kn_tw/bible/names/jericho.md

3.2 KiB

ಯೆರಿಕೋ

ಸತ್ಯಾಂಶಗಳು:

ಯೆರಿಕೋ ಎನ್ನುವುದು ಕಾನಾನ್ ಭೂಮಿಯಲ್ಲಿ ತುಂಬಾ ಶಕ್ತಿಯುತವಾದ ಪಟ್ಟಣವಾಗಿದ್ದಿತ್ತು. ಇದು ಯೋರ್ದನ್ ನದಿ ಪಶ್ಚಿಮ ಭಾಗದಲ್ಲಿ ಮತ್ತು ಉಪ್ಪು ಸಮುದ್ರದ ಉತ್ತರ ಭಾಗದಲ್ಲಿ ಕಂಡುಬರುತ್ತದೆ.

  • ಎಲ್ಲಾ ಕಾನಾನ್ಯರು ಮಾಡಿದಂತೆ, ಯೆರಿಕೋದಲ್ಲಿರುವ ಜನರು ಕೂಡ ಸುಳ್ಳು ದೇವರುಗಳನ್ನು ಆರಾಧನೆ ಮಾಡಿದ್ದರು.
  • ಇಸ್ರಾಯೇಲ್ಯರು ಜಯಿಸುವುದಕ್ಕೆ ದೇವರು ಹೇಳಿದ ಮೊಟ್ಟ ಮೊದಲನೇ ಪಟ್ಟಣ ಕಾನಾನ್ ಭೂಮಿಯಲ್ಲಿರುವ ಯೆರಿಕೋ ಆಗಿತ್ತು.
  • ಯೆರಿಕೋಗೆ ವಿರುದ್ಧವಾಗಿ ಯೆಹೋಶುವನು ಇಸ್ರಾಯೇಲ್ಯರನ್ನು ನಡಿಸಿದಾಗ, ಆ ಪಟ್ಟಣವನ್ನು ಸೋಲಿಸುವುದಕ್ಕೆ ಸಹಾಯ ಮಾಡಲು ದೇವರು ದೊಡ್ಡ ಅದ್ಭುತ ಕಾರ್ಯವನ್ನು ಮಾಡಿದರು.

(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಯೋರ್ದನ್ ನದಿ, ಯೆಹೋಶುವ, ಅದ್ಭುತ, ಉಪ್ಪು ಸಮುದ್ರ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • _15:01 ಯೆಹೋಶುವ ಕಾನಾನ್ ಪಟ್ಟಣವಾಗಿರುವ ___ ಯೆರಿಕೋಗೆ ___ ಇಬ್ಬರು ಗೂಢಚಾರಿಗಳನ್ನು ಕಳುಹಿಸಿದನು.
  • _15:03 ಜನರೆಲ್ಲರು ಯೋರ್ದನ್ ನದಿಯನ್ನು ದಾಟಿದನಂತರ, ಮಹಾ ಶಕ್ತಿಯುಳ್ಳ ___ ಯೆರಿಕೋ ___ ಪಟ್ಟಣವನ್ನು ಹೇಗೆ ಧಾಳಿ ಮಾಡಬೇಕೆಂದು ದೇವರು ಯೆಹೋಶುವನಿಗೆ ಹೇಳಿದನು.
  • _15:05 ಅದಾದನಂತರ ___ ಯೆರಿಕೋ ___ ಸುತ್ತಲು ಇರುವ ಗೋಡೆಗಳು ಬಿದ್ದುಹೋದವು! ದೇವರು ಆಜ್ಞಾಪಿಸಿದ ಪ್ರಕಾರವೇ ಪಟ್ಟಣದಲ್ಲಿರುವ ಪ್ರತಿಯೊಂದನ್ನು ಇಸ್ರಾಯೇಲ್ಯರು ನಾಶ ಮಾಡಿದರು.

ಪದ ಡೇಟಾ:

  • Strong's: H3405, G2410