kn_tw/bible/names/antioch.md

3.6 KiB

ಅಂತಿಯೋಕ್ಯ

ಸತ್ಯಾಂಶಗಳು:

ಅಂತಿಯೋಕ್ಯ ಎನ್ನುವದು ಹೊಸ ಒಡಂಬಡಿಕೆಯಲ್ಲಿ ಎರಡು ಪಟ್ಟಣಗಳ ಹೆಸರಾಗಿರುತ್ತದೆ. ಒಂದು ಸಿರಿಯಾದಲ್ಲಿದೆ, ಇದು ಮೆಡಿಟರೆನಿಯನ್ ಸಮುದ್ರದ ಕರಾವಳಿ ದಿಕ್ಕಿಗೆ ತುಂಬಾ ಹತ್ತಿರದಲ್ಲಿರುತ್ತದೆ. ಇನ್ನೊಂದು ಪಿಸಿದ್ಯ ರೋಮಾ ಸೀಮೆಯಲ್ಲಿದೆ, ಇದು ಕೊಲೊಸ್ಸ ಪಟ್ಟಣಕ್ಕೆ ಹತ್ತಿರದಲ್ಲಿರುತ್ತದೆ.

  • ಸಿರಿಯಾ ಅಂತಿಯೋಕ್ಯದಲ್ಲಿರುವ ಸ್ಥಳೀಯ ಸಭೆಯು ಯೇಸುವಿನಲ್ಲಿ ನಂಬಿದವರನ್ನು “ಕ್ರೈಸ್ತರೆಂದು” ಕರೆದ ಮೊಟ್ಟ ಮೊದಲನೇ ಸ್ಥಳ. ಅನ್ಯರನ್ನು ಸುವಾರ್ತೆಯಿಂದ ತಲುಪುವುದಕ್ಕೆ ಮಿಷನರೀಗಳನ್ನು ಕಳುಹಿಸುವುದರಲ್ಲಿ ಈ ಸಭೆಯು ತುಂಬಾ ಹೆಚ್ಚಾದ ಕೆಲಸವನ್ನು ಮಾಡಿತ್ತು.
  • ಕ್ರೈಸ್ತರಾಗುವುದಕ್ಕೆ ಯೆಹೂದ್ಯರ ನಿಯಮ ನಿಬಂಧನೆಗಳನ್ನು ಅನುಸರಿಸಬೇಕಾಗಿರುವುಡಿಲ್ಲವೆಂದು ತಿಳಿದುಕೊಳ್ಳುವುದಕ್ಕೆ ಯೆರೂಸಲೇಮಿನಲ್ಲಿರುವ ಸಭೆಯ ನಾಯಕರು ಸಿರಿಯಾದಲ್ಲಿರುವ ಅಂತಿಯೋಕ್ಯ ಸಭೆಯಲ್ಲಿರುವ ವಿಶ್ವಾಸಿಗಳಿಗೆ ಒಂದು ಪತ್ರವನ್ನು ಕಳುಹಿಸಿದರು
  • ಪೌಲ, ಬಾರ್ನಬ ಮತ್ತು ಯೋಹಾನ ಮಾರ್ಕರವರು ಸುವಾರ್ತೆಯನ್ನು ಹಂಚುವುದಕ್ಕೆ ಪಿಸಿದ್ಯದಲ್ಲಿರುವ ಅಂತಿಯೋಕ್ಯಗೆ ಪ್ರಯಾಣ ಮಾಡಿದರು. ಇತರ ಪಟ್ಟಣಗಳಿಂದ ಬಂದ ಕೆಲವರು ಯೆಹೂದ್ಯರು ಸಮಸ್ಯೆಯನ್ನುಂಟು ಮಾಡುವುದಕ್ಕೆ ಬಂದಿದ್ದರು, ಮತ್ತು ಅವರು ಪೌಲನನ್ನು ಕೊಲ್ಲುವುದಕ್ಕೆ ಪ್ರಯತ್ನ ಮಾಡಿದರು. ಆದರೆ ಯೆಹೂದ್ಯರು ಮತ್ತು ಅನ್ಯರೆಲ್ಲರೂ ಮತ್ತು ಇತರ ಅನೇಕರು ಬೋಧನೆಯನ್ನು ಕೇಳಿ, ಯೇಸುವಿನಲ್ಲಿ ನಂಬಿಕೆ ಇಟ್ಟರು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಬಾರ್ನಬ, ಕೊಲೊಸ್ಸ, ಯೋಹಾನ ಮಾರ್ಕ, ಪೌಲ, ಸೀಮೆ, ರೋಮಾ, ಸಿರಿಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G491