kn_tw/bible/names/gibeon.md

3.7 KiB

ಗಿಬ್ಯೋನ್, ಗಿಬ್ಯೋನ್ಯರು, ಗಿಬ್ಯೋನ್ಯರು

ಸತ್ಯಾಂಶಗಳು:

ಗಿಬ್ಯೋನ್ ಎನ್ನುವುದು ಒಂದು ಪಟ್ಟಣ, ಇದು ಯೆರೂಸಲೇಮ್ ವಾಯುವ್ಯ ದಿಕ್ಕಿಗೆ ಸುಮಾರು 13 ಕಿಲೋಮೀಟರ್ ದೂರದಲ್ಲಿ ಕಂಡುಬರುತ್ತದೆ. ಗಿಬ್ಯೋನಿನಲ್ಲಿ ಜೀವಿಸುವ ಜನರನ್ನು ಗಿಬ್ಯೋನ್ಯರು ಎಂದು ಕರೆಯುತ್ತಾರೆ.

  • ಇಸ್ರಾಯೇಲ್ಯರು ಯೆರಿಕೋ ಮತ್ತು ಆಯಿ ಎನ್ನುವ ಪಟ್ಟಣಗಳನ್ನು ಹೇಗೆ ನಾಶಮಾಡಿದರೆಂದು ಗಿಬ್ಯೋನ್ಯರು ಕೇಳಿದಾಗ, ಅವರು ತುಂಬಾ ಹೆದರಿದರು.
  • ಇದರಿಂದ ಗಿಲ್ಗಾಲ್.ನಲ್ಲಿರುವ ಇಸ್ರಾಯೇಲ್ ನಾಯಕರ ಬಳಿಗೆ ಗಿಬ್ಯೋನ್ಯರು ಬಂದರು ಮತ್ತು ಅವರು ಎಷ್ಟೋ ದೂರದಲ್ಲಿರುವ ದೇಶದ ಜನರು ಎಂಬುವರಾಗಿ ನಟಿಸಿದರು.
  • ಇಸ್ರಾಯೇಲ್ ನಾಯಕರು ಮೋಸಹೋದರು ಮತ್ತು ಅವರು ತಮ್ಮನ್ನು ನಾಶಪಡಿಸದೇ, ರಕ್ಷಿಸುತ್ತೇವೆಂದು ಗಿಬ್ಯೋನ್ಯರೊಂದಿಗೆ ಒಪ್ಪಂದ ಮಾಡಿಕೊಂಡರು.

(ಈ ಪದಗಳನ್ನು ಸಹ ನೋಡಿರಿ : ಗಿಲ್ಗಾಲ್, ಯೆರಿಕೋ, ಯೆರೂಸೇಲಮ್)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 15:06_ ಆದರೆ ಕಾನಾನ್ ಜನರ ಗುಂಪುಗಳಲ್ಲಿ ___ ಗಿಬ್ಯೋನ್ಯರು ___ ಎಂದು ಕರೆಯಲ್ಪಡುವ ಒಂದು ಜನರ ಗುಂಪು ಯೆಹೋಶುವನೊಂದಿಗೆ ಸುಳ್ಳಾಡಿದರು ಮತ್ತು ಅವರು ಕನಾನ್ ದೇಶದಿಂದ ತುಂಬಾ ದೂರದಲ್ಲಿರುವ ಸ್ಥಳದಿಂದ ಬಂದವರೆಂದು ಹೇಳಿದರು.
  • 15:07_ ಕೆಲವೊಂದು ಕಾಲದನಂತರ, ಕಾನಾನ್ ದೇಶದಲ್ಲಿರುವ ಇತರ ಜನರ ಗುಂಪುಗಳ ಅರಸರಾಗಿರುವ ಅಮೋರಿಯರು ಇಸ್ರಾಯೇಲ್ಯರೊಂದಿಗೆ ___ ಗಿಬ್ಯೋನ್ಯರೊಂದಿಗೆ ___ ಸಮಾಧಾನ ಔತಣವನ್ನು ಮಾಡಿಕೊಂಡಿದ್ದಾರೆಂದು ಕೇಳಿಸಿಕೊಂಡರು, ಅದ್ದರಿಂದ ಅವರು ತಮ್ಮ ಸೈನ್ಯಗಳನ್ನು ಒಂದು ದೊಡ್ಡ ಸೈನ್ಯವನ್ನಾಗಿ ಮಾಡಿಕೊಂಡು, ___ ಗಿಬ್ಯೋನ್ __ ಮೇಲೆ ಧಾಳಿ ಮಾಡಿದರು.
  • 15:08_ ಆದ್ದರಿಂದ ಯೆಹೋಶುವ ಇಸ್ರಾಯೇಲ್ ಸೈನ್ಯವನ್ನು ಒಂದುಗೂಡಿಸಿದನು ಮತ್ತು ಅವರೆಲ್ಲರು ___ ಗಿಬ್ಯೋನ್ಯರ ___ ಬಳಿಗೆ ರಾತ್ರಿಯೆಲ್ಲಾ ನಡೆದುಕೊಂಡು ಹೋದರು.

ಪದ ಡೇಟಾ:

  • Strong's: H1391, H1393