kn_ta/translate/resources-fofs/01.md

6.2 KiB

ವಿವರಣೆ

ಅಲಂಕಾರಗಳು ಎಂದರೆ ಯಾವುದೇ ವಿಷಯವನ್ನು ಅಕ್ಷರಷಃ ನೇರವಾಗಿ ಹೇಳದೆ ಇತರ ಪದಗಳೊಂದಿಗೆ ಸೇರಿಸಿ ಹೇಳುವುದು

ಅಂದರೆ ಇರುವ ಯಥಾಸ್ಥಿತಿಯ ಅರ್ಥವನ್ನು ಕೊಡುವಂತೆ ನೇರವಾದ ವಿಷಯಕ್ಕೆ ಪದವನ್ನು ಬಳಸುವ ಬದಲು ಇನ್ನೊಂದು ಪದ (ಅಲಂಕಾರ ಪದ) ಬಳಸುವುದು. ಅನೇಕ ರೀತಿಯ ಅಲಂಕಾರ ಪದಗಳು ಇವೆ. ಭಾಷಾಂತರ ಟಿಪ್ಪಣಿಯಲ್ಲಿ ವಾಕ್ಯಭಾಗಗಳಲ್ಲಿ ಬರುವ ಅಲಂಕಾರ ಪದಗಳಿಗೆ ಇರುವ ಅರ್ಥದ ವಿವರಣೆಯನ್ನು ಕೊಟ್ಟಿರುತ್ತಾರೆ. ಕೆಲವೊಮ್ಮೆ ಪರ್ಯಾಯ ಭಾಷಾಂತರವನ್ನು ಕೊಡಲಾಗುತ್ತದೆ. ಇದನ್ನು “ಪರ್ಯಾಯ ಭಾಷಾಂತರ” ಎಂದು ಗುರುತಿಸಲಾಗಿರುತ್ತದೆ.

ಇದರೊಂದಿಗೆ ಭಾಷಾಂತರ ಅಕಾಡೆಮಿಯೊಂದಿಗೆ (tA) ಲಿಂಕ್ ಹೆಚ್ಚಿನ ಮಾಹಿತಿಯನ್ನು ಕೊಡುವುದಲ್ಲದೆ ಅಲಂಕಾರಗಳಿಗೆ ಬೇಕಾದ ಭಾಷಾಂತರ ಕೌಶಲ್ಯಗಳನ್ನು ಕೊಡುತ್ತದೆ. ಮೂಲಭಾಷೆಯಲ್ಲಿರುವ ಅಲಂಕಾರದ ಅರ್ಥವನ್ನು ಗುರುತಿಸಿ ಉತ್ತಮ ಭಾಷಾಂತರ ಮಾಡಲು ಇದು ಅನುಕೂಲ ಕಲ್ಪಿಸುತ್ತದೆ. ನೀವು ಭಾಷಾಂತರ ಮಾಡುವ ಭಾಷೆಯಲ್ಲಿ ಸಮಾನ, ಸೂಕ್ತ ಅಲಂಕಾರ ಪದ ಸಿಗದೆ ಭಾಷಾಂತರ ಮಾಡಲಾಗದಿದ್ದರೆ ಸರಿಯಾಗಿ ಅರ್ಥವಾಗುವಂತೆ ಸೂಕ್ತ ಪದವನ್ನು ನಿಮ್ಮ ಭಾಷೆಯ ರೀತಿಯಲ್ಲೇ ಬಳಸಿ.

ಭಾಷಾಂತರ ಟಿಪ್ಪಣಿಗಳಿಗೆ ಉದಾಹರಣೆಗಳು.

ಅನೇಕರು ಬಂದು ನನ್ನ ಹೆಸರೆತ್ತಿಕೊಂಡು ನಾನು ಕ್ರಿಸ್ತನು ನಾನು ಕ್ರಿಸ್ತನು ಎಂದು ಹೇಳಿ ಎಷ್ಟೋ ಜನರನ್ನು ಮೋಸಗೊಳಿಸುವರು. (ಮಾರ್ಕ್ 13:6 ULB)

  • ನನ್ನ ಹೆಸರೆತ್ತಿ ಸಂಭಾವ್ಯ ಅರ್ಥಗಳು 1. ಪರ್ಯಾಯ ಭಾಷಾಂತರ ನನ್ನ ಅಧಿಕಾರವನ್ನು ಉಪಯೋಗಿಸುವವರು ಅಥವಾ 2.ದೇವರು ನಮ್ಮನ್ನು ಕಳುಹಿಸಿದನು ಎಂದು ಹೇಳುವುದು ಮಿಟೋನಿಮಿ ಮತ್ತು ನುಡಿಗಟ್ಟು ನೋಡಿ ತಿಳಿಯಿರಿ.

ಈ ಟಿಪ್ಪಣಿಯಲ್ಲಿರುವ ಅಲಂಕಾರದ ಹೆಸರು ಮಿಟೋನಿಮಿ. ಇಲ್ಲಿ ಬಳಸಿರುವ "ನನ್ನ ಹೆಸರಿನಲ್ಲಿ" ಎಂಬ ನುಡಿಗುಚ್ಛ /ನುಡಿಗಟ್ಟಿನಲ್ಲಿ ಮಾತನಾಡುತ್ತಿರುವವರ (ಯೇಸುವಿನ ಹೆಸರನ್ನು ಉಲ್ಲೇಖಿಸಿಲ್ಲ) ಆದರೆ ಆತನ ಬಗ್ಗೆ ಮತ್ತು ಆತನ ಅಧಿಕಾರದ ಬಗ್ಗೆ ಇದೆ. ಈ ಟಿಪ್ಪಣಿ ಮಿಟೋನಿಮಿಯನ್ನು ಈ ವಾಕ್ಯಭಾಗದಲ್ಲಿ ಎರಡು ಪರ್ಯಾಯಪದಗಳನ್ನು ಭಾಷಾಂತರದಲ್ಲಿ ವಿವರಿಸಲಾಗಿದೆ. ಭಾಷಾಂತರ ಅಕಾಡೆಮಿ tA ಪುಟದಲ್ಲಿ ಮಿಟೋನಿಮಿ ಬಗ್ಗೆ ಲಿಂಕ್ ಇದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಿಟೋನಿಮಿ ಬಗ್ಗೆ ಕಲಿಯಬಹುದು. ಮತ್ತು ಮಿಟೋನಿಮಿಗಳನ್ನು ಭಾಷಾಂತರಿಸಲು ಸಾಮಾನ್ಯ ಕೌಶಲ್ಯಗಳು. ಏಕೆಂದರೆ ಈ ಪದಗುಚ್ಛವನ್ನು ನುಡಿಗಟ್ಟು ಎಂದು ಕರೆಯಬಹುದು. ಈ ಟಿಪ್ಪಣಿ ಒಂದು ಲಿಂಕ್ ಹೊಂದಿದೆ tA ಪುಟದಲ್ಲಿ ನುಡಿಗಟ್ಟುಗಳ ಬಗ್ಗೆ ವಿವರಿಸಿದೆ.

"ಎಲೈ ಸರ್ಪಜಾತಿಯ ಸಂತಾನವೇ ! ಮುಂದೆ ಬರುವ ದೈವಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ಉಪದೇಶಮಾಡಿದವರು ಯಾರು? (ಲೂಕ 3:7 ULB)

  • ಎಲೈ ಸರ್ಪಜಾತಿಯ ಸಂತಾನವೇ ಇದೊಂದು ರೂಪಕ ಅಲಂಕಾರ. ಜನರುನ್ನು ಇಲ್ಲಿ ಸರ್ಪಗಳಿಗೆ ಹೋಲಿಸಲಾಗಿದೆ. ಅವು ಮರಣಕರವಾದ ಅಥವಾ ಅಪಾಯವಾದ ಸರ್ಪಗಳು ಮತ್ತು ದುಷ್ಟತನವನ್ನು ಪ್ರತಿನಿಧಿಸುತ್ತವೆ. ಪರ್ಯಾಯ ಭಾಷಾಂತರ "ಎಲೈದುಷ್ಟ, ವಿಷಕಾರಿ ಸರ್ಪಗಳೇ ಅಥವಾ ವಿಷಕಾರಿ ಸರ್ಪಗಳಿಂದ ಜನರು ದೂರವಿರುವಂತೆ ನಿಮ್ಮಿಂದಲೂ ದೂರವಿರಬೇಕು.(Metaphor) ನೋಡಿ ತಿಳಿಯಿರಿ.

ಈ ಟಿಪ್ಪಣಿಯಲ್ಲಿ ಇರುವ ಅಲಂಕಾರವನ್ನುರೂಪಕ ಅಲಂಕಾರ ಎಂದು ಕರೆಯುತ್ತಾರೆ. ಇಲ್ಲಿರುವ ಟಿಪ್ಪಣಿ ರೂಪಕ ಅಲಂಕಾರ ಮತ್ತು ಎರಡು ಪರ್ಯಾಯ ಭಾಷಾಂತರವನ್ನು ವಿವರಿಸುತ್ತದೆ. ಇದರ ನಂತರ tA ಪುಟದಲ್ಲಿ ರೂಪಕ ಅಲಂಕಾರದ ಬಗ್ಗೆ ಲಿಂಕ್ ನೀಡಲಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ ರೂಪಕ ಅಲಂಕಾರ ಮತ್ತು ಅವುಗಳನ್ನು ಭಾಷಾಂತರಿಸಲು ಬೇಕಾದ ಸಾಮಾನ್ಯ ಕೌಶಲ್ಯಗಳ ಬಗ್ಗೆ ಕಲಿಯಬಹುದು.