kn_tw/bible/names/syria.md

2.9 KiB

ಸಿರಿಯಾ

ಸತ್ಯಾಂಶಗಳು:

ಸಿರಿಯಾ ಎನ್ನುವುದು ಒಂದು ದೇಶವಾಗಿರುತ್ತದೆ, ಇದು ಇಸ್ರಾಯೇಲ್ ಈಶಾನ್ಯ ಭಾಗದಲ್ಲಿ ಕಂಡುಬರುತ್ತದೆ. ಹೊಸ ಒಡಂಬಡಿಕೆಯ ಕಾಲದಲ್ಲಿ ಈ ದೇಶವು ರೋಮಾ ಸಾಮ್ರಾಜ್ಯದ ಆಡಳಿತದಲ್ಲಿರುವ ಸೀಮೆಯಾಗಿದ್ದಿತ್ತು.

  • ಹಳೇ ಒಡಂಬಡಿಕೆಯ ಕಾಲದಲ್ಲಿ ಸಿರಿಯನ್ನರು ಇಸ್ರಾಯೇಲ್ಯರಿಗೆ ಬಲವಾದ ಸೈನ್ಯವಾದ ಶತ್ರುಗಳಾಗಿದ್ದರು.
  • ನಾಮಾನನು ಸಿರಿಯಾ ಸೈನ್ಯಕ್ಕೆ ಅಧಿಪತಿಯಾಗಿದ್ದನು, ಇವನ ಕುಷ್ಠ ರೋಗವು ಪ್ರವಾದಿಯಾದ ಎಲೀಷನಿಂದ ಗುಣವಾಗಿದ್ದಿತ್ತು.
  • ಸಿರಿಯಾ ನಿವಾಸಿಗಳಲ್ಲಿ ಅನೇಕರು ಆರಾಮನ ಸಂತತಿಯಾಗಿದ್ದರು, ಈ ಆರಾಮನು ನೋಹನ ಮಗನಾದ ಶೇಮ್ ಸಂತಾನದವನಾಗಿದ್ದನು.
  • ಸಿರಿಯಾ ರಾಜಧಾನಿಯಾದ ದಮಸ್ಕ ಪಟ್ಟಣದ ಕುರಿತು ಸತ್ಯವೇದದಲ್ಲಿ ಅನೇಕಬಾರಿ ದಾಖಲು ಮಾಡಲ್ಪಟ್ಟಿರುತ್ತದೆ.
  • ಸೌಲನು ಕ್ರೈಸ್ತರನ್ನು ಹಿಂಸಿಸುವುದಕ್ಕೆ ಒಂದು ಪ್ರಣಾಳಿಕೆಯನ್ನು ಹಾಕಿಕೊಂಡು ದಮಸ್ಕ ಪಟ್ಟಣಕ್ಕೆ ಹೊರಟು ಹೋದನು, ಆದರೆ ಯೇಸು ಅವನನ್ನು ನಿಲ್ಲಿಸಿದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಆರಾಮ, ಸೈನ್ಯಾಧಿಪತಿ, ದಮಸ್ಕ, ವಂಶಸ್ಥರು, ಎಲೀಷ, ಕುಷ್ಠ, ನಾಮಾನ, ಹಿಂಸೆ, ಪ್ರವಾದಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H130, H726, H758, H761, H762, H804, H1834, H4601, H7421, G4947, G4948