kn_tw/bible/other/voice.md

3.2 KiB

ಸ್ವರ, ಸ್ವರಗಳು

ಪದದ ಅರ್ಥವಿವರಣೆ:

“ಸ್ವರ” ಎನ್ನುವ ಪದವು ಅನೇಕಬಾರಿ ಮಾತನಾಡುವುದನ್ನು ಅಥವಾ ಏನಾದರೊಂದನ್ನು ಸಂಭಾಷಿಸುವುದನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.

  • ಮನುಷ್ಯರು ಮಾತನಾಡುವ ರೀತಿಯಲ್ಲಿ ದೇವರು ಮಾತನಾಡದಿದ್ದರೂ, ಆತನು ತನ್ನ ಸ್ವರವನ್ನು ಉಪಯೋಗಿಸಿದ್ದಾನೆಂದು ಹೇಳಲ್ಪಟ್ಟಿದೆ.
  • “ಕರ್ತನ ಮಾರ್ಗವನ್ನು ಸಿದ್ಧಪಡಿಸಿರಿ” ಎಂದು ಹೇಳುವ ಸ್ವರವನ್ನು ಅರಣ್ಯದಲ್ಲಿ ಕೇಳಿದೆನು” ಎನ್ನುವ ಮಾತಿನಲ್ಲಿರುವಂತೆಯೇ, ಈ ಪದವು ಸಂಪೂರ್ಣ ವ್ಯಕ್ತಿಯನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. ಈ ಮಾತನ್ನು “ಒಬ್ಬ ವ್ಯಕ್ತಿ ಅರಣ್ಯದೊಳಗಿಂದ ಕೂಗುತ್ತಿರುವ ಸ್ವರವನ್ನು ಕೇಳಿಸಿಕೊಳ್ಳುವುದು” ಎಂದೂ ಅನುವಾದ ಮಾಡಬಹುದು. (ನೋಡಿರಿ: ಲಾಕ್ಷಣಿಕ ಪ್ರಯೋಗ)
  • “ಯಾರಾದರೊಬ್ಬರ ಸ್ವರವನ್ನು ಕೇಳು” ಎನ್ನುವ ಮಾತನ್ನು “ಯಾರಾದರೊಬ್ಬರು ಮಾತನಾಡುತ್ತಿರುವಾಗ ಕೇಳು” ಎಂದೂ ಅನುವಾದ ಮಾಡಬಹುದು.
  • ಕೆಲವೊಂದುಬಾರಿ “ಸ್ವರ” ಎನ್ನುವ ಪದವನ್ನು ನಿಜವಾಗಿ ಮಾತನಾಡದ ವಸ್ತುಗಳಿಗೋಸ್ಕರ ಉಪಯೋಗಿಸಲ್ಪಟ್ಟಿರಬಹುದು, ಆಕಾಶಗಳ “ಸ್ವರವು” ದೇವರ ಅದ್ಭುತ ಕಾರ್ಯಗಳನ್ನು ವಿವರಿಸುತ್ತಿದೆ ಎಂದು ದಾವೀದನು ತನ್ನ ಕೀರ್ತನೆಗಳಲ್ಲಿ ವಿವರಿಸಿದ ಸಂದರ್ಭವನ್ನು ನೋಡಬಹುದು. ಇದನ್ನು “ಅವುಗಳ ವೈಭವವು ದೇವರು ಎಷ್ಟು ದೊಡ್ಡವನೆಂದು ಸ್ಪಷ್ಟವಾಗಿ ತೋರಿಸುತ್ತವೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕರೆ, ಪ್ರಕಟನೆ, ವೈಭವ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H6963, H7032, H7445, H8193, G2906, G5456, G5586