kn_tw/bible/other/winnow.md

28 lines
4.0 KiB
Markdown

# ತೂರು, ತೂರುವುದು, ತೂರಲ್ಪಟ್ಟಿದೆ, ತೂರುತ್ತಾಯಿರುವುದು, ಸೋಸು, ಸೋಸುವುದು
## ಪದದ ಅರ್ಥವಿವರಣೆ:
“ತೂರು” ಮತ್ತು “ಸೋಸು” ಎನ್ನುವ ಪದಗಳು ಕೆಲಸಕ್ಕೆಬಾರದವುಗಳಿಂದ ಧಾನ್ಯವನ್ನು ಬೇರ್ಪಡಿಸುವುದು ಎಂದರ್ಥ. ಸತ್ಯವೇದದಲ್ಲಿ ಈ ಎರಡು ಪದಗಳು ಕೂಡ ಜನರನ್ನು ವಿಭಜಿಸುವುದನ್ನು ಅಥವಾ ಬೇರ್ಪಡಿಸುವುದನ್ನು ಸೂಚಿಸುವುದಕ್ಕೆ ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸಲ್ಪಟ್ಟಿರುತ್ತವೆ.
* “ತೂರು” ಎನ್ನುವ ಪದಕ್ಕೆ ಗಾಳಿಯಲ್ಲಿ ಹೊಟ್ಟು ಮತ್ತು ಧಾನ್ಯಗಳೆರಡನ್ನು ಹಾರಿಸುವುದರ ಮೂಲಕ ಸಸ್ಯಗಳಿಂದ ಬೇಕಾಗಿರದವುಗಳಿಂದ ಧಾನ್ಯವನ್ನು ಬೇರ್ಪಡಿಸುವುದು ಎಂದರ್ಥ.
* “ಸೋಸು” ಎನ್ನುವ ಪದವು ಧೂಳು ಅಥವಾ ಕಲ್ಲುಗಗಳನ್ನು ಬೇರ್ಪಡಿಸುವುದಕ್ಕೆ ಜರಡಿಯಲ್ಲಿ ತೂರು ಹಾಕಿದ ಧಾನ್ಯವನ್ನು ಅಲುಗಾಡಿಸುವುದನ್ನು ಸೂಚಿಸುತ್ತದೆ.
* ಹಳೇ ಒಡಂಬಡಿಕೆಯಲ್ಲಿ “ತೂರು” ಅಥವಾ “ಸೋಸು” ಎನ್ನುವ ಪದಗಳನ್ನು ಅನೀತಿವಂತ ಜನರಿಂದ ನೀತಿವಂತರಾಗಿರುವ ಜನರನ್ನು ಬೇರ್ಪಡಿಸುವ ಕಠಿಣ ಕಾರ್ಯವನ್ನು ವಿವರಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತವೆ.
* ಯೇಸು ಮತ್ತು ತನ್ನ ಶಿಷ್ಯರು ತಮ್ಮ ನಂಬಿಕೆಯಲ್ಲಿ ಪರೀಕ್ಷಿಸಲ್ಪಡುವುದರ ಕುರಿತಾಗಿ ಯೇಸು ಸೀಮೋನ ಪೇತ್ರನಿಗೆ ಹೇಳುತ್ತಿರುವಾಗ “ಸೋಸು” ಎನ್ನುವ ಪದವನ್ನು ಉಪಯೋಗಿಸಿರುತ್ತಾನೆ.
* ಈ ಪದಗಳನ್ನು ಅನುವಾದ ಮಾಡುವುದಕ್ಕೆ ಈ ಚಟುವಟಿಕೆಗಳನ್ನು ಸೂಚಿಸುವ ಪದಗಳು ಅನುವಾದ ಮಾಡುವ ಭಾಷೆಯಲ್ಲಿದ್ದರೆ ಉಪಯೋಗಿಸಿರಿ; ಬಹುಶಃ ಅನುವಾದಗಳು “ಅಲುಗಾಡಿಸುವುದು” ಅಥವಾ “ಗಾಳಿ ಹಾಕು” ಎಂದಾಗಿರಬಹುದು. ತೂರುವುದು ಅಥವಾ ಸೋಸುವುದು ಗೊತ್ತಿಲ್ಲದಿದ್ದರೆ, ಈ ಪದಗಳನ್ನು ಧೂಳಿ, ಹೊಟ್ಟು ಎನ್ನುವವುಗಳಿಂದ ಧಾನ್ಯವನನ್ನು ಬೇರ್ಪಡಿಸುವ ವಿಧಾನವನ್ನು ಸೂಚಿಸುವುದರ ಮೂಲಕ ಅಥವಾ ಈ ಪದ್ಧತಿಯನ್ನು ವಿವರಿಸುವುದರ ಮೂಲಕ ಅನುವಾದ ಮಾಡಬಹುದು.
(ಅನುವಾದ ಸಲಹೆಗಳು: [ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
(ಈ ಪದಗಳನ್ನು ಸಹ ನೋಡಿರಿ : [ಹೊಟ್ಟು](../other/chaff.md), [ಧಾನ್ಯ](../other/grain.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಯೆಶಯಾ.21:10](rc://*/tn/help/isa/21/10)
* [ಲೂಕ.22:31-32](rc://*/tn/help/luk/22/31)
* [ಮತ್ತಾಯ.03:10-12](rc://*/tn/help/mat/03/10)
* [ಜ್ಞಾನೋ.20:7-8](rc://*/tn/help/pro/20/07)
* [ರೂತಳು.03:1-2](rc://*/tn/help/rut/03/01)
## ಪದ ಡೇಟಾ:
* Strong's: H2219, H5128, H5130, G4425, G4617