kn_tw/bible/other/thresh.md

27 lines
3.3 KiB
Markdown

# ತುಳಿಸು, ತುಳಿಸುವುದು, ತುಳಿಸಿದೆ, ತುಳಿಸುತ್ತಿರುವುದು
## ಪದದ ಅರ್ಥವಿವರಣೆ:
“ತುಳಿಸು” ಮತ್ತು “ತುಳಿಸುತ್ತಿರುವುದು” ಎನ್ನುವ ಪದಗಳನ್ನು ಗೋಧಿ ಗಿಡಗಳಿಂದ ಮೊಟ್ಟ ಮೊದಲಾಗಿ ಗೋಧಿಯನ್ನು ಬೇರ್ಪಡಿಸುವ ವಿಧಾನವನ್ನು ಸೂಚಿಸುತ್ತವೆ.
* ಗೋಧಿ ಗಿಡಗಳನ್ನು ತುಳಿಸುವುದರ ಮೂಲಕ ಗೋಧಿ ಹುಲ್ಲು ಮತ್ತು ಕೊಯ್ಲಿನಿಂದ ಧಾನ್ಯವು ಬೇರೆಯಾಗುತ್ತದೆ. ಇದಾದನಂತರ, ಧಾನ್ಯವನ್ನು ಸಂಪೂರ್ಣವಾಗಿ ಕಡ್ಡಿ ಕಸದಿಂದ ಬೇರ್ಪಡಿಸುವುದಕ್ಕೆ “ತೂರುತ್ತಾರೆ”, ಕೇವಲ ತಿನ್ನುವದಕ್ಕೆ ಯೋಗ್ಯವಾಗುವ ಧಾನ್ಯದ ಭಾಗವನ್ನು ಮಾತ್ರ ಉಳಿಸಿಕೊಳ್ಳುತ್ತಾರೆ.
* ಸತ್ಯವೇದ ಕಾಲಗಳಲ್ಲಿ “ತುಳಿಸುವ ನೆಲ” ಎನ್ನುವುದು ಚಪಟವಾದ ಕಲ್ಲುಗಳಿರುವ ದೊಡ್ಡ ಸ್ಥಳ ಅಥವಾ ದುಮ್ಮು ಧೂಳಿಯ ಧಾನ್ಯವನ್ನು ಇರಿಸುವ ಗಟ್ಟಿಯಾದ ಸ್ಥಳ, ಧಾನ್ಯವನ್ನು ಬೇರ್ಪಡಿಸಿ ಅದರ ಸೊಪ್ಪನ್ನು ತುಳಿಸುವ ಮಟ್ಟದ ಸ್ಥಳವಾಗಿರುತ್ತದೆ.
* “ತುಳಿಸುವ ಬಂಡಿ” ಅಥವಾ “ತುಳಿಸುವ ಚಕ್ರ” ಎನ್ನುವುದು ಕೆಲವೊಂದುಬಾರಿ ಧಾನ್ಯವನ್ನು ತಿಳಿಸುವುದಕ್ಕೆ ಮತ್ತು ಅದರ ಸೊಪ್ಪನ್ನು ಬೇರ್ಪಡಿಸುವುದಕ್ಕೆ ಸಹಾಯಕವಾಗುವುದಕ್ಕೆ ಉಪಯೋಗಿಸಲಾಗುತ್ತದೆ.
* “ತುಳಿಸುವ ಜಾರುಬಂಡಿ” ಅಥವಾ “ತುಳಿಸುವ ಹಲಗೆ” ಎನ್ನುವುದು ಧಾನ್ಯವನ್ನು ಬೇರ್ಪಡಿಸುವುದಕ್ಕೆ ಉಪಯೋಗಿಸುವ ಉಪಕರಣವಾಗಿರುತ್ತದೆ. ಇದನ್ನು ಮರದ ಹಲಗೆಗಳಿಂದ ತಯಾರಿಸಿರುತ್ತಾರೆ, ಇವುಗಳ ತುದಿ ಭಾಗಗಳಿಗೆ ಚೂಪಾದ ಕಂಬಿಗಳನ್ನು ಜೋಡಿಸಿರುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : [ಹೊಟ್ಟು](../other/chaff.md), [ಧಾನ್ಯ](../other/grain.md), [ತೂರು](../other/winnow.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಪೂರ್ವ.03:1-3](rc://*/tn/help/2ch/03/01)
* [2 ಅರಸ.13:6-7](rc://*/tn/help/2ki/13/06)
* [2 ಸಮು.24:15-16](rc://*/tn/help/2sa/24/15)
* [ದಾನಿ.02:34-35](rc://*/tn/help/dan/02/34)
* [ಲೂಕ.03:17](rc://*/tn/help/luk/03/17)
* [ಮತ್ತಾಯ.03:10-12](rc://*/tn/help/mat/03/10)
* [ರೂತ .03:1-2](rc://*/tn/help/rut/03/01)
## ಪದ ಡೇಟಾ:
* Strong's: H212, H4173, H1637, H1758, H1786, H1869, H2251, G248