kn_tw/bible/other/wolf.md

31 lines
3.4 KiB
Markdown

# ತೋಳ, ತೋಳಗಳು, ಅಡಗಿ ನಾಯಿಗಳು
## ಪದದ ಅರ್ಥವಿವರಣೆ:
ತೋಳ ಎನ್ನುವುದು ಅಡವಿ ನಾಯಿಗೆ ಸಮಾನವಾಗಿರುವ ಅತೀ ಕ್ರೂರವಾಗಿ ಮಾಂಸ ತಿನ್ನುವ ಒಂದು ಪ್ರಾಣಿಯಾಗಿರುತ್ತದೆ.
* ತೋಳಗಳು ಸಹಜವಾಗಿ ಗುಂಪು ಗುಂಪುಗಳಾಗಿ ಹೋಗಿ ಬೇಟೆ ಮಾಡುತ್ತವೆ ಮತ್ತು ಅತೀ ಜಾಣತನದಿಂದ ರಹಸ್ಯವಾಗಿ ತಮ್ಮ ಬೇಟೆಯನ್ನು ಕೊಂಬೆಗಳಿಂದ ಮಾಡುತ್ತವೆ.
* ಸತ್ಯವೇದದಲ್ಲಿ “ತೋಳಗಳು” ಎನ್ನುವ ಪದವನ್ನು ಕುರಿಗಳಿಗೆ ಹೋಲಿಸಲ್ಪಟ್ಟ ವಿಶ್ವಾಸಿಗಳನ್ನು ನಾಶ ಮಾಡುವ ಸುಳ್ಳು ಪ್ರವಾದಿಗಳನ್ನು ಅಥವಾ ಸುಳ್ಳು ಬೋಧಕರನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ. ಸುಳ್ಳು ಬೋಧನೆಯು ಜನರಿಗೆ ಹಾನಿಯನ್ನು ಮಾಡುವ ತಪ್ಪು ಕಾರ್ಯಗಳನ್ನು ನಂಬುವಂತೆ ಮಾಡುತ್ತದೆ.
* ಈ ಹೋಲಿಕೆಯು ಕುರಿಗಳು ವಿಶೇಷವಾಗಿ ತೋಳಗಳಿಂದ ದುರ್ಬಲವಾದ ರೀತಿಯಲ್ಲಿ ಧಾಳಿ ಮಾಡಿ, ಅವುಗಳನ್ನು ತಿನ್ನುತ್ತವೆಯೆನ್ನುವ ಸತ್ಯಾಂಶ ಮೇಲೆ ಆಧಾರವಾಗಿರುತ್ತದೆ, ಯಾಕಂದರೆ ಅವು ಬಲಹೀನ ಪ್ರಾಣಿಗಳು ಮತ್ತು ತಮ್ಮನ್ನು ತಾವು ಸಂರಕ್ಷಿಸಿಕೊಳ್ಳುವುದಿಲ್ಲ.
## ಅನುವಾದ ಸಲಹೆಗಳು:
* ಈ ಪದವನ್ನು ‘ಅಡವಿ ನಾಯಿ” ಅಥವಾ “ಅಡವಿ ಪ್ರಾಣಿ” ಎಂದೂ ಅನುವಾದ ಮಾಡಬಹುದು.
* ಅಡವಿ ನಾಯಿಗಳಿಗೆ “ನರಿ” ಅಥವಾ “ಉತ್ತರ ಅಮೇರಿಕಾದ ತೋಳ” ಎಂದೆನ್ನುವ ಬೇರೆ ಹೆಸರುಗಳಾಗಿರುತ್ತವೆ.
* ಜನರನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಿದಾಗ, ಇದನ್ನು “ಕುರಿಗಳ ಮೇಲೆ ಧಾಳಿ ಮಾಡುವ ಪ್ರಾಣಿಗಳಂತೆ ಜನರನ್ನು ಹಾನಿ ಮಾಡುವ ದುಷ್ಟ ಜನರು” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ದುಷ್ಟ](../kt/evil.md), [ಸುಳ್ಳು ಪ್ರವಾದಿ](../other/falseprophet.md), [ಕುರಿಗಳು](../other/sheep.md), [ಬೋಧಿಸು](../other/teach.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.20:28-30](rc://*/tn/help/act/20/28)
* [ಯೆಶಯಾ.11:6-7](rc://*/tn/help/isa/11/06)
* [ಯೋಹಾನ.10:11-13](rc://*/tn/help/jhn/10/11)
* [ಲೂಕ.10:3-4](rc://*/tn/help/luk/10/03)
* [ಮತ್ತಾಯ.07:15-17](rc://*/tn/help/mat/07/15)
* [ಜೆಫನ್ಯ.03:3-4](rc://*/tn/help/zep/03/03)
## ಪದ ಡೇಟಾ:
* Strong's: H2061, H3611, G3074