kn_tw/bible/names/gilgal.md

2.8 KiB

ಗಿಲ್ಗಾಲ್

ಸತ್ಯಾಂಶಗಳು:

ಗಿಲ್ಗಾಲ್ ಎನ್ನುವ ಪಟ್ಟಣ ಯೆರಿಕೋಗೆ ಉತ್ತರ ದಿಕ್ಕಿನಲ್ಲಿತ್ತು ಮತ್ತು ಇಸ್ರಾಯೇಲ್ಯರು ಕಾನಾನ್ ದೇಶಕ್ಕೆ ಹೋಗುತ್ತಿರುವಾಗ ಯೊರ್ದನ್ ನದಿಯನ್ನು ದಾಟಿದ ನಂತರ ಇಳಿದುಕೊಂಡ ಸ್ಥಳವಾಗಿತ್ತು.

  • ಗಿಲ್ಗಾಲಿನಲ್ಲಿ, ಅವರು ದಾಟಿದ ನದಿಯಿಂದ ಅಂದರೆ ಒಣಗಿದ್ದ ಯೊರ್ದನ್ ನದಿಯಿಂದ ತೆಗೆದುಕೊಂಡು ಬಂದ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು.
  • ಎಲೀಷನು ಪರಲೋಕಕ್ಕೆ ಏರಿಹೋದ ಸಮಯದಲ್ಲಿ ಎಲೀಯನು ಮತ್ತು ಎಲೀಷನು ಯೊರ್ದನ್ ನದಿಯನ್ನು ದಾಟುವದಕ್ಕೆ ಮುನ್ನ ಅವರು ಗಿಲ್ಗಾಲ್ ಪಟ್ಟಣವನ್ನು ಬಿಟ್ಟರು.
  • ಹಳೆ ಒಡಂಬಡಿಕೆಯಲ್ಲಿ ಅನೇಕ ಪ್ರಾಂತ್ಯಗಳನ್ನು “ಗಿಲ್ಗಾಲ್” ಎಂದು ಕರೆಯುತ್ತಿದ್ದರು.
  • “ಗಿಲ್ಗಾಲ್” ಎನ್ನುವ ಪದಕ್ಕೆ “ವೃತ್ತಾಕಾರದಲ್ಲಿದ್ದ ಕಲ್ಲುಗಳು” ಎಂದರ್ಥ, ಅದು ಬಹುಶಃ ವೃತ್ತಾಕಾರದಲ್ಲಿ ಕಟ್ಟಲ್ಪಟ್ಟ ಯಜ್ಞವೇದಿಯನ್ನು ಸೂಚಿಸುತ್ತಿರಬಹುದು.
  • ಹಳೆ ಒಡಂಬಡಿಕೆಯಲ್ಲಿ, ಈ ಹೆಸರು ಅನೇಕ ಬಾರಿ “ಗಿಲ್ಗಾಲ್” ಎಂದಿರುತ್ತದೆ. ಇದು ಒಂದು ಪ್ರಾಂತ್ಯದ ಸ್ಥಳವಲ್ಲ ಆದರೆ ಒಂದು ವಿಧವಾದ ಸ್ಥಳದ ವಿವರಣೆಯಾಗಿರಬಹುದು ಎಂದು ಸೂಚಿಸುತ್ತದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಎಲೀಯ, ಎಲೀಷ, ಯೆರಿಕೋ, ಯೊರ್ದನ್ ಹೊಳೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1537