  • 07:05 ____ ಏಸಾವನು ___ ಯಾಕೋಬನನ್ನು ದ್ವೇಷಿಸಿದನು ಯಾಕಂದರೆ ಯಾಕೋಬನು ತನ್ನ ಚೊಚ್ಚಲತನವನ್ನು ಮತ್ತು ತನ್ನ ಆಶೀರ್ವಾದವನ್ನು ಕದ್ದುಕೊಂಡಿದ್ದನು.
  • 07:10 ಆದರೆ ___ ಏಸಾವನು ____ ಯಾಕೋಬನನ್ನು ಕ್ಷಮಿಸಿದ್ದನು, ಮತ್ತು ಅವರಿಬ್ಬರು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ ತುಂಬಾ ಸಂತೋಷದಿಂದ ಇದ್ದಿದ್ದರು.

ಪದ ಡೇಟಾ:

  • Strong's: H6215, G2269