kn_tw/bible/names/damascus.md

3.2 KiB

ದಮಸ್ಕ

ಸತ್ಯಾಂಶಗಳು:

ದಮಸ್ಕ ಎನ್ನುವುದು ಸಿರಿಯಾ ದೇಶದ ರಾಜಧಾನಿಯಾಗಿತ್ತು. ಇದು ಸತ್ಯವೇದ ಕಾಲದಲ್ಲಿರುವ ಸ್ಥಳದಲ್ಲೇ ಈಗಲೂ ಅಲ್ಲೇ ಇದೆ.

  • ದಮಸ್ಕ ಎನ್ನುವ ಪಟ್ಟಣ ಪ್ರಪಂಚದಲ್ಲಿಯೇ ಜನರು ನಿರಂತರವಾಗಿ ನಿವಾಸವಾಗಿರುವ ಪಟ್ಟಣಗಳಲ್ಲಿ ಒಂದಾಗಿರುತ್ತದೆ ಮತ್ತು ಇದು ತುಂಬಾ ಹಳೇ ಪಟ್ಟಣವಾಗಿರುತ್ತದೆ.
  • ಅಬ್ರಹಾಮನ ಕಾಲದಲ್ಲಿ ದಮಸ್ಕ ಆರಾಮ್ ರಾಜ್ಯದ ರಾಜಧಾನಿಯಾಗಿದ್ದಿತ್ತು (ಈಗ ಸಿರಿಯಾದಲ್ಲಿ ಕಂಡುಬರುತ್ತದೆ).
  • ಹಳೇ ಒಡಂಬಡಿಕೆಯಲ್ಲೆಲ್ಲಾ ಇಸ್ರಾಯೇಲ್ ಜನರು ಮತ್ತು ದಮಸ್ಕ ನಿವಾಸಿಗಳ ಮಧ್ಯೆದಲ್ಲಿ ನಡೆದ ಪರಸ್ಪರ ಸಂಬಂಧಗಳಿಗೆ ಅನೇಕ ಅನುಬಂಧ ವಾಕ್ಯಗಳಿವೆ.
  • ಸತ್ಯವೇದದಲ್ಲಿರುವ ಅನೇಕ ಪ್ರವಾದನೆಗಳು ದಮಸ್ಕ ವಿನಾಶನದ ಕುರಿತಾಗಿ ಹೇಳಲ್ಪಟ್ಟಿವೆ. ಹಳೇ ಒಡಂಬಡಿಕೆ ಕಾಲದಲ್ಲಿ ಅಶ್ಯೂರ್.ದವರು ಪಟ್ಟಣವನ್ನು ನಾಶಗೊಳಿಸಿದಾಗ ಈ ಪ್ರವಾದನೆಗಳು ನೆರವೇರಿಸಲ್ಪಟ್ಟಿರಬಹುದು ಅಥವಾ ಇವು ಭವಿಷ್ಯತ್ತಿನಲ್ಲಿಯೂ ನೆರವೇರಿಕೆಯಾಗಬಹುದು, ಅಂದರೆ ಈ ಪಟ್ಟಣವು ಸಂಪೂರ್ಣವಾಗಿ ವಿನಾಶವಾಗುವುದನ್ನು ನೋಡಬಹುದು.
  • ಹೊಸ ಒಡಂಬಡಿಕೆಯಲ್ಲಿ ಫರಿಸಾಯನಾದ ಸೌಲನು (ಪೌಲನು) ದಮಸ್ಕ ಪಟ್ಟಣದಲ್ಲಿ ಕ್ರೈಸ್ತರನ್ನು ಮುಟ್ಟುಗೋಲು ಹಾಕುವುದಕ್ಕೆ ಹೋದಾಗ, ಯೇಸುವು ಅವನನ್ನು ಸಂದರ್ಶಿಸಿದಾಗ, ಅವನು ವಿಶ್ವಾಸಿಯಾದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಆರಾಮ್, ಅಶ್ಯೂರ್, ನಂಬು, ಸಿರಿಯಾ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1833, H1834, G1154