kn_tw/bible/names/barnabas.md

3.7 KiB

ಬಾರ್ನಬ

ಸತ್ಯಾಂಶಗಳು:

ಬಾರ್ನಬ ಅಪೊಸ್ತಲರ ಕಾಲದಲ್ಲಿ ಜೀವಿಸಿದ ಆದಿ ಕ್ರೈಸ್ತವನಾಗಿದ್ದನು.

  • ಬಾರ್ನಬ ಕುಪ್ರ ದ್ವೀಪದ ವಾಸಿಯು, ಇಸ್ರಯೇಲ್ ಗೋತ್ರದ ಲೇವಿಯನಾಗಿದ್ದನು.
  • ಸೌಲನು (ಪೌಲನು) ಕ್ರೈಸ್ತನಾದಾಗ, ಇತರ ವಿಶ್ವಾಸಿಗಳು ಅವನನ್ನು ಸಹ ವಿಶ್ವಾಸಿ ಎಂದು ಭಾವಿಸಬೇಕಾಗಿ ಬಾರ್ನಬನು ಅವರಲ್ಲಿ ಪ್ರೇರೇಪಿಸಿದನು.
  • ಅನೇಕ ಪಟ್ಟಣಗಳಲ್ಲಿ ಯೇಸು ಕುರಿತಾಗಿ ಸುವಾರ್ತೆಯನ್ನು ಸಾರಲು ಬಾರ್ನಬ ಮತ್ತು ಪೌಲನು ಜೊತೆಯಲ್ಲಿ ಪ್ರಯಾಣಿಸಿದರು.
  • ಅವನ ಹೆಸರು ಯೋಸೇಫ, ಆದರೆ ಅವನನ್ನು “ಬಾರ್ನಬ” ಎಂದು ಕರೆದರು, ಅದಕ್ಕೆ “ಪ್ರೋತ್ಸಾಹ ನೀಡುವ ಮಗನು” ಎಂದು ಅರ್ಥ.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಕಲ್ದೀಯ, ಸಾರಾಳು, ಇಸಾಕ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಕೆಲವು ಉದಾಹರಣೆಗಳು :

  • 46:08 ಆಗ ಬಾರ್ನಬ ಎಂಬ ವಿಶ್ವಾಸಿ ಸೌಲನ ಕೈಹಿಡಿದು, ಅಪೊಸ್ತಲರ ಬಳಿಗೆ ಕರೆದುಕೊಂಡುಹೋಗಿ, ದಮಸ್ಕದೊಳಗೆ ಯೇಸುವಿನ ಹೆಸರಿನಲ್ಲಿ ಧೈರ್ಯದಿಂದ ಪ್ರಚಾರ ಮಾಡಿದ್ದನ್ನು ಅವರಿಗೆ ವಿವರವಾಗಿ ಹೇಳಿದನು.
  • 46:09 ಈ ಹೊಸ ವಿಶ್ವಾಸಿಗಳಿಗೆ ಯೇಸುವಿನ ಕುರಿತಾಗಿ ಇನ್ನು ಹೆಚ್ಚಾಗಿ ಬೋದಿಸಲು ಮತ್ತು ಸಭೆಯನ್ನು ಬಲಪಡಿಸಲು ಬಾರ್ನಬ ಮತ್ತು ಸೌಲನು ಜೊತೆಯಾಗಿ ಹೋದರು. I
  • 46:10 ಒಂದು ದಿನ, ಅಂತಿಯೋಕ್ಯದಲ್ಲಿರುವ ಕ್ರೈಸ್ತರು ಉಪವಾಸ ಮಾಡಿ ಪ್ರಾರ್ಥಿಸುತ್ತಿರುವಾಗ, “ನಾನು ಅವರಿಗೆ ನೇಮಿಸಿದ ಕೆಲಸವನ್ನು ಮಾಡುವಂತೆ ಬಾರ್ನಬನನ್ನು ಮತ್ತು ಸೌಲನನ್ನು ಪ್ರತ್ಯೇಕಪಡಿಸಿರಿ” ಎಂದು ಪವಿತ್ರಾತ್ಮನು ಅವರಿಗೆ ಹೇಳಿದನು. ಆದುದರಿಂದ ಅಂತಿಯೋಕ್ಯದಲ್ಲಿದ್ದ ಸಭೆ ಬಾರ್ನಬ ಮತ್ತು ಸೌಲನ ಮೇಲೆ ಕೈಯಿಟ್ಟು ಅವರಿಗಾಗಿ ಪಾರ್ಥಿಸಿದರು.

ಪದ ಡೇಟಾ:

  • Strong's: G921